ಮಾನವನ ಆಧುನಿಕ ಬದುಕಿನ ಗೀಳಿಗೆ ಪರಿಸರ ನಾಶ, ಮನುಷ್ಯನ ಪೋಷಣೆಯಲ್ಲಿ ಪರಿಸರ ಬಹಳ ಮುಖ್ಯ – ಬಿರಾದಾರ.

ಹುನಗುಂದ ಜೂನ್.08

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಪೋಷಣೆಯಲ್ಲಿ ಪರಿಸರ ಬಹಳಷ್ಟು ಪ್ರಮುಖವಾಗಿದೆ. ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವುದರಿಂದ ಆರೋಗ್ಯಕರ ವಾತಾವರಣ ಮತ್ತು ಜೀವಿಗಳ ಜೀವನದ ಅಸ್ತಿತ್ವವನ್ನು ಕಾಪಾಡಲು ಸಾಧ್ಯ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಬುಧವಾರ ತಾಲೂಕಿನ ಅಮರಾವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 5 ರಂದು ಸಸಿ ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸೇರಿದಂತೆ ಪ್ರಾಣಿ, ಪಕ್ಷಿ ಸಂಕುಲಗಳನ್ನು ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನೇ ಅವಲಂಬಿಸ ಬೇಕಾಗುತ್ತದೆ.ಇತ್ತಿಚಗೆ ಮಾನವ ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಸರಿಯಾದ ರೀತಿ ಮಳೆ, ಬೆಳೆಗಳು ಆಗುತ್ತಿಲ್ಲ. ಮನುಷ್ಯನ ದುರಾಸೆಯಿಂದ ಗಾಳಿ, ನೀರು, ಮಣ್ಣು ಸೇರಿದಂತೆ ಪರಿಸರದ ಮುಂತಾದ ಅಂಶಗಳು ಕಲುಷಿತ ಗೊಂಡಿದೆ. ಮನೆಗೊಂದು ಮರ, ಊರಿಗೊಂದು ವನ ಎನ್ನುವ ಗಾದೆಯಂತೆ ಪ್ರತಿಯೊಬ್ಬರು ಮರಗಳನ್ನು ನೆಟ್ಟು ಪರಿಸರ ಕಾಪಾಡಲು ತಮ್ಮ ಜವಾಬ್ದಾರಿಯನ್ನು ಅರಿತು ನಡೆಯಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶ್ವದ ೧೪೩ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಇಂತಹ ಪರಸರದ ಕುರಿತು ಬಾಗಲಕೋಟಿ ಜಿಲ್ಲೆಯ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಕಳಿಸಿದ ಪತ್ರದ ಸಂದೇಶವನ್ನು ಮಕ್ಕಳಿಗೆ ಓದಿ ಹೇಳುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಹೆಚ್ಚು ಹೆಚ್ಚು ಸಸ್ಯಗಳನ್ನು ಬೆಳೆಸುವಂತೆ ಮಕ್ಕಳಿಗೆ ಕರೆ ನೀಡಿದ್ದಾರೆ ಎಂದರು.ಬಸವರಾಜ ಹುನಕುಂಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದರು, ಹುನಗುಂದ ಹಾಗೂ ಇಲಕಲ್ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ತಾರಾ ಹಾಗೂ ಮುರಳಿಧರ ದೇಶಪಾಂಡೆ, ವಲಯ ಅರಣ್ಯ ಅಧಿಕಾರಿ ಪಂಚಾಕ್ಷರಿ ಪುರಾಣಿಕಮಠ, ಸಮನ್ವಯಾಧಿಕಾರಿ ವಿನೋದ ಭೋವಿ, ಶಂಕ್ರಣ್ಣ  ಪೈಲ್, ನಾಗರಾಜ ಹೊಸೂರ, ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ ಅವರು ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಬಿ.ಪಿ. ನದಾಫ್, ಎಸ್‌ಡಿಎಂಸಿ ಸದಸ್ಯರು,ಶಿಕ್ಷಕ ಬಳಗ, ಡಾ.ಬಿ.ಆರ್ ಅಂಬೇಡ್ಕರ್ ಶಾಲೆಯ ಶಿಕ್ಷಕರು ಹಾಗೂ ಎಲ್ಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.ಎಸ್ ಎಸ್ ಚಿತ್ತವಾಡಗಿ ನಿರೂಪಿಸಿದರು,ಎಸ್. ಬಿ. ಪಾಟೀಲ ವಂದಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button