ಕಲಕೇರಿ ಗ್ರಾಮದ ಹದಗೆಟ್ಟ ಬಸ್ ನಿಲ್ದಾಣವನ್ನು ಸರಿಪಡಿಸಲು ಸಾರ್ವಜನಿಕರಿಂದ ಒಕ್ಕೊರಲಿನ ಆಗ್ರಹ.
ಕಲಕೇರಿ ಜೂನ್.11

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಬಸ್ ನಿಲ್ದಾಣದ ಪರಿಸ್ಥಿತಿ ಹದಗೆಟ್ಟು ಹೋಗಿದೆ.ಎರಡರಿಂದ ಮೂರು ವರ್ಷಗಳ ಕಾಲ ಆಯಿತು ಕಲಕೇರಿ ಬಸ್ ನಿಲ್ದಾಣದಲ್ಲಿ ಸಿಸಿ ರಸ್ತೆ ಆಗದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಕ್ಯಾರೆ ಅನ್ನುತ್ತಾರೆ ಮಳೆ ಬಂದರೆ ಸಾಕು ಬಸ್ಟ್ಯಾಂಡ್ ಒಳಗಡೆ ನಿಂತುಕೊಳ್ಳಲು ಸ್ಥಳ ಇರುವುದಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಬಸ್ಟ್ಯಾಂಡ್ ಒಳಗಡೆ ಸಿಸಿ ರಸ್ತೆ ಮಾಡಬೇಕು ನಮ್ಮ ಭಾಗದ ಶಾಸಕರು ಕೂಡ ಇದರ ಬಗ್ಗೆ ಗಮನ ಹರಿಸಬೇಕು ಅಧಿಕಾರಿಗಳನ್ನು ಕೇಳಿದರೆ ಇನ್ನೂ ಟೆಂಡರ್ ಆಗಿಲ್ಲ ಸರ್ ಅಂತ ಹೇಳ್ತಾ ಇದ್ದಾರೆ ಯಾಕೆಂದರೆ ಮಳೆ ಬಂದರೆ ಸಾಕು ಜನರಿಗೆ ಬಸ್ಟ್ಯಾಂಡ್ ಒಳಗಡೆ ಹೋಗೋದಕ್ಕೆ ಬಸ್ ಸ್ಟಾಪ್ ನಲ್ಲಿ ಕೆಸರು ಗದ್ದೆಯಾಗಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಕಲಕೇರಿ ಬಸ್ಟ್ಯಾಂಡ್ ಒಳಗಡೆ ಸಿಸಿ ರಸ್ತೆ ಮಾಡಬೇಕು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹ ಆಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.