87 ನೇ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಗೆ – ಅರುಣ ಕುಲಕರ್ಣಿಯವರು ಆಯ್ಕೆ.

ನರೇಗಲ್ ಡಿ.15

ಪಟ್ಟಣದ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ, ಅರುಣ.ಬಿ ಕುಲಕರ್ಣಿಯವರು ಡಿಸೆಂಬರ್ 20 ರಿಂದ 22 ರ ವರೆಗೆ ಮಂಡ್ಯದಲ್ಲಿ ನಡೆಯುವ 87 ನೇ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಗೆ ಆಯ್ಕೆ ಯಾಗಿದ್ದಾರೆ.1980 ರಿಂದಲೂ ಸಾಹಿತ್ಯ ಸೇವೆಯಲ್ಲಿ ತೊಡಗಿ ಕೊಂಡಿದ್ದು, ನಾಡಿನ ಖ್ಯಾತ ಸಂಶೋಧಕ, ವಿದ್ವಾಂಸ ಡಾ, ಬಿ.ವಿ ಶಿರೂರ ಮತ್ತು ಡಾ, ಶ್ಯಾಮಸುಂದರ ಬಿದರಕುಂದಿಯವರ ಮಾರ್ಗ ದರ್ಶನದಲ್ಲಿ ತಮ್ಮ ಸಾಹಿತ್ತಿಕ ಸೇವೆಯನ್ನು ಮುಂದುವರೆಸಿ ಕೊಂಡು ಬಂದಿದ್ದಾರೆ. ಮಡದಿ ಗೊಂದು ಪತ್ರ, ಪ್ರಾರ್ಥನೆ ಕವನ ಸಂಕಲನ ಗಳಾದರೆ, ಜಕ್ಕಲಿಯ ಅಣ್ಣಯ್ಯ- ತಮ್ಮಯ್ಯ, ಜ್ಞಾನದೇವ ದೊಡ್ಡಮೇಟಿ ಸ್ವತಂತ್ರ ಕೃತಿಗಳು. 27 ಜನ ಸಾಧಕರನ್ನು ಪರಿಚಯಿಸುವ ಗ್ರಂಥ ಸಂಭ್ರಮ ಗದಗನ ಜ. ತೋಂಟದಾರ್ಯ ಮಠದಿಂದ ಪ್ರಕಟಗೊಂಡ ಆಕರ ಗ್ರಂಥವಾಗಿದೆ. ಅನೇಕ ಕಥೆ, ಕವನ, ಚುಟುಕುಗಳು, ಲೇಖನಗಳು ನಾಡಿನ ಬಹುತೇಕ ಎಲ್ಲ ದಿನ ಪತ್ರಿಕೆ, ಮಾಸ ಪತ್ರಿಕೆ, ವಾರ ಪತ್ರಿಕೆ ಮತ್ತು ಅನೇಕ ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡು ಜನ ಮನ್ನಣೆಗಳಿಸಿವೆ. ನಾಡಿನ ಅನೇಕ ಕಡೆಗಳಲ್ಲಿ ನಡೆದ ಜಿಲ್ಲಾ, ರಾಜ್ಯ ಮಟ್ಟದ ಕವಿ ಗೋಷ್ಠಿಗಳಲ್ಲಿ ಪಾಲ್ಗೊಂಡು ಪುರಸ್ಕಾರ. ಬಹುಮಾನಗಳನ್ನು ಪಡೆದಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕಥಾ ಸ್ಪರ್ಧೆಯಲ್ಲಿ ಹನುಮ್ಯಾ ಕಥೆಗೆ ಉತ್ತಮ ಕಥಾ ಪುರಸ್ಕಾರ ಪಡೆದು ನಾಡಿನ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಂದ ಪುರಸ್ಕಾರ ಸ್ವೀಕರಿಸಿದ್ದಾರೆ. ನರೇಗಲ್ಲನ ಬೀಚಿ ಬಳಗ ಸ್ಥಾಪಿಸಿ ಕಳೆದ ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುವುದರಲ್ಲಿ ಕುಲಕರ್ಣಿಯವರ ಪಾತ್ರ ದೊಡ್ಡದು. ಪ್ರತಿ ವರ್ಷ ಆಚರಿಸಲಾಗುವ ಬೀಚಿ ಪುಣ್ಯ ತಿಥಿಗೆ ನಾಡಿನ ಹಾಸ್ಯ ದಿಗ್ಗರಾಜ ಬಿ. ಪ್ರಾಣೇಶ್ ಮತ್ತು ಸಂಗಡಿಗರನ್ನು, ದಶಮಾನೋತ್ಸವಕ್ಕೆ ಕಣ್ಣನ್ ಮಾಮಾ ಅವರನ್ನು ಕರೆಯಿಸಿ ಈ ಭಾಗದ ಸಾಹಿತ್ಯಾಸಕ್ತರಿಗೆ ಸಾಹಿತ್ಯದ ರಸದೌತಣ ಉಣ ಬಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ತಂದೆ ದಿ. ಬಾಲಕೃಷ್ಣ ಕುಲಕರ್ಣಿಯವರ ಹೆಸರಿನಲ್ಲಿ ಬಾಲಕೃಷ್ಣ ಸಾಹಿತ್ಯ ವೇದಿಕೆಯನ್ನು ಸ್ಥಾಪಿಸಿ ಆ ಮೂಲಕ ಅನೇಕ ಸಾಹಿತಿಗಳನ್ನು ನರೇಗಲ್ಲಿಗೆ ಕರೆಯಿಸಿ ನರೇಗಲ್ಲದಲ್ಲಿ ಸಾಹಿತ್ತಿಕ ವಾತಾವರಣ ನಿರ್ಮಿಸಿದ್ದಾರೆ. ಬಿ.ಎಸ್ಸಿ, ಬಿ.ಈಡಿ ಪದವೀಧರರಾಗಿರುವ ಕುಲಕರ್ಣಿಯವರು 1984 ರಿಂದ 2022 ರ ವರೆಗೆ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಹಸ್ರಾರು ವಿದ್ಯಾರ್ಥಿಗಳಿಗೆ ಗಣಿತ ವಿಷಯ ಬೋಧನೆ ಮಾಡಿದ್ದಾರೆ. ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ್ ಅವರ ಆತ್ಮೀಯ ಒಡನಾಡಿ ಆಗಿರುವ ಕುಲಕರ್ಣಿಯವರು ಅವರ ಪ್ರೇರಣೆಯಿಂದ ನಾಡಿನ ನಗೆಹಬ್ಬ ಕಲಾವಿದರಾಗಿದ್ದಾರೆ. ನಾಡಿನ ಅನೇಕ ಕಡೆಗಳಲ್ಲಿ ಅಂದಾಜು 2000 ಕ್ಕೂ ಹೆಚ್ಚಿನ ನಗೆಹಬ್ಬ ಕಾರ್ಯಕ್ರಮಗಳನ್ನು ನೀಡಿದ್ದಾರೆ. 1989 ರಿಂದ ಪತ್ರಕರ್ತರಾಗಿ ನವೋದಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಕನ್ನಡ ಪ್ರಭ, ಇಂಡಿಯನ್ ಎಕ್ಸಪ್ರೆಸ್, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಹಾಗೂ ಈಗ ಉದಯವಾಣಿ ದಿನ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅರುಣ ಕುಲಕರ್ಣಿ ಅವರು ಈ ಬಾರಿ ಡಿಸೆಂಬರ್ 20 ರಿಂದ 22 ರ ವರೆಗೆ ಮಂಡ್ಯದಲ್ಲಿ ನಡೆಯುವ 87 ನೇ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಗೆ ಆಯ್ಕೆ ಯಾಗಿರುವುದಕ್ಕೆ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್ ಕಳಕಣ್ಣವರ, ನರೇಗಲ್ಲ ಶ್ರೀ ದತ್ತಭಕ್ತ ಮಂಡಳಿಯವರು ಅಭಿನಂದಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button