ಗಾಣಿಗರ ಸಮುದಾಯದ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಇಂದು ಪ್ರತಿಭಾ ಪುರಸ್ಕಾರ.
ಕೆ. ಹೊಸಹಳ್ಳಿ.07

ಅಖಿಲ ಭಾರತ ಗಾಣಿಗರ ಸಂಘ ತಾಲೂಕು ಘಟಕದ ವತಿಯಿಂದ ಶ್ರೀ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಪರಮ ಪೂಜ್ಯ ಜಯದೇವ ಜಗದ್ಗುರುಗಳವರ ಪುಣ್ಯ ಸ್ಮರಣೆ ಹಾಗೂ ಕೂಡ್ಲಿಗಿ ತಾಲೂಕು ಗಾಣಿಗ ಸಮುದಾಯದ 2023-24 ನೇ. ಸಾಲಿನಲ್ಲಿ ಉತ್ತೀರ್ಣರಾದ ಎಸ್. ಎಸ್.ಎಲ್. ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೇಕಡ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯ ಶ್ರೀ ಶ್ರೀ ಪರಮ ಪೂಜ್ಯ ಡಾ.ಜಯ ಬಸವ ಕುಮಾರ ಮಹಾಸ್ವಾಮಿಗಳು ಆಡಳಿತ ಮಂಡಳಿ ಸದಸ್ಯರು ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠ ಚಿತ್ರದುರ್ಗ ಪೀಠಾಧಿಪತಿಗಳು ಶ್ರೀ ವನಶ್ರೀ ಸಂಸ್ಥಾನ ಮಠ ವಿಜಯಪುರ. ವನಶ್ರೀ ಸಂಸ್ಥಾನ ಮಠದ ಅಧ್ಯಕ್ಷರಾದ ಸಿದ್ದು ಮುತ್ಯ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಎನ್. ಟಿ. ಶ್ರೀನಿವಾಸ್. ಅಖಿಲ ಭಾರತ ಗಾಣಿಗ ಸಂಘದ ಅಖಂಡ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾದ ಜಿ. ಉಮೇಶ್. ಸೇರಿದಂತೆ, ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಕೂಡ್ಲಿಗಿ ತಾಲೂಕಾ ಗಾಣಿಗ ಸಮುದಾಯದ 2023-24 ನೇ. ಸಾಲಿನಲ್ಲಿ ಉತ್ತೀರ್ಣರಾದ ಎಸ್.ಎಸ್. ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೇಕಡ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಮಾಜ ದಿಂದ ಗೌರವಿಸಲಾಗುವುದು ಎಂದು ಅಖಿಲ ಭಾರತ ಗಾಣಿಗರ ಸಂಘದ ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷರಾದ ಎಸ್ ಶೇಖರಪ್ಪ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.