“ಪರಿಸರ ಪ್ರೇಮಿಯಾಗು”…..

ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು
ಹಸಿರನ್ನು ಉಳಿಸಲು ಬೇಗ ಅಣಿಯಾಗಬೇಕು
ಒಬ್ಬರಿಗೆ ಒಂದರಂತೆ ಸಸಿಯ ನೆಡಿ ಸಾಕು
ಗೊಬ್ಬರ ನೀರಿರೆದು ಅದ ಬೆಳಸಬೇಕು.
ಪರಿಸರ ನಾಶವು ಕೆಡಕನು ತರುವುದು
ಮರ-ಗಿಡ ಬೆಳೆಸಲು ಪುಣ್ಯ ಸಿಗುವುದು
ಪರಿಸರ ಸಂರಕ್ಷಣೆ ಕರ್ತವ್ಯವಾಗಿರುವುದು
ಸೃಷ್ಟಿಯು ದೇವರ ವರವಾಗಿರುವುದು.
ಮಾನವನ ದುರಾಸೆಯಿಂದ ಪರಿಸರ
ಹಾಳಾಗುತಿದೆ
ಇದು ಮಾನವನಿಂದಲೇ ಸರಿಯಾಗಬೇಕಿದೆ
ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ
ಮೂಡಿಸಬೇಕಾಗಿದೆ
ಇಲ್ಲದಿದ್ದರೆ ಮುಂದೆ ಹೆಚ್ಚಿನ ಅಪಾಯ
ಎದುರಾಗಲಿದೆ.
ನಿಸರ್ಗದ ಉಳಿವಿಗೆ ಬೆಳವಣಿಗೆಗೆ
ಕಾರ್ಯೋನ್ಮುಖನಾಗು
ಸಸಿನೆಟ್ಟು ನೀರಸುರಿಸಿ ಬೆಳೆಸಲು ಸಾಧಕನಾಗು
ಮುತ್ತಿನ ಮಳೆ ಹನಿ ಬೀಳಲು ಸಹಾಯಕನಾಗು
ಮುಂದಿನ ಪೀಳಿಗೆಗೆ ಪ್ರೇರಕನಾಗು ಪರಿಸರ
ಪ್ರೇಮಿಯಾಗು.
*****
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ