ವಿಷಕಂಠ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ.
ಹೂಡೇಂ ಜೂನ್.08

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ವಿಷಕಂಠ ಕ್ರಿಕೆಟರ್ಸ್ ಹೂಡೇಂ, ಪ್ರಥಮ ಬಾರಿಗೆ ತಾಲೂಕು ಮಟ್ಟದ ಟೆಂಪರ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನೆಯನ್ನು ಎಚ್.ಒ. ಕೊಟ್ರೇಶ್ ಯುವ ಕಾಂಗ್ರೆಸ್ ಮುಖಂಡರು ಹೂಡೇಂ ಹಾಗೂ ಹೂಡೇಂ ಗ್ರಾ.ಪಂ ಅಧ್ಯಕ್ಷರು ರಾಮಚಂದ್ರಪ್ಪ ಬಿ ಇವರು ಉದ್ಘಾಟಿಸಿದರು. ಕ್ರಿಕೆಟ್ ಟೂರ್ನಾಮೆಂಟ್‌ಗೆ ಎಚ್.ಒ ಕೊಟ್ರೇಶ್ ಕಾಂಗ್ರೆಸ್ ಯುವ ಮುಖಂಡರು ಪ್ರಥಮ ಬಹುಮಾನ 15 ಸಾವಿರ ಕೊಡುಗೆ ನೀಡಿದ್ದಾರೆ. ಹಾಗೂ ಬಿ ರಾಮಚಂದ್ರಪ್ಪ ಗ್ರಾ.ಪಂ ಅಧ್ಯಕ್ಷರು ದ್ವಿತೀಯ ಬಹುಮಾನ 10 ಸಾವಿರ ಕೊಡುಗೆ ನೀಡಿ ಮಾತನಾಡಿದ ಅವರು ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ಈ ವೇಳೆ ನೆರೆದಿದ್ದ ವಿವಿಧ ತಂಡಗಳ ಆಟಗಾರರಿಗೆ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ ಸದಸ್ಯ ಪಾಪ ನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದ್ರಮ್ಮ ಮಲ್ಲಿಕಾರ್ಜುನ್, ಎಲ್ಲಪ್ಪ, ಶಶಿಕಲಾ ಜಯಣ್ಣ, ಪುಟ್ಟಮ್ಮ ಮಲ್ಲಿಕಾರ್ಜುನ್, ಶ್ರೀ ಕಂಬಳ ರಂಗ ಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಅಜ್ಜಪ್ಪ, ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು, ಮುಖಂಡರು, ಕ್ರೀಡಾಭಿಮಾನಿಗಳು, ಸಾರ್ವಜನಿಕರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.