ಬಾರಿ ಮಳೆಯಿಂದ ತಾರಾಪೂರ ಆಲಮೇಲ – ಹೋಗುವ ರಸ್ತೆ ಸಂಪರ್ಕ ಬಂದ್.
ಆಲಮೇಲ ಸ.18




ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೇಶದ ಬೆನ್ನೆಲು ಆಗಿರುವ ರೈತನು ಭೂಮಿಯಲ್ಲಿ ಬೆಳೆದ ಹತ್ತಿ ತೊಗರಿ ಹೆಸರು ಕಬ್ಬು ಬೆಳೆಯುವ ರೈತರು ಸಾಲ ಶೂಲ ಮಾಡಿ ಬೀಜ ಎಣ್ಣೆ ಗೊಬ್ಬರು ಭೂಮಿಗೆ ಹಾಕಿ ರೈತರು ಕೈಕಟ್ಟಿ ಕುಂದ್ರುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಿಂಗಳ ಗಟ್ಟಲೆ ಸುರಿತ್ತಿರುವ ಮಳೆಯಿಂದ ರೈತನು ಕಂಗಾಲು ಯಾಗಿದ್ದಾನೆ ನಿನ್ನೆ ಸುರಿದ ಮಳೆಯಿಂದ ಆಲಮೇಲ ಭಾಗದಲ್ಲಿ ತಾರಾಪೂರ, ತಾವರಖೇಡ, ಕಡಣಿ, ಮದನಹಳ್ಳಿ, ಕುರುಬತಹಳ್ಳಿ, ಬ್ಯಾಡಗಿ, ಹಾಳ, ದೇವಣಗಾಂವ ರೈತರ ಬೆಳೆದ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಬೆಳೆ ನಾಶ ಆಗಿರುವುದರಿಂದ ಕೂಡಲೇ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಗ್ರಾಮದಲ್ಲಿ ನಿನ್ನೆ ಸುರಿದ ಮಳೆಯಿಂದ ತಾರಾಪೂರ ಗ್ರಾಮದ ರೈತರಾದ ಮುದಿಗೌಡ ಬಿರಾದಾರ ಇವರ ಎಂಟು ಎಕರೆ ಕಬ್ಬು ಬೆಳೆದ ಜಮೀನಕ್ಕ ನೀರು ನುಗ್ಗಿ ರುವುದರಿಂದ ಬೀಮಾಶ್ಯಾ ವಡ್ಡರ ಸುಮಾರು ಐದು ಎಕರೆ ಹತ್ತಿ ನೀರಿನಲ್ಲಿ ಮುನಿಗಿ ಹೋಗಿದೆ ಕಡಣಿ ರೈತರಾದ ಖಾಜಾ ಸಾಬ್ ಮುಲ್ಲಾ ಸುಮಾರು ನಾಲ್ಕು ಎಕ್ಕರೆ ಹತ್ತಿ ಹಾಗೂ ವಾಸಿಸುತ್ತಿರುವ ಪತ್ರಾಸ್ ಶೆಡ್ಡು ಮಳೆ ನೀರು ನುಗ್ಗಿ ರುವುದರಿಂದ ಆಲಮೇಲಕ್ಕೆ ಹೋಗುವ ರಸ್ತೆ ಸಂಪರ್ಕ ಬಂದ್ ಆಗಿರುವುದರಿಂದ ಬೈಕ್ ಸವಾರರು ನೀರಿನಲ್ಲಿ ದಾಟಲು ಹರ ಸಾಹಸ ಪಟ್ಟರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹೀರೆಮಠ ಆಲಮೇಲ