ಶಿಕ್ಷಣ ದೇಶದ ದೊಡ್ಡ ಸಂಪತ್ತು, ಶ್ರೀ ಶ್ರೀ ಜಯ ಬಸವಕುಮಾರ ಮಹಾಸ್ವಾಮಿ ಅಭಿಪ್ರಾಯ.

ಕೂಡ್ಲಿಗಿ ಜೂನ್.08

ಆಸ್ತಿ ಗಳಿಸುವ ಮೊದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಶಿಕ್ಷಣ ದೇಶದ ಅತಿದೊಡ್ಡ ಸಂಪತ್ತಾಗಿದೆ ಶಿಕ್ಷಣ ದಿಂದ ಪಡೆದ ಜ್ಞಾನ ಶಾಶ್ವತ ಎಂದು ವಿಜಯಪುರ ಹಾಗೂ ಚಿತ್ರದುರ್ಗ ಗಾಣಿಗ ಗುರುಪೀಠದ ಸ್ವಾಮೀಜಿಗಳಾದ ಡಾ. ಜಯಬಸವ ಕುಮಾರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಿನ ಹೊಸಹಳ್ಳಿ ಗ್ರಾಮದ ಗಾಣಿಗರ ಕಲ್ಯಾಣ ಮಂಟಪದಲ್ಲಿ ನಡೆದ ಕೂಡ್ಲಿಗಿ ತಾಲೂಕು ಗಾಣಿಗರ ಸಂಘ ದಿಂದ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶ್ರೀ ಪರಮ ಪೂಜ್ಯ ಜಯದೇವ ಜಗದ್ಗುರುಗಳ ಪುಣ್ಯ ಸ್ಮರಣೆ ಹಾಗೂ ಗಾಣಿಗರ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಮುಖ್ಯ, ಕಾಯಕ, ಶಿಕ್ಷಣ, ದಾಸೋಹ, ಮಹತ್ವವನ್ನು ತಿಳಿಸಿದರು,

ವಿದ್ಯಾಭ್ಯಾಸದಲ್ಲಿ ಜೆ ಡಬ್ಲ್ಯೂ ಇ. ಮೆನ್ಸ್, ನೀಟ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ. ಜೊತೆಗೆ ಉನ್ನತ ಹುದ್ದೆಗೇರಲು ಸಹಾಯವಾಗುತ್ತದೆ. ಉನ್ನತ ಹುದ್ದೆ ಸೇರಿದಾಗ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡಬೇಕು ಎಂದು ತಿಳಿಸಿದರು, ಸಂಘದ ಅಧ್ಯಕ್ಷರಾದ ಎಸ್ ಶೇಖರಪ್ಪ ಮಾತನಾಡಿ ಗಾಣಿಗ ಸಮುದಾಯದ ವಿದ್ಯಾರ್ಥಿಗಳು ಪ್ರತಿಭಾವಂತರಾಗುವುದರ ಜೊತೆಗೆ ತಂದೆ ತಾಯಿಗೆ ಊರಿಗೆ ಗೌರವ ತರುವಂತ ಕೆಲಸ ನೀವೆಲ್ಲರೂ ಮಾಡಬೇಕು ಎಂದರು, ಎ ಎಸ್ ಕೋಟ್ರಣ್ಣ ಮಾತನಾಡಿ ಗಾಣಿಗ ಸಮುದಾಯದ ಭವನ ನಡೆದು ಬಂದ ದಾರಿಯ ಕುರಿತು ಸ್ವ ವಿವರವಾಗಿ ತಿಳಿಸಿದರು. ಸೈಟ್ ಬಾಬಣ್ಣ ಮಾತನಾಡಿ ಗಾಣಿಗ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಹುದ್ದೆಗಳನ್ನು ಸೇರಿ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ಕೊಡಬೇಕು ಎಂದರು. ಗಾಣಿಗ ಸಮುದಾಯದ ಪೀಠದ ಜಗದ್ಗುರು ಡಾ. ಜಯ ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದು. ಗಾಣಿಗರ ಸಂಘದ ತಾಲೂಕು ಅಧ್ಯಕ್ಷರಾದ ಎಸ್ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿಯಾದ ಕೊಟ್ರೇಣ್ಣ. ಗಾಣಿಗ ಸಮುದಾಯದ ಮುಖಂಡರಾದ ದಿನ್ನೆ ಮಲ್ಲಿಕಾರ್ಜುನ. ಜೆ ಸಿ ಧನಂಜಯ. ಗೌರವಾಧ್ಯಕ್ಷರಾದ ಟಿ ರೇಚಣ್ಣ, ಸಣ್ಣ ವೀರಣ್ಣ ಹಾರಕಬಾವಿ ಹುಡೇ ಚಂದ್ರಣ್ಣ. ಕೊಟ್ರಣ್ಣ. ಕಾಮ ಶೆಟ್ಟಿ ಬಸವರಾಜ್.ನಿವೃತ್ತಿ ಕಂದಾಯ ಅಧಿಕಾರಿ ಯಜಮಾನಪ್ಪ. ಮಲ್ಲಪ್ಪ ಸಾಹುಕಾರ್, ಎರಿಸ್ವಾಮಿ ಮಹದೇವಪುರ,ಹುರುಳಿ ಹಾಳ್ ಬಸವೇಶ್ವರ. ಬಣವಿಕಲ್ ಶಿವಕುಮಾರ್.ಜಿ ಎಸ್. ಗಿರೀಶ್ ಕೂಡ್ಲಿಗಿ,ಹಾರಕಬಾವಿ ಕೊಟ್ರೇಶ್, ಚಿರತೆ ಗುoಡು ಈಶ್ವರಪ್ಪ. ಕಾಮಶೆಟ್ಟಿ ವೀರ ಭದ್ರಪ್ಪ . ಆಲೂರು ಮಲ್ಲಿಕಾರ್ಜುನ. ಆಲೂರು ಗುರುಮೂರ್ತಿ.,ವರವಿನ ಚನ್ನಬಸಪ್ಪ, ಡಿ ಶಶಿಧರ. ಹರಕಬಾವಿ ಯಶವಂತ, ಟಿ.ಕೆ. ಸಿದ್ದರಾಮೇಶ್, ಹರ್ಷ ಮೆಡಿಕಲ್ ಸ್ಟೋರ್ ಮಂಜುನಾಥ್, ಸೇರಿದಂತೆ ತಾಲೂಕಿನ ಎಲ್ಲಾ ಗಾಣಿಗ ಸಮುದಾಯದ ಮುಖಂಡರು ಹಿರಿಯರು ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button