ಮೊಳಕಾಲ್ಮುರು ಪಟ್ಟಣದಲ್ಲಿ ಪವಿತ್ರವಾದ ಬಲಿದಾನ ಬಕ್ರೀದ್ ಹಬ್ಬದಲ್ಲಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮೊಳಕಾಲ್ಮುರು ಜೂನ್.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣದಲ್ಲಿ ಈದ್ಗಾ ಮೈದಾನ ಜಾಮ್ರಿ ಮಸೀದಿಯಲ್ಲಿ ಇಂದು ಪವಿತ್ರವಾದ ಬಕ್ರಿದ್ ಹಬ್ಬವನ್ನು ತ್ಯಾಗ ಬಲಿದಾನ ಹಬ್ಬ ಎಂದು ಮುಸ್ಲಿಂ ಸಮುದಾಯದವರು ಜಾಮ್ರಿ ಮಸೀದಿಗೆ ತೆರಳಿ ಮತ್ತು ಇವರ ಮನೆಗಳಲ್ಲಿ ತೀರಿ ಕೊಂಡಂತ ತಂದೆ ತಾಯಿ ಸಂಬಂಧಿಕರನ್ನು ಮನೆಯ ಒಳಗೆ ಕರೆದು ಕೊಳ್ಳುವ ಪದ್ಧತಿ ಈ ಬಕ್ರಿದ್ ಹಬ್ಬದಲ್ಲಿ ಇರುತ್ತದೆ. ಮತ್ತು ಈ ಮುಸ್ಲಿಂ ಜನಾಂಗದವರ ಬಡವರಿಗೆ ಮಾಂಸ ಹಣ ಬಟ್ಟೆ ಇದ್ದಂತ ಶ್ರೀಮಂತರು ಬಡವರಿಗೆ ದಾನವಾಗಿ ಕೊಡುತ್ತಾರೆ.

ಈ ಹಬ್ಬದಲ್ಲಿ ಮತ್ತು ಅಲ್ಲಿನ ಮಸೀದಿಯಲ್ಲಿ ಇರುವ ಗುರುಗಳು ಮತ್ತು ಮುಸ್ಲಿಂ ಜನಾಂಗದವರು ಪ್ರಾರ್ಥನೆಯನ್ನು ಸಲ್ಲಿಸಿ ಮತ್ತು ಮುಸ್ಲಿಂ ಸಮುದಾಯದವರು ಒಬ್ಬರಿ ಗೊಬ್ಬರು ತಬ್ಬಿಕೊಂಡು ಸಲಾಂ ಜಿ ಎನ್ನುತ್ತಾ ಪ್ರಾರ್ಥನೆ ಮಂದಿರದಲ್ಲಿ ಅಲ್ಲಾ ಎಂದು ಪ್ರಾರ್ಥನೆ ಮಾಡುತ್ತಾ ಪವಿತ್ರವಾದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಹಾಗೂ ಈ ಬಕ್ರಿದ್ ಹಬ್ಬಕ್ಕೆ ಮಾನ್ಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಭೇಟಿ ನೀಡಿ ಪವಿತ್ರವಾದ ಬಕ್ರಿದ್ ಹಬ್ಬದಲ್ಲಿ ಭಾಗವಹಿಸಿ ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಂ ಸಮುದಾಯದವರ ಜೊತೆ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಸಮುದಾಯದವರ ಬಕ್ರೀದ್ ಹಬ್ಬಕ್ಕೆ ಶುಭ ಕೋರಿದರು ಮಾನ್ಯ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು