“ರಕ್ತದಾನ ಮಹಾದಾನ”

ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ ರಕ್ತದಾನವೆಂಬುದು ಜೀವದಾನ ನಿಸ್ವಾರ್ಥದ ಮಹಾದಾನ, ಅತ್ಯಂತ ಪವಿತ್ರವಾದ ದಾನ ರಕ್ತವು ಜೀವ ದ್ರವ್ಯ ಒಬ್ಬ ವ್ಯಕ್ತಿ ನೀಡುವ ರಕ್ತವು ಮತ್ತೊಬ್ಬ ವ್ಯಕ್ತಿಗೆ ಜೀವ ನೀಡುವ ಸಂಜೀವಿನಿಯಾಗಿದೆ ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ

|| 1 ll

ರಕ್ತದ ಕೊರತೆಯಿಂದ ನರಳುತ್ತಿರುವರು ಬಹು ಪಾಲುಮಂದಿ ಆಹಾರವಿಲ್ಲದೆ ಕೃಶರಾಗಿಸಾಯುತ್ತಿರುವರು ಎಷ್ಟೋ ಮಂದಿ ರಕ್ತದ ಅಭಾವದಿಂದ ಜೀವ ತ್ಯೆಜಿಸುತ್ತಿರುವರು ಸಹಸ್ರಾರು ಮಂದಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರಿ ರಕ್ತ ನೀಡುವ ಹೃದಯ ವೈಶಾಲ್ಯವನ್ನು ಸರ್ವರೂ ಹೊಂದಿರಿ ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ

|| 2 ||

ಮಾನವ ಕೃತಕವಾಗಿ ಏನನ್ನಾದರೂ ಸೃಷ್ಟಿಸಬಲ್ಲ ಆದರೇ ರಕ್ತವನ್ನು ಮಾತ್ರ ಮರು ಸೃಷ್ಟಿ ಮಾಡಲಾರರಕ್ತವು ನಮ್ಮ ದೇಹದ ಅತ್ಯಮೂಲ್ಯ ಜೀವದ್ರವ್ಯ ದಾನ ದಾನಗಳಲ್ಲಿ ರಕ್ತದಾನ ಅಮೂಲ್ಯ ದಾನ ರಕ್ತ ದಾನವು ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ನೀಡ ಬಹುದಾದ ಅನನ್ಯ ಕೊಡುಗೆ ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ

|| 3 ||

ರಕ್ತ ದಾನದಿಂದ ಪಡೆಯಿರಿ ಆರೋಗ್ಯ ಭಾಗ್ಯವನ್ನು ರಕ್ತದಾನದಿಂದ ಕಡಿಮೆಯಾಗುವುದು ದೇಹದಲ್ಲಿನ ಕೊಬ್ಬಿನಂಶವು ರಕ್ತ ದಾನದಿಂದ ನಿವಾರಣೆ ಯಾಗುವುದು ಅಧಿಕ ರಕ್ತದೊತ್ತಡವು ವೃದ್ಧಿಯಾಗುವುದು ವ್ಯಕ್ತಿಯ ಜ್ಞಾಪಕ ಶಕ್ತಿಯು, ಕಾರ್ಯ ತತ್ಪರತೆಯೂ ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ

||4||

ರಕ್ತದಾನ ಮಾಡಿ ಸರ್ವ ರೋಗಗಳಿಂದ ಮುಕ್ತರಾಗಿ ನಿಮ್ಮ ನಿಮ್ಮ ಆರೋಗ್ಯವ ರಕ್ಷಿಸಿ ಕೊಳ್ಳಿರಿ ಆರೋಗ್ಯವೆ ಜೀವನ ಅನಾರೋಗ್ಯವೆ ಮರಣ ಜಾತಿ, ಧರ್ಮ, ಮತ ಬೇಧವಿಲ್ಲದೆ ಎಲ್ಲರೂ ರಕ್ತದಾನ ಮಾಡಿರಿ “ರಕ್ತದಾನ ಮಹಾದಾನ” ವೆಂಬ ಧ್ಯೇಯ ವಾಕ್ಯವ ಪಾಲಿಸಿರಿ ರಕ್ತದಾನ ಮಾಡಿರೋ ಓ ಎನ್ನ ಸೋದರ, ಸೋದರಿಯರೇ

||5||

ಎಂ. ಎಸ್. ಆಶಾಲತಾ,

ಶಾಖಾ ವ್ಯವಸ್ಥಾಪಕರು,

ಎಂ. ಡಿ. ಸಿ. ಸಿ. ಬ್ಯಾಂಕ್,

ಕೆ ಹೊನ್ನಲಗೆರೆ ಶಾಖೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button