ಮತ್ತೆ ಮೋದಿ ಪ್ರಧಾನಿ ಆಗಿದ್ದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ.
ಮಾರ್ಕಬ್ಬಿನಹಳ್ಳಿ ಜೂನ್.12

ಮೂರನೇ ಬಾರಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗ ಬೇಕೆಂದು ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನದ ವರೆಗೆ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತಿದ್ದ ಬಿಜೆಪಿ ಅಭಿಮಾನಿ ಯುವಕ ಯಲ್ಲಾಲಿಂಗ. ಪ. ಗುಜ್ಜಲಕರ ಜೂ.11 ರಂದು ಹರಕೆ ತೀರಿಸಿದ್ದಾನೆ.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಬಿಜೆಪಿ ಪಕ್ಷದ ಅಭಿಮಾನಿ ಯಲ್ಲಾಲಿಂಗ ಗುಜ್ಜಲಕರ್ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.

ಎಂದು ದೀರ್ಘ ದಂಡ ನಮಸ್ಕಾರ ಹಾಕುತ್ತಾ ಮಲ್ಲಿಕಾರ್ಜುನ ದೇವಸ್ಥಾನ ತಲುಪಿದ ಬಳಿಕ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಮಹಾತೇಶ ಬಿರಾದರ, ಪ್ರಕಾಶ ಡೊಣರಮಠ, ಶಿವರಾಜ ತಳವಾರ, ವಿಶ್ವಾನಾಥ ವಂದಾಲಮಠ, ಸುರೇಶ ಗೋನಾಳ, ಜಗುಸೌಕಾರ ತಡಕಲ್, ಮಲ್ಲು ಮಾವಿನಗಿಡದ, ಗುಜ್ಜಲಕರ್ ಕುಟುಂಬಸ್ಥರು, ಬಿಜೆಪಿ ಯುವ ಕಾರ್ಯಕರ್ತರು ಭಾಗಿಯಾಗಿದ್ದರು.
“ಬಾಕ್ಸ್ ಸುದ್ದಿ”…..
ಭಾರತ ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅತಿ ಅವಶ್ಯಕವಾಗಿದೆ. ಪ್ರಸ್ತುತ ಈ ಕಲಿಯುಗದಲ್ಲಿ ಭಾರತ ದೇಶಕ್ಕೆ ಅತ್ಯಅವಶ್ಯಕ ಕೊಡುಗೆಗಳು ನೀಡಿದ್ದಾರೆ. ಜಿಲ್ಲೆ,ರಾಜ್ಯ ಹಾಗೂ ದೇಶಾದ್ಯಂತ ವಿದ್ಯುತ್ ಸೌಲಭ್ಯ 24 ಘಂಟೆ ನರೇಂದ್ರ ಮೋದಿ ಸರಕಾರ ನೀಡಿದೆ. ರೈತರಿಗೆ ಪಿ ಎಂ ಕಿಸಾನ್ ಯೋಜನೆ, ಬಡ ಕುಟುಂಬಗಳಿಗೆ ಪಿ ಎಂ ಆವಾಸ್ ಯೋಜನೆ, ಗ್ಯಾಸ್ ಪ್ರಿ ನೀಡಿದ್ದಾರೆ. ಭಾರತದ ಸೈನಿಕರಿಗೆ ಅನುಕೂಲ ಮಾಡಿದ್ದಾರೆ. ಎಂದ ಬಿಜೆಪಿ ಪಕ್ಷದ ಅಭಿಮಾನಿ ಯಲ್ಲಾಲಿಂಗ ಗುಜ್ಜಲಕರ್ ಹೇಳಿದ್ದಾರೆ.
ವರದಿ:ಮಹಾಂತೇಶ ಹಾದಿಮನಿ ವಿಜಯಪುರ.