ಇಂದು ರಾಂಪುರ ಎನ್ ವೈ ಎಚ್ ಲೇ ಔಟ್ ನಲ್ಲಿ ಡೆಲ್ಲಿ ಪಬ್ಲಿಕ್ ಪ್ಲೇ ಸ್ಕೂಲ್ ಗೆ ಚಾಲನೆ ನೀಡಿದ ಶಾಸಕರು.
ರಾಂಪುರ ಜೂನ್.11

ಇಂದು ರಾಂಪುರ ಓಬಳಾಪುರ ರಸ್ತೆ ಎನ್ ವೈ ಎಚ್ ಲೇಔಟ್ ನಲ್ಲಿ ನೂತನವಾಗಿ ಪ್ರಾರಂಭ ಗೊಂಡಿರುವ ಡೆಲ್ಲಿ ಪಬ್ಲಿಕ್ ಪ್ಲೇ ಸ್ಕೂಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡರು. ಮತ್ತು ಶಾಸಕರ ಅಣ್ಣನಾದ ಪೆನ್ನು ಹೋಬಳಿ ಸ್ವಾಮಿ ಮತ್ತು ಇವರ ಸಹೋದರರು ಕುಟುಂಬದವರು ಪಾಲ್ಗೊಂಡಿದ್ದರು.

ಓಂ ಶ್ರೀ ಗಣೇಶಾಯ ನಮಃ ಸರ್ವ ಸಿದ್ಧಿ ವಿನಾಯಕನ ನೆನೆದು ಸರ್ವರಿಗೂ ಶಿಕ್ಷಣಕ್ಕೆ ಅನುಕೂಲ ವಾಗಬೇಕೆಂದು ಗಜಾನನ ಏಕದಂತ ಲಂಬೋದರ ವಿಘ್ನೇಶ್ವರ ಸರ್ವ ಭಕ್ತರನ್ನು ಕಾಪಾಡುವ ಗಣೇಶನಿಗೆ ನಮೋ ನಮೋ ಎಂದು ಪೂಜೆ ಮಾಡಿಸಿ ಡೆಲ್ಲಿ ಪಬ್ಲಿಕ್ ಪ್ಲೇ ಸ್ಕೂಲ್ ಉದ್ಘಾಟನೆ ಮಾಡಿದ ಶಾಸಕರು.ಪೋಷಕರು, ಮುಖಂಡರು, ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.