ಸಿದ್ದರಾಮೇಶ್ವರರ ಕೆರೆ ಕಟ್ಟೆಗಳ ನಿರ್ಮಾಣ ಕಾರ್ಯ ಇಂದಿಗೂ ಪ್ರಸ್ತುತ – ಅಮರೇಶ್.ಜಿ.ಕೆ

ಕೊಟ್ಟೂರು ಜನೇವರಿ.15

ಕೊಟ್ಟೂರು ತಾಲೂಕಾ ಕಾರ್ಯಾಲಯದ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಜನ-ಜಾನುವಾರುಗಳಿಗೆ, ಪಶು-ಪಕ್ಷಿಗಳಿಗೆ ಕುಡಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿ ಸಮಾಜ ಮುಖಿಯಾಗಿ ನಡೆದ ಸಿದ್ದರಾಮೇಶ್ವರರ ನಡೆ ಇಂದಿಗೂ ಪ್ರಸ್ತುತವಾಗಿದೆ. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಕೆರಗಳನ್ನು ಕಟ್ಟಲು ಸಾಧ್ಯವಾಗದಿದ್ದರೂ, ಹಿಂದಿನವರು ನಿರ್ಮಿಸಿರುವ ಕೆರೆ-ಕಟ್ಟೆಗಳನ್ನು ಹಾಳಾಗದಂತೆ, ಒತ್ತುವರಿ ಯಾಗದಂತೆ ಸಂರಕ್ಷಿಸುವ ಮುಂದಿನ ಪೀಳಿಗೆಗೆ ಉಳಿಸುವ ಹೊಣೆ ನಮ್ಮೆಲ್ಲರದಾಗಿದೆ. ಜನತೆಯ ಕಷ್ಟಗಳನ್ನು ಹತ್ತಿರದಿಂದ ನೋಡಿ ಅವರ ನೋವುಗಳನ್ನು ನಿವಾರಿಸಲು ಶ್ರಮಿಸುತ್ತಾ, ನುಡಿದಂತೆ ನಡೆದಿದ್ದಾರೆ. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು. ಕಷ್ಟ ಬಂದಾಗ ಕೊರಗದೇ ಕಷ್ಟ ಸಹಿಷ್ಣುವಾಗಿ ಬದುಕ ಬೇಕೆಂದು ಸಂದೇಶ ನೀಡಿ ಸಮತೆಯ ಗಾರುಡಿಗರಾಗಿದ್ದರು. ಒಬ್ಬರನ್ನು ಮೋಸ ಮಾಡಿ ತೋರಿಕೆಗೆ ಕಾಣುವಂತೆ ಡಾಂಬಿಕತನ ದಿಂದ ಪೂಜೆ ಮಾಡಿದರೆ ಅರ್ಥವಿಲ್ಲ ಎಂದು ಎಚ್ಚರಿಸಿದ್ದರು. ಅವರ ಸಿದ್ದಾಂತಗಳನ್ನು, ಆದರ್ಶಗಳನ್ನು ಅರ್ಥ ಮಾಡಿಕೊಂಡು ಬಾಳಿದರೆ ಅವರನ್ನು ಅನುಸರಿಸಿದರೆ ಸಾರ್ಥಕತೆ ಬರುತ್ತದೆ ಎಂದು ಅಮರೇಶ್ ಜಿ ಕೆ ತಹಶೀಲ್ದಾರರು ತಿಳಿಸಿದರು. ಮಂಜುನಾಥ ಸಿ.ಆರ್.ಪಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಗೇಶ ಡಿ ಭೋವಿ ಸಮಾಜದ ಗೌರವಾಧ್ಯಕ್ಷರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸದಸ್ಯರಾದ ಪಿ ಹೆಚ್ ರಾಘವೇಂದ್ರ, ಡಿ.ನಾಗೇಶ, ಭೋಮಿ ಸಮಾಜದ ಮುಖಂಡರಾದ ಯರ್ರಿಸ್ವಾಮಿ, ಪಿ ಹೆಚ್ ಎಸ್ ಶಶಿಧರ, ಬಿ ಮನೋಹರ, ಚಿರಂಜೀವಿ, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ ಎಸ್ ಎಂ, ಹರೀಶ್ ಗ್ರಾ.ಆ.ಅ. ವಿಷಯ ನಿರ್ವಾಹಕ ವಿಜಯಕುಮಾರ ಪುಟಾಣಿ, ಶರಣಪ್ಪ ಹಾಗೂ ಇತರರು ಇದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button