ಪಿ.ಸಿ ಗದ್ದಿಗೌಡರ ಐದನೇಯ ಬಾರಿಗೆ ಗೆಲುವಿನ ವಿಜಯೋತ್ಸವ ಆಚರಿಸಿದ – ಮಾಜಿ ಶಾಸಕರು ಹಾಗೂ ಕಾರ್ಯಕರ್ತರು.

ಹುನಗುಂದ ಜೂನ್.04

ಬಾಗಲಕೋಟ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಂಯುಕ್ತ ಪಾಟೀಲ ಸೋಲಿಸುವ ಮೂಲಕ ಐದನೆಯ ಬಾರಿಗೆ ವಿಜಯ ಸಾಧಸಿದ ಬೆನ್ನಲ್ಲೆ ಹುನಗುಂದ ಪಟ್ಟಣದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಅದ್ದೂರಿ ವಿಜಯೋತ್ಸವವನ್ನು ಆಚರಿಸಲಾಯಿತು.ಮಂಗಳವಾರ ಲೋಕಸಭೆ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದ್ದಂತೆ ಪಿ.ಸಿ.ಗದ್ದಿಗೌಡರ ಐದನೆಯ ಬಾರಿಯ ಗೆಲ್ಲುವನ್ನು ಹೊತ್ತುಕೊಂಡು ಹುನಗುಂದ ಪಟ್ಟಣದ ಶ್ರೀ ವಿಜಯ ಮಹಾಂತೇಶ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿ ಶ್ರೀ ವಿಜಯಮಹಾಂತ ಶ್ರೀಗಳ ಪುತ್ಥಳಿಗೆ ಹೂವು ಮಾಲೆ ಹಾಕಿ ನಂತರ ಪಕ್ಷದ ಮುಖಂಡರು, ಕಾರ್ಯಕರ್ತರು, ದೊಡ್ಡನಗೌಡರ ಪಾಟೀಲರಿಗೆ ಹೂಮಾಲೆ ಹಾಕಿ, ಗುಲಾಲ್ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗದ್ದಿಗೌಡರ ಒಬ್ಬ ಮುತ್ಸದ್ದಿತನ ನಾಯಕತ್ವಕ್ಕೆ ಸಿಕ್ಕ ಜಯ ಇದಾಗಿದೆ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅವರ ಬಗ್ಗೆ ಹೀನಾಯ ಪದಗಳನ್ನು ಬಳಸಿದ್ದರೂ ಸಹಿತ ಕಾಂಗ್ರೆಸ್ಸಿಗರ ಮಾತಿಗೆ ಕಿವಿಗೊಡದ ಮತದಾರ ಪ್ರಭುಗಳು ಗದ್ದಿಗೌಡರ ಅಭಿವೃದ್ದಿಗೆ ಮನಸೋತು ಸತತವಾಗಿ 5 ನೇ ಬಾರಿಗೆ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಗೆಲ್ಲುವಿಗೆ ಶ್ರಮಿಸಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ನಾನು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತನೆ, ಬಾಗಲಕೋಟಿ ಲೋಕಸಭೆ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿ ನಡೆಯಲಿಲ್ಲ, ಇಲ್ಲಿ ಮೋದಿ, ಗದ್ದಿಗೌಡರ ಅಭಿವೃದ್ದಿ ಕಾರ್ಯ ಕೆಲಸ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಖ್ಯಾತ ವೈಧ್ಯ ಡಾ. ಮಹಾಂತೇಶ ಕಡಪಟ್ಟಿ,ಡಾ. ಬಸವರಾಜ ಕಡಿವಾಲ, ಅಮರೇಶ ಹವಾಲ್ದಾರ, ರಾಜಕುಮಾರ ಬಾದವಾಡಗಿ, ಅಪ್ಪು ಆಲೂರ, ಮುತ್ತಣ್ಣ ರೋಣದ, ವಿರುಪಾಕ್ಷ ಹಿರೇಮಠ, ಮಂಜು ಆಲೂರ, ಮುನ್ನಾ ಬಾಗವಾನ, ಶ್ರೀಶೈಲ ಹಂಡಿ, ಮಹಾಂತೇಶ ಚಿತ್ತವಾಡಗಿ, ಮಲ್ಲು ಚೂರಿ, ರಮೇಶ ಗೊವಿನಗಿಡದ, ಮಹಾಂತೇಶ ಹಂಡಿ ಸೇರಿದಂತೆ ಇತರರು ಇದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button