ಐ ಎ ಎಸ್. ಐ ಪಿ ಎಸ್ ಲೋಕಾಯುಕ್ತ ಅಧಿಕಾರಿಗಳ ಆದೇಶಕ್ಕೂ ಬೆಲೆ ಕೊಡದ – ಕಂಪ್ಲಿಯ ಸರ್ಕಾರಿ ಅಧಿಕಾರಿಗಳು.
ಬಳ್ಳಾರಿ ಜೂನ್.07

ತಾಲೂಕಾ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಲೋಕಾಯುಕ್ತ ರಿಂದ ಗುರುವಾರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಬಳ್ಳಾರಿ ಲೋಕಾಯುಕ್ತ ನಿರೀಕ್ಷಕ ಮೊಮ್ಮದ್ ರಫಿ ಮಾತನಾಡಿ ಮೊಹರಂ ಹಬ್ಬದ ಅಲಾಯಿ ಕುಣಿತಕ್ಕೆ ಹಾಗೂ ಇನ್ನಿತರೆ ಕೆಲಸಕ್ಕೆ ಮರ ಗಿಡಗಳನ್ನು ಕಡಿಯಬಾರದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆಸಕ್ತಿವಹಿಸಿ ಕಾರ್ಯ ನಿರ್ವಹಿಸಿದರೆ ಪರಿಸರ ಉಳಿಸಲು ಸಾಧ್ಯ ರಸ್ತೆ ಬದಿ ಮರ ಗಿಡಗಳನ್ನು ಬೆಳೆಸಬೇಕು ಪಟ್ಟಣದಲ್ಲಿ ಅರಣ್ಯ ಇಲಾಖೆಯಿಂದ ಪರಿಸರ ದಿನ ಆಚರಿಸುವಲ್ಲಿ ಇಚ್ಚಾ ಶಕ್ತಿ ತೋರಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು ಸಭೆಯಲ್ಲಿ ಸಾರ್ವಜನಿಕರಿಂದ ಯಾವುದೇ ಅರ್ಜಿಗಳು ಸ್ವೀಕಾರ ಗೊಳ್ಳಲಿಲ್ಲ ಬಾಕಿ ಇದ್ದ ಅಳೆಯ ಅರ್ಜಿಗಳ ಅನುಪಾಲನೆ ಕುರಿತು ಚರ್ಚಿಸಲಾಯಿತು ಸೋಮಪ್ಪ ಕೆರೆ ಒತ್ತುವರಿ, ಗೌರಮ್ಮ ಕೆರೆ, ಗ್ಯಾಸ್ ಗೋಡೌನ್ ಸ್ಥಳಾಂತರ, ಕರ್ನಾಟಕ ಉಗ್ರಾಣ ನಿಗಮ ನಿಯಮಿತ ಕಂಪ್ಲಿ ಸಿಬ್ಬಂದಿಯ ಎಂಟು ತಿಂಗಳ ಸಂಬಳ ಬಾಕಿ, ಮತ್ತು ಕೆಲಸಕ್ಕೆ ಸೇರಿಸಿ ಕೊಳ್ಳುವ ವಿಷಯ, ಹರ್ಬಲ್ ಲೈಫ್ ನ್ಯೂಟ್ರಿಷನ್ ಜೈನ್ ಲಿಂಕ್ ಸಿಸ್ಟಮ್ ಅನಧಿಕೃತ ಪರವಾನಿಗೆ ನೀಡಿದ, ಪುರಸಭೆ ಸಿಬ್ಬಂದಿ, ಅನಧಿಕೃತ ಕಟ್ಟಡಗಳ ಚಾಲ್ತಿ ಬಗ್ಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಅಧ್ಯಕ್ಷರಾದ ಟಿ ಎಚ್ ಎಂ ರಾಜಕುಮಾರ್ ಮತ್ತು ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಎಚ್ ಗೋಪಾಲ್ ಕಾರ್ಯದರ್ಶಿಯಾದ ಗೋಪಿನಾಥ್ ಇವರು ದಿನಾಂಕ 08-12-2023 ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು ಈ ಅರ್ಜಿಗಳ ಅನು ಪಾಲನೆ ಕುರಿತು ಚರ್ಚಿಸಲಾಯಿತು ತಹಸಿಲ್ದಾರ್ ಶಿವರಾಜ್. ತಾಲೂಕ್ ಪಂಚಾಯತಿ ಇ ಓ ಆರ್ ಕೆ ಶ್ರೀಕುಮಾರ್. ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮಾಳಿ ಉಪಸ್ಥಿತಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ್. ಬಳ್ಳಾರಿ.