ಐಹೊಳೆ ಅಮೃತ ಸರೋವರ ದಡದಲ್ಲಿ ಯೋಗ ದಿನ ಆಚರಣೆ.
ಐಹೊಳೆ ಜೂನ್.25

ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮೃತ ಸರೋವರ ದಡದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಉಸಿರಾಟದ ವ್ಯಾಯಮಗಳು ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ವಿವಿಧ ರೀತಿಯ ವಿವಿಧ ಆಸನಗಳನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಹಾಂತೇಶ್ ಕೋಟಿ, , ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಶಾಲಾ ಹೆಡ್ ಮಾಸ್ಟರ್ ಕೆ. ವಾಯ್ ವಾಲಿಕಾರ್, ಅಕೌಂಟೆಂಟ್ ಎಚ್ ಎಚ್ ಕುರಿ, ತಾಂತ್ರಿಕ ಸಹಾಯಕ ಅಜಿತ್ ಕೊಣ್ಣೂರ, ಮುಖ್ಯ ಗುರುಗಳು ಆರ್ ಎಚ್ ಗೌಡರ, ಪ್ರೌಢ ಶಾಲಾ ಶಿಕ್ಷಕ ಗುರುಲಿಂಗಯ್ಯ ಒರಗಿನಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಪರಸಪ್ಪ ಮಾದರ, ಜಗದೀಶ್ ಕೆಂದೂರ, ಗ್ರಾಪಂ ಸಿಬ್ಬಂದಿ ವರ್ಗ, ಕಾಯಕ ಮಿತ್ರರ ಸುಮಂಗಲಾ ಮಾದರ, ಶಾಲಾ ಮಕ್ಕಳು ಉಪಸ್ಥಿತರಿದ್ದರು.