ಜೈ ಹಿಂದ್ ಭಾರ್ಗವ” ಗೆ – ಭರದಿಂದ ಚಿತ್ರೀಕರಣ ತಯ್ಯಾರಿ.
ಬೆಂಗಳೂರು ಆ.23





ಮಾಯಮ್ಮ ಸಿನಿ ಕ್ರಿಯೇಶನ್ಸ್ ಬೆಂಗಳೂರು ಅರ್ಪಿಸುವ “ಜೈ ಹಿಂದ್ ಭಾರ್ಗವ” ಕನ್ನಡ ಚಲನ ಚಿತ್ರ ಕಳೆದೊಂದು ವಾರದಿಂದ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ ಚಿತ್ರ ತಂಡ. ಭಾರತದ ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ಮತ್ತು ಆಪರೇಶನ್ ಸಿಂಧೂರದ ಕಥಾ ವಸ್ತು ಹೊಂದಿದ್ದು, ಸತತ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ಹಾಡುಗಳಿಲ್ಲ, ಬೆಂಗಳೂರು, ಚಿಕ್ಕಬಳ್ಳಾಪೂರ, ಮೈಸೂರು, ಡೊಡ್ಡ ಬಳ್ಳಾಪೂರ, ಘಾಟಿ ಸುಬ್ರಮಣ್ಯ ಮೊದಲಾದ ಕಡೆ ಚಿತ್ರೀಕರಣ ನಡೆಸಲಿದೆ ಎಂದು ನಿರ್ದೇಶಕ ಎನ್.ಟಿ ಜಯರಾಮ್ ತಿಳಿಸಿದ್ದಾರೆ.

ಈ ಚಿತ್ರದ ತಾರಾಗಣದಲ್ಲಿ ಮಾಸ್ಟರ್ ಚಿನ್ಮಯ್, ಮಾಸ್ಟರ್ ನಿಶ್ಚಲ್, ಕುಮಾರಿ ಪೂರ್ವಿಕ, ಚಲನ ಚಿತ್ರ ನಿರ್ದೇಶಕರಾದ ವಸಂತ್‌ಕುಮಾರ್, ರೋಹಿಣಿ ಮೈಸೂರ್, ಯಶೋದಮ್ಮ, ಮನು, ರವಿ, ಸುಪ್ರೀತ್, ಮಂಜುರ್, ಗೀತಾನಂದಕುಮಾರ್ ಹಾಗೂ, ವಿಶೇಷ ಸೈನ್ಯಾಧಿಕಾರಿ ಪಾತ್ರದಲ್ಲಿ ಚಲನಚಿತ್ರ ನಟ-ನಿರ್ದೇಶಕರಾದ ಹರಿಹರನ್.ಬಿ ಪಿ ಅವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಭುವನ್ ರೆಡ್ಡಿ, ವರ್ಣಾಲಂಕಾರ ಕಾಂತರಾಜು, ಸಂಕಲನ ಮುತ್ತುರಾಜ್.ಟಿ, ಸಂಗೀತ ಶಿವಸತ್ಯ, ಪತ್ರಿಕಾ ಸಂಪರ್ಕ ಕಾರ್ತಿಕ್, ಡಾ.ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ಮಾಣ ನಿರ್ವಹಣೆ ಜವಾಬ್ದಾರಿ ಬೆಳ್ಳೂ ರಾಜು, ಸಹ ನಿರ್ದೇಶನ ಎಸ್. ಶ್ರೀನಿವಾಸ್ ಅವರದಿದೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆಯನ್ನು ಬರೆದು ಎನ್.ಟಿ ಜಯರಾಮ್ ರೆಡ್ಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿರ್ಮಾಪಕರು ಕುಮಾರಿ ತನ್ಮಯ್.ಎನ್ ಆಗಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಿ ನವಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರ ತಂಡದ್ದಾಗಿದೆ.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬