ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸರ್ವ ಸಾಮಾನ್ಯ ಸಭೆ ಜರುಗಿತು.
ಎಡೆಯೂರು ಜೂನ್.10

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸರ್ವ ಸದಸ್ಯರ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳನ್ನು ಉದ್ದೇಶಿಸಿ ಸಂಘಟನೆಯ ಜವಾಬ್ದಾರಿಯೂ ತುಂಬಾ ಮುಖ್ಯ ಸದಸ್ಯರು ಸ್ವಾತಂತ್ರ ಹೋರಾಟದ ಮನೋಭಾವದ ನಿರ್ಧಾರ ನಿಲುವು ಸಾಮಾಜಿಕ ಜಾಲತಾಣದ ಬಳಕೆ ಅವಶ್ಯಕತೆ ಇರುತ್ತದೆ ಸಂಘಟನೆ ಬೆಳೆದರೆ ನಾವು ಸಮಾಜದಲ್ಲಿ ಬೆಳೆಯುವುದರಲ್ಲಿ ಸಂಶಯವಿಲ್ಲ ಸಂಘಟನೆಯ ಹೋರಾಟದ ರೂಪುರೇಷಗಳಿಗೆ ದಾನಿಗಳ ಅವಶ್ಯಕತೆ ಇದೆ. ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಹಾಗೂ ಹೊಸ ಸಮಿತಿಯ ರಚನೆ ಮುಖ್ಯವಾಗಿರುತ್ತದೆ. ಅಧಿಕಾರಿಗಳನ್ನು ಮಂತ್ರಿಗಳನ್ನು ಶಾಸಕರನ್ನು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಹಾಗೂ ರಾಜ್ಯ ಸಮಿತಿ ಪ್ರತಿ ಆರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು ಮತ್ತು ಜಿಲ್ಲಾ ಹಾಗೂ ತಾಲೂಕ ಸಮಿತಿಯವರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಕೊನೆಗೆ ಸಭಾ ನಡುವಳಿಯ ಪುಸ್ತಕ ಬರೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನೆಯ ಉಪಾಧ್ಯಕ್ಷರಾದ ನರಸಿಂಹ ಗೌಡ, ಪ್ರಧಾನ ಕಾರ್ಯದರ್ಶಿಯಾದ ರುದ್ರೇಶ್, ಕಾರ್ಯಧ್ಯಕ್ಷರಾದ ಚೆನ್ನಯ್ಯಮಲ್ಲಯ್ಯ ವಸ್ತ್ರದ್ ಸಂಘಟನಾ ಕಾರ್ಯದರ್ಶಿಯಾದ ಟಿ ಹೆಚ್ ಎಂ ರಾಜಕುಮಾರ ಮಾಧ್ಯಮ ಪ್ರತಿನಿಧಿಯಾದ ಮನೋಜ್ ಹಾಗೂ ಧಾರವಾಡ ಬಳ್ಳಾರಿ ಹರಪನಹಳ್ಳಿ ಸಿಂಧನೂರು ಹಾವೇರಿ ದಾವಣಗೆರೆ ಕೋಲಾರ ತುಮಕೂರು ಚಿಕ್ಕಬಳ್ಳಾಪುರ ಕಲಬುರಗಿ ಉತ್ತರ ಕನ್ನಡ ದಕ್ಷಿಣ ಕನ್ನಡ ಬೆಂಗಳೂರು ನಗರ ಮತ್ತು ಗ್ರಾಮಾಂತರ ರಾಮನಗರ ಕೊಪ್ಪಳ ಇನ್ನು ಅನೇಕ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಚರ್ಚೆ ಮತ್ತು ನಿರ್ಣಯ ಗಳೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಮ್ ರಾಜಕುಮಾರ ಬಳ್ಳಾರಿ.