ಆರೋಗ್ಯ ತಪಾಸಣಾ ಶಿಬಿರ ಸದ್ಬಳಕೆಗೆ ಸಲಹೆ.
ಹೂಡೇಂ ಜೂನ್.13

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸಮುದಾಯ ಭವನದಲ್ಲಿ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಕಾಮಧೇನು ಸಮುದಾಯ ಕಾರ್ಯನಿರ್ಹಿತ ಸಂಪನ್ಮೂಲ ಕೇಂದ್ರ ನಾಗರಕಟ್ಟೆ ಸಂಸ್ಥೆಯ ಕಡೆಯಿಂದ ಸಮುದಾಯದಲ್ಲಿರುವ ಕಣ್ಣಿನ ದೋಷವಿರುವ ಸಾರ್ವಜನಿಕರಿಗೆ ನಾಟಿ ವೈದ್ಯರಾದ ರಾಜಭಕ್ಷಿ ನಂದಿಪುರ ಇವರಿಂದ ಚಿಕಿತ್ಸೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಿಎಂಆರ್‌ಸಿ ವ್ಯವಸ್ಥಾಪಕರಾದ ಕವಿತಾ ಕುಮಾರಸ್ವಾಮಿ ಹಾಗೂ ಸಂಸ್ಥೆಯ ಯೋಜನಾಧಿಕಾರಿ ವಾಮದೇವ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಸಿಎಂಆರ್‌ಸಿ ವ್ಯವಸ್ಥಾಪಕರಾದ ಕವಿತಾ ಕುಮಾರಸ್ವಾಮಿ ಮಾತನಾಡಿ ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಇಂತಹಾ ಆರೋಗ್ಯ ಶಿಬಿರದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ನಾಗಮ್ಮ ಗದ್ದಿ ಸ್ವಾಮಿ, ಗ್ರಂಥಪಾಲಕರಾದ ಟಿ ಗುರುರಾಜ್, ಮುಖಂಡರಾದ ರಾಜಶೇಖರಪ್ಪ, ಹಿರಿಯ ಮಹಿಳೆ ಮನೆಕೊಟ್ಟೆ ಜೋತಿಮ್ಮ, ಬಳ್ಳಾರಿ ದಕ್ಷಿಣ ಮೂರ್ತಿ, ನರ್ಸಿಂಗ್ ಕಾಲೇಜ್ ಪ್ರಿನ್ಸಿಪಾಲ್ ರಾದ ಕೊಟ್ರೇಶ್ ಕವಿತಾ, ಮಲ್ಲಿಕಾರ್ಜುನ್ ಸ್ವಾಮಿ, ಪ್ರಸನ್ನ ಕುಮಾರ್ ಹಾಲಿನ ಡೈರಿ, ನಾಗಭೂಷಣ್ ತಾಯಿಕನಹಳ್ಳಿ ಸೇರಿದಂತೆ ಸಂಸ್ಥೆಯವರು, ಮುಖಂಡರು, ಸಾರ್ವಜನಿಕರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕೆ. ಹೊಸಹಳ್ಳಿ.