ಬಿತ್ತನೆ ಬೀಜ ಮತ್ತು ರಸಗೊಬ್ಬರ ರೈತರಿಗೆ ತೊಂದರೆ ಕ್ರಮ ವಹಿಸುವಂತೆ ಮನವಿ.

ಕೂಡ್ಲಿಗಿ ಜೂನ್.04

ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಕೃಷಿಕ ಸಮಾಜದ ಸಭೆ ಜರುಗಿಸಿ ಈ ಮುಂಗಾರು ಹಂಗಾಮಿಗೆ ರಸಗೊಬ್ಬರ ಬೀಜ ರೈತರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕ್ರಮ ವಹಿಸಲು ಕೃಷಿಕ ಸಮಾಜದ ಸಭೆಯಲ್ಲಿ ತೀರ್ಮಾನಿಸಲಾಯಿತು ಕೃಷಿ ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್ ಮಾತನಾಡಿ.ಈ ಬಾರಿ ಮುಂಗಾರು ಬೇಗನೆ ಕಾಲಿಟ್ಟಿದ್ದು ನಮ್ಮ ತಾಲೂಕಿನ ಅತ್ಯಂತ ಅತಿ ಹೆಚ್ಚು ಮಳೆಯಾಗಿದೆ ಆದ್ದರಿಂದ ಜೋಳದ ಬೀಜ ಮೆಕ್ಕೆಜೋಳ ತೊಗರಿ ಶೇಂಗಾ ಎಲ್ಲಾ ರೀತಿಯ ಬೀಜಗಳನ್ನು ರೈತರಿಗೆ ತೊಂದರೆ ಯಾಗದಂತೆ ದಾಸ್ತಾನು ಮಾಡಲಾಗಿದೆ. ರೈತರು ನಮ್ಮ ಇಲಾಖೆಯಿಂದ ಸಿಗುವ ಬೀಜಗಳನ್ನು ಸಹಾಯಧನದಲ್ಲಿ ಖರೀದಿ ಮಾಡಿ ಸಕಾಲಕ್ಕೆ ಬಿತ್ತನೆ ಮಾಡಲು ರೈತರಿಗೆ ಕರೆ ನೀಡಿದರು. ಅದೇ ರೀತಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ವಿಶ್ವನಾಥ ರೇಷ್ಮೆ ಇಲಾಖೆಯ ಅಧಿಕಾರಿಗಳಾದ ಲಕ್ಷ್ಮಿ ನಾರಾಯಣ ಇವರು ಕೂಡ ಸಭೆಯಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತರಕಾರಿ ಬೀಜಗಳ ಕಿಟ್ಟನ್ನು ಉಚಿತವಾಗಿ ವಿತರಿಸಲಾಗುವುದು. ಎಂದರು ಮತ್ತು ಅನೇಕ ನುಗ್ಗೆ ಬಾಳೆ ಪಪ್ಪಾಯಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ನರೇಗಾದಡಿ ಸಹಾಯಧನವನ್ನು ವಿತರಿಸಲಾಗುವುದು. ರೇಷ್ಮೆ ಬೆಳೆಗಾರರಿಗೂ ಕೂಡ ಒಂದು ಎಕರೆ ನಾಟಿ ಮಾಡಿದರೆ ಅದಕ್ಕೂ ಕೂಡ ಸಹಾಯಧನ ವಿತರಿಸಲಾಗುವುದು. ಕೃಷಿಕ ಸಮಾಜದ ನಿರ್ದೇಶಕರಾದ ಎಮ್ ಬಸವರಾಜ್ ಅವರು ಮಾತನಾಡಿ ರೈತರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಸಕಾಲಕ್ಕೆ ಸರಿಯಾಗಿ ಬೀಜ ಮತ್ತು ಗೊಬ್ಬರಗಳನ್ನು ವಿತರಣೆ ಮಾಡಬೇಕೆಂದು ಹೇಳಿದರು. ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದನಗೌಡ ಇವರು ಮಾತನಾಡಿ ಕಾಳ ಸಂತೆಯಲ್ಲಿ ಗೊಬ್ಬರ ಬೀಜ ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಕೃಷಿಕ ಸಮಾಜದ ಉಪಾಧ್ಯಕ್ಷರಾದ ಜಂಬಣ್ಣ ಇವರು ಮಾತನಾಡಿ ನಾವು ನಮ್ಮ ಎಫ್ ಸಿ ಓ ಮುಖಾಂತರ ಗೊಬ್ಬರವನ್ನು ವಿತರಣೆ ಮಾಡುತ್ತಿದ್ದೇವೆ ನಮ್ಮ ತಾಲೂಕಿನಲ್ಲಿರುವ ಎಲ್ಲಾ ಎಫ್. ಪಿ. ಓ. ಗಳು ಗೊಬ್ಬರಗಳನ್ನು ತರಿಸಿಕೊಂಡು ರೈತರಿಗೆ ಆಯಾ ಭಾಗದಲ್ಲಿ ವಿತರಣೆ ಮಾಡಿದರೆ. ಆತ್ಮ ಯೋಜನೆಯ ಶ್ರವಣ್ ಕುಮಾರ್ ಮಾತನಾಡಿ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಸಮಗ್ರ ಕೃಷಿಯನ್ನು ಮಾಡಿ ಹೆಚ್ಚು ಲಾಭಗಳಿಸಿ ಕೊಳ್ಳಬಹುದು ಒಂದೇ ಬೆಳೆಗೆ ಮಾರು ಹೋಗದೆ ವಿವಿಧ ಬೆಳೆಗಳನ್ನು ಮತ್ತು ಅಡಿಕೆಗಳನ್ನು ಹಾಕುವುದರ ಮುಖಾಂತರ ರೈತರು ಲಾಭಗಳಿಸಬಹುದು.ಎಂದರು. ಕೃಷಿಕ ಸಮಾಜದ ಕೊಟ್ರೇಶಪ್ಪ, ಚಂದ್ರಯ್ಯ ಸ್ವಾಮಿ,ಸಿದ್ದಪ್ಪ ಲಾಯರ್ ಲಕ್ಷ್ಮಿ ದೇವಿ ಸದಸ್ಯರು ಭಾಗವಹಿಸಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button