ಅಕ್ರಮ ಮಧ್ಯ ಮಾರಾಟ – ಕ್ರಮಕ್ಕೆ ಆಗ್ರಹ.
ಇಂಗಳಗಿ ಪಿಎ ಜೂನ್.12

ದೇವರ ಹಿಪ್ಪರಗಿ ತಾಲೂಕಿನ ಹರನಾಳ ಗ್ರಾಪಂ ವ್ಯಾಪ್ತಿಯ ಇಂಗಳಗಿ ಪಿಎ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಟಗಾರರ ಮೇಲೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಂದಗಿ ತಾಲೂಕು ಭಾರತೀಯ ದಲಿತ ಪ್ಯಾಂಥರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ರತ್ನಾಕರ ಆಗ್ರಹಿಸಿದರು.ಪಟ್ಟಣದ ಅಬಕಾರಿ ಇಲಾಖೆಯ ಕಛೇರಿ ಮುಂಭಾಗದಲ್ಲಿ ಅಕ್ರಮ ಸಾರಾಯಿ ಮಾರಟಗಾರರ ವಿರುದ್ಧ ಘೋಷಣೆ ಕೂಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮಧ್ಯ ಮಾರಾಟ ಇಂಗಳಗಿ ಪಿಎ ಗ್ರಾಮದಲ್ಲಿ ಸುಮಾರ ವರ್ಷಗಳಿಂದ ಮನೆ, ಕಿರಾಣಿ ಅಂಗಡಿ, ಪಾನ್ ಶಾಪ್‌ಗಳಲ್ಲಿ ರಾಜಾರೋಷವಾಗಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈಗಾಗಲೇ ಈ ವಿಷಯದ ಕುರಿತಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

ತಡೆಗಟ್ಟದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗ್ರಾಮದ ಮಹಿಳೆಯರೆಲ್ಲರೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಮದ ಮಹಿಳೆ ಮಲ್ಲಮ್ಮ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಸಾರಾಯಿ ಮಾರಾಟ ಮಾಡುವವರು ಬಂದ ಅಧಿಕಾರಿಗಳಿಗೆ ಹಣ ನೀಡುತ್ತಾರೆ. ಅದನ್ನು ಇವರ ತೆಗೆದುಕೊಂಡು ಹೋಗುತ್ತಾರೆ ಎಂದು ಆರೋಪಿಸಿದರು. ರೇಣುಕಾ ಕಟ್ಟಿಮನಿ, ಸಾವಿತ್ರಿ ಕಟ್ಟಿಮನಿ. ಮಾನಂದ ಕಟ್ಟಿಮನಿ,ಯಲ್ಲವ್ವ ಮಾದರ, ಭೀಮವ್ವ ಮಾದರ, ಯಲ್ಲವ್ವ ಕನ್ನೊಳ್ಳಿ, ರುಕುಮವ್ವ ಕಟ್ಟಿಮನಿ, ಸೋಮವ್ವ ರತ್ನಾಖರ, ಭಾರತಿ ಭಾವಿಮನಿ, ಚಂದ್ರವ್ವ ಭಾವಿಮನಿ, ಚಂದ್ರವ್ವ, ಕನ್ನೊಳ್ಳಿ, ಗುರಲಿಂಗವ್ವ ಕಟ್ಟಿಮನಿ, ರವಿ ಶಿರವಾಳ, ಮಲ್ಲಮ್ಮ ರತ್ನಾಕರ, ಸುಮಿತ್ರಾ ಜಮಾದಾರ, ಲಕ್ಷ್ಮಿಬಾಯಿ ಪೂಜಾರಿ, ನಂದವ್ವ ಹೊಸಮನಿ ಸೇರಿದಂತೆ ಗ್ರಾಮದ ಮಹಿಳೆಯರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.