ಧ್ವನಿ ಮುದ್ರಣಕ್ಕೆ ಹೊರಟ “ಸುಮಾ” ಚಲನ ಚಿತ್ರ.
ಬೆಂಗಳೂರು ಜೂನ್.10

ಓಂ ಸಾಯಿ ಸಿನಿಮಾಸ್’ ಬ್ಯಾನರಿನಲ್ಲಿ ನಿರ್ಮಾಣ ವಾಗುತ್ತಿರುವ ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ‘ಸುಮಾ’ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಕ್ತಾಯ ಗೊಂಡು ಧ್ವನಿಮುದ್ರಣ ಕಾರ್ಯದಲ್ಲಿ ತೊಡಗಿದೆ. “ಸುಮಾ” ಚಿತ್ರದ ಚಿತ್ರೀಕರಣ ಮಂಡ್ಯ ಜಿಲ್ಲೆಯ ಕೆ ಎಂ ದೊಡ್ಡಿ (ಭಾರತೀನಗರ), ಆಲಭುಜನಹಳ್ಳಿ, ನಗರಕೆರೆ ಮತ್ತು ಮಾಲಗಾರನಹಳ್ಳಿಯ ಸುತ್ತಮುತ್ತ ಒಟ್ಟು ೨೦ ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಊಟಿಗೆ ತೆರಳಿತ್ತು. ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿ ಕೊಂಡಿರುವ ರಶ್ಮಿ ಎಸ್. ‘ಸುಮಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ, ನಾಯಕಿಯಾಗಿ ಮೊದಲ ಬಾರಿಗೆ ಮಾನ್ಯತಾ ನಾಯ್ಡು, ಉಳಿದಂತೆ ಬಾಲ ರಾಜವಾಡಿ, ಜೋ ಸೈಮನ್, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಪವಿತ್ರ, ವಿಜಯಲಕ್ಷ್ಮೀ, ಅವಿನಾಶ ಗಂಜಿಹಾಳ, ಶಿವಕುಮಾರ್ ಆರಾಧ್ಯ , ಹರಿಹರನ್ ಬಿ. ಪಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಖ್ಯಾತಿಯ ಭೈರವಿ, ಮಂಜುಳಾ ಅತಿಥಿ ಪಾತ್ರದಲ್ಲಿ ಡಾ ವಿ ನಾಗೇಂದ್ರ ಪ್ರಸಾದ್ , ವೈದ್ಯೆಯಾದ ಡಾ ಶ್ವೇತ (ಗೈನಾಕಲಜಿಸ್ಟ್) ಅಭಿನಯಿಸಿದ್ದಾರೆ. “ಸುಮಾ” ಸಿನಿಮಾಕ್ಕೆ ದೇವೂ, ವಿನಾಯಕ್ ರೇವಡಿ ಬಾಗಲಕೋಟೆ, ಮತ್ತು ಗಗನ್ ಆರ್ ಇವರ ಛಾಯಾಗ್ರಹಣ, ಮುತ್ತುರಾಜ್ ಟಿ. ಸಂಕಲನವಿದೆ.

ಸಿನಿಮಾದ ಹಾಡುಗಳಿಗೆ ವೇದಾಂತ್ ಅತಿಶಯ್ ಜೈನ್ ಸಂಗೀತವಿದ್ದು, ಸತೀಶ್ ಜೋಶಿ ಹಾವೇರಿ ಮತ್ತು ಪ್ರದೀಪ್ ಗೌಡ ರವರ ಸಾಹಿತ್ಯವಿದೆ. ಮೇಘನ ಹಳಿಯಾಳ ಮತ್ತಿತರರು ಹಾಡುಗಳಿಗೆ ಧ್ವನಿನೀಡಿದ್ದು, ಪತ್ರಿಕಾಸಂಪರ್ಕ ಕಾರ್ತಿಕ್ ಸುಧನ್, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ.ಸಿನಿಮಾಕ್ಕೆ ರಂಗಸ್ವಾಮಿ ಟಿ (ರವಿ) ಸಹ ನಿರ್ಮಾಪಕರಾಗಿದ್ದಾರೆ. ಚಿತ್ರತಂಡದ ಯೋಜನೆಯಂತೆ, ಇದೇ ಆಗಸ್ಟ್ ವೇಳೆಗೆ ‘ಸುಮಾ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿ, ಅಕ್ಟೋಬರ್ ನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರ ತಂಡ.
*****
ವರದಿ ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬