ಉಪನೋದಣಿ ಕಚೇರಿ ತೆರೆಯಲು ಆಗ್ರಹ.
ಕೊಟ್ಟೂರು ಜುಲೈ.11

ಅರ್ಧಂಬರ್ಧ ತಾಲೂಕು ಘೋಷಣೆಯಾಗಿ ಆರೇಳು ವರ್ಷವಾದರೂ ಕಚೇರಿಗಳಲ್ಲದೆ ಹಲೆದಾಡುತ್ತಿರುವ ಸಾರ್ವಜನಿಕರ ಬರೀ ನೆಪಮಾತ್ರಕ್ಕೆ ತಾಲ್ಲೂಕಾಗಿದೆ. ತಾಲ್ಲೂಕಿಗೆ ಬೇಕಾದ ವಿವಿಧ ಇಲಾಖೆಗಳ ತಾಲ್ಲೂಕು ಕಛೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕೂಡ್ಲಿಗಿಗೇ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ಸರ್ಕಾರ ಬರೀ ತಾಲ್ಲೂಕು ಘೋಷಣೆ ಮಾಡಿದರಷ್ಟೇ ಸಾಲದು ಅದಕ್ಕೆ ಬೇಕಾದ ಎಲ್ಲ ರೂಪುರೇಷೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕೇ ಹೊರತು ಈ ರೀತಿ ಅರ್ಧಂಬರ್ಧ ತಾಲ್ಲೂಕು ಘೋಷಣೆ ತಹಶೀಲ್ದಾರರ ಕಛೇರಿ ತೆರೆದರಷ್ಟೇ ತಾಲ್ಲೂಕೆಂದೆ ಹೇಗೆ ಭಾವಿಸಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ತಾಲ್ಲೂಕು ಕೇಂದ್ರವೆಂದು ಕೊಟ್ಟೂರು ಪಟ್ಟಣವನ್ನು ಕಳೆದ ಆರೇಳು ವರ್ಷಗಳ ಹಿಂದೆ ಘೋಷಿಸಿದರೂ ತಾಲ್ಲೂಕು ಕಚೇರಿಯ ನಾಮಫಲಕಕ್ಕೆ ಮಾತ್ರ ಸೀಮಿತಗೊಂಡಿದೆ. ಸರ್ಕಾರದ ಸೌಲಭ್ಯಗಳಿಂದ ತಾಲ್ಲೂಕಿನ ಜನತೆ ಇಂದಿಗೂ ವಂಚಿತರಾಗಿದ್ದಾರೆ.ಹಾಗೂ ಸಾರ್ವಜನಿಕರ ಪರದಾಡುವ ಪರಿಸ್ಥಿತಿ ಒದಗಿದೆ.ಎಂದು ಉದ್ಯಮಿ ಅಕ್ಕಿ ಚಂದ್ರಶೇಖರ್ ಪತ್ರಿಕೆ ಗೆ ತಿಳಿಸಿದ್ದಾರೆ.ವ್ಯಾಪಾರ ವಹಿವಾಟಿಗೆ ಪ್ರಸಿದ್ಧಿಯಾದ ಕೊಟ್ಟೂರಿನ ಜನತೆ ಆಸ್ತಿಗಳ ಕೊಡು ಕೊಳ್ಳುವಿಕೆಗೆ ಕೂಡ್ಲಿಗಿ ಉಪನೋಂದಣಿ ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ಇದೆ. ಕೂಡ್ಲಿಗಿ ಕಚೇರಿಯಲ್ಲಿ ಕಾರ್ಯಾಭಾರ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ತೀವ್ರ ಆಡಚಣೆ ಉಂಟಾಗಿದೆ ಅಲ್ಲದೇ ಕೊಟ್ಟೂರು ತಾಲ್ಲೂಕಿನ ನೋಂದಣಿ ಕಾರ್ಯ ಹೆಚ್ಚಾಗಿದ್ದರೂ ಇಲಾಖೆ ಕೊಟ್ಟೂರಿನಲ್ಲಿ ಕಚೇರಿ ತೆರೆಯಲು ಮೀನ ಮೇಷ ಎಣಿಸುತ್ತಿದೆ .ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ. ಕೂಡಲೇ ಸರ್ಕಾರ ಉಪ ನೋಂದಣಿ ಕಚೇರಿ ತೆರೆಯದಿದ್ದರೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು