ಕಲೆ, ಸಂಸ್ಕೃತಿ ಉಳಿಸಿ, ಬೆಳೆಸಿ ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಯಾಧ್ಯಕ್ಷ ಡಾ. ಶಿವಣ್ಣ ಜಿ.

ಬೆಂಗಳೂರು ಜೂನ್.10

ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಂತಹ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ, ಜೊತೆಗೆ ಅನೇಕ ಪೌರಾಣಿಕ ಸಾಮಾಜಿಕ ನಾಟಕಗಳಿಗೆ ಅಭಿನಯ ಮಾಡುವುದು ಈಗಿನ ಯುವಶಕ್ತಿಗೆ ಪ್ರೇರಣೆ ನೀಡಬೇಕಾಗಿದೆ. ಕನ್ನಡ ನಾಡು ನುಡಿ ಜಲ ಭಾಷೆ ವಿಷಯದಲ್ಲಿ ನಾವೆಲ್ಲರೂ ಕನ್ನಡಕ್ಕಾಗಿ ಕಂಕಣ ಬದ್ಧರಾಗಿ ನಿಲ್ಲಬೇಕು. ಎಂದು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಡಾ. ಜಿ. ಶಿವಣ್ಣ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ವತಿಯಿಂದ ಆಯೋಜಿಸಿದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನಿತ ಹಾಗೂ ಅನುದಾನ ಪಡೆದಂತ ಕವಿಯತ್ರಿ ಆಶಾ ಶಿವು”” ಮಲೆನಾಡಿನ ಸಿರಿ ಸೊಬಗಿನ ವಯ್ಯಾರಿ ” ಪುಸ್ತಕವನ್ನು ಇತಿಹಾಸ ತಜ್ಞರು ಹಾಗೂ ಸಂಶೋಧಕರಾದಂತಹ ಡಾ. ತಲಕಾಡು ಚಿಕ್ಕ ರಂಗೇಗೌಡ ರವರು. ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವೈ ಬಿ ಹೆಚ್ ಜಯದೇವ್. ಡಾ ಚಿಕ್ಕ ಹೆಜ್ಜಾಜಿ ಮಹದೇವ್, ದಿವ್ಯ ಸಾನಿಧ್ಯ ಡಾ. ಆರೂಢ ಭಾರತಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಗೊಂಡಿತು. ಕಾರ್ಯಕ್ರಮವನ್ನು ಡಾ. ಚಿಕ್ಕ ಹೆಜ್ಜಾಜಿ ಮಹದೇವ್ ಉದ್ಘಾಟಿಸಿದರು ನಂತರ ಮಾತನಾಡಿ ಕಥೆ, ಕವನ, ಕಾದಂಬರಿ, ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿ ಕೊಳ್ಳಬೇಕು. ಜೊತೆಗೆ ಬಸವಾದಿ ಪ್ರಮಥರ ಹಾಗೂ ನಾಡಿನೆಲ್ಲ ದಾರ್ಶನಿಕರ ಪುಸ್ತಕಗಳನ್ನು ಓದುವುದರ ಜೊತೆಗೆ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ.

ಶರಣ ಶರಣೆಯರ ವಚನಗಳನ್ನು ತಿಳಿದು,ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು. ಕೃತಿ ಅನಾವರಣ ಮತ್ತು ಪರಿಚಯ ಡಾ. ತಲಕಾಡು ಚಿಕ್ಕ ರಂಗೇಗೌಡ ಮಾತನಾಡಿ ಮಲೆನಾಡಿನ ಸಿರಿ ಸೊಬಗಿನ ವಯ್ಯಾರಿ ಎಂಬ ಕೃತಿಯು ಅಪೂರ್ವ ಪ್ರವಾಸಿ ತಾಣಗಳ ಅನನ್ಯ ಪರಿಚಯ ಮತ್ತು ಪೌರಾಣಿಕ ಇತಿಹಾಸವನ್ನು ಒಳಗೊಂಡಿದೆ ಕೃತಿಯ ಕುರಿತು ಸ್ವ ವಿವರವಾಗಿ ತಿಳಿಸಿದರು. ಅಖಿಲ ಕರ್ನಾಟಕ ವಿಷ್ಣುವರ್ಧನ್ ಅಭಿಮಾನಿ ಸಂಘ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ ಕರ್ನಾಟಕದಲ್ಲಿ ವರ್ಷದಲ್ಲಿ ಅನೇಕ ಕೃತಿಗಳು ಬಿಡುಗಡೆ ಯಾಗುತ್ತಿವೆ, ಆದರೆ ಕನ್ನಡ ಪುಸ್ತಕವನ್ನು ಓದುವ ಹವ್ಯಾಸ, ಜೊತೆಗೆ ಪುಸ್ತಕವನ್ನು ಹಂಚುವುದನ್ನು ಮತ್ತು ಗ್ರಂಥಾಲಯಗಳಿಗೆ ನೀಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ. ಎಂದು ತಿಳಿಸಿದರು. ಡಾ. ಚಂದ್ರಶೇಖರ್ ಮಾಡಲಗೇರಿ ಚೇತನ ಫೌಂಡೇಶನ್ ಕರ್ನಾಟಕ ಇವರು ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ ಡಾ. ಆರೂಢ ಭಾರತಿ ಮಹಾಸ್ವಾಮಿಗಳು ಸಿದ್ಧಾರೂಢ ಮಿಷನ್ ರಾಮಹಳ್ಳಿ, ಡಿ.ಕೆ.ರವಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರು ಮುರುಳಿ ಗೌಡ, ಡಾ. ರೇವಣ್ಣ, ಅಧ್ಯಕ್ಷರು ಅಕ್ಷರ ಚಪ್ಪರ ಸಂಸ್ಥೆ ಮಧು ಅಕ್ಷರಿ. ಎಂಎಸ್ ಆಶಾಲತಾ, ಕವಯತ್ರಿ ಲತಾ ಭಾರ್ಗವ್, ಪುಷ್ಪವತಿ ಕೆ.ಬಿ, ಮಾಲಪ್ರಸಾದ್, ಅಕ್ಷರನಾದ ವೇದಿಕೆ ಅಧ್ಯಕ್ಷರು ಶ್ರುತಿ ಮಧುಸೂದನ್, ರೈತ ಹೋರಾಟಗಾರರಾದ ಎಂ, ಬಸವರಾಜ್, ನಿರಂಜನ್ ಕುಮಾರ್ ಎ, ವೀರೇಶ್ ಕೆ.ಎಸ್. ಸಂಗಮನಾಥ್ ಪಿ ಸಜ್ಜನ್, ಡಾ. ನವೀನ್ ಬಿ ಸಜ್ಜನ್, ಜಾನಪದ ನೃತ್ಯ, ಕಾವ್ಯವಾಚನ, ಉಪನ್ಯಾಸ, ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಕಲಾ ರತ್ನ ಪ್ರಶಸ್ತಿ, ಡಾ. ಬಿ ಆರ್ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರು. ಹಾಗೂ ಚೇತನ ಫೌಂಡೇಶನ್ ಧಾರವಾಡ, ಅಕ್ಷರ ಚಪ್ಪರ ಸಂಸ್ಥೆ ಬೆಂಗಳೂರು, ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರು, ಚಿತ್ರೋದ್ಯಮ ಪತ್ರಿಕೆ, ಸಂಚಲನ ನ್ಯೂಸ್ ಮತ್ತು ಡಾ ಜಿ ಶಿವಣ್ಣ ಅಭಿಮಾನಿ ಬಳಗ ಅನೇಕ ಕವಿಗಳು ಕವಿಯತ್ರಿಯರು ಸಾಹಿತಿಗಳು ಸಂಶೋಧಕರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್ ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button