ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ – ಆಗ್ರಹಿಸಿ ತಮಟೆ ಚಳುವಳಿ.
ಬೆಳಗಾವಿ ಡಿ.15

ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಸಂಘಟನೆಗಳ ಒಕ್ಕೂಟದ ಬೆಳಗಾವಿ ಶಾಸಕರು ಮತ್ತು ಸಚಿವರು ರವರಿಗೆ ಪರಿಶಿಷ್ಟ ಜಾತಿಯವರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಶೀಘ್ರವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಗೊಳಿಸುವಂತೆ ಸದ್ಯ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಮಾದಿಗ ಜಾತಿಯ ಪರವಾಗಿ ಶೀಘ್ರದಲ್ಲಿ ಒಳ ಮೀಸಲಾತಿ ಜಾರಿ ಗೊಳಿಸುವಂತೆ ಮತ್ತು ವಿವಿಧ ಇಲಾಖೆಯ ಎಲ್ಲಾ ನೇಮಕಾತಿಗಳನ್ನು ಒಳ ಮೀಸಲಾತಿ ಜಾರಿ ಆಗುವವರೆಗೂ ತಡೆ ಹಿಡಿಯಬೇಕೆಂದು ಒಳ ಮೀಸಲಾತಿ ಪರವಾಗಿ ಸದನದಲ್ಲಿ ಧ್ವನಿಯೆತ್ತುವಂತೆ ಇಂದು ದಿನಾಂಕ:14-12-2024 ರಂದು ತಮಟೆ ಚಳುವಳಿಯೊಂದಿಗೆ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೇಬ್ಬಾಳ್ಕರ ರವರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಾ, ಪ್ರಶಾಂತ ರಾವ್ ಐಹೊಳೆ, ಅಜೀತ ಮಾದರ, ಮಾರುತಿ ಕೆಳಗೇರಿ, ಉದಯ ರೆಡ್ಡಿ, ಮಿಲಿಂದ್ ಐಹೊಳೆ, ಬಸವರಾಜ ದೊಡಮನಿ, ಪ್ರವೀಣ ಮಾದರ , ಪರಶುರಾಮ ವಂಟಮುರಿ, ವಿಷ್ಣು ಇಂಗಳಿ ಮುಂತಾದ ದಲಿತ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ