ನ.19 ರಂದು ಗಾಣಿಗ ಸಮಾಜದ ಸಮುದಾಯ ಭವನ ಉದ್ಘಾಟನೆ.
ಹುನಗುಂದ ನವೆಂಬರ್.15

ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಗಾಣಿಗ ಸಮಾಜದ ವತಿಯಿಂದ ನ.೧೯ ರಂದು ರವಿವಾರ ಬೆಳಗ್ಗೆ ೧೦.೩೦ ಗಂಟೆಗೆ ಅಮರಾವತಿ ರಸ್ತೆಯಲ್ಲಿರುವ ಗಾಣಿಗ ಸಮುದಾಯ ಭವನದಲ್ಲಿ ಗಾಣಿಗ ಸಮಾಜದ ಸಮುದಾಯ ಭವನ ಉದ್ಘಾಟನೆ ಮತ್ತು ಎರಡನೆಯ ಮಹಡಿಯ ಪೂಜಾ ಕಾರ್ಯಕ್ರಮ ಹಾಗೂ ಶಾಸಕ,ಸಂಸದರಿಗೆ ಸನ್ಮಾನ ಸಮಾರಂಭ ಜರುಗಲಿದೆ.ವಿಜಯಪುರ ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರಸ್ವಾಮಿಗಳು,ಕೋಲಾರ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥದೇವರು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದು.ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ,

ಗಾಣಿಗ ಸಮಾಹದ ಅಧ್ಯಕ್ಷ ನಿಂಗಪ್ಪ ಅಮರಾವತಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳವರು,ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಜ್ಯೋತಿ ಬೆಳಗಿಸಲಿದ್ದು, ಸಂಸದ ಪಿ.ಸಿ.ಗದ್ದಿಗೌಡ್ರ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದು.ಸಮಾಜದ ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ,ಪುರಸಭೆ ಸದಸ್ಯ ಚಂದಪ್ಪ ಕಡಿವಾಲ,ಮಹೇಶಪ್ಪ ಸಜ್ಜನ,ಬಸವಂತಪ್ಪ ಕುಂಟೋಜಿ,ಚಂದ್ರಶೇಖರ ಸೂಡಿ,ಶರಣಪ್ಪ ಕನ್ನೊಳ್ಳಿ,ಅಮೀನಪ್ಪ ಸಂದಿಗವಾಡ,ಬಸವರಾಜ ಇಸ್ಲಾಂಪೂರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ