ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ಮೂಲಕ – ಸಿಎಂ.ರವರಿಗೆ ಮನವಿ.
ಮಾನ್ವಿ ಜ.27

ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ತಾಲೂಕ ಅಧಿಕಾರಿ ನಟರಾಜ ಸರಕಾರದ ಕಾರನ್ನು ಸ್ವಂತಕ್ಕೆ ಬಳಸಿ ಕೊಳ್ಳುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸೌಲಭ್ಯ ನೀಡದೆ ವಂಚಿಸಿದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಎನ್.ಮೂರ್ತಿ ಬಣದ ಪದಾಧಿಕಾರಿಗಳು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಸರಕಾರದ ನಿಯಮದ ಪ್ರಕಾರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು, ಆದರೆ ನಟರಾಜ ಕೇಂದ್ರ ಸ್ಥಾನದಲ್ಲಿರದೆ ನಿತ್ಯ ಮಸ್ಕಿಯಿಂದ ಸರಕಾರದ ಕಾರು ಬಳಸಿ ಕೊಂಡು ಬರುತ್ತಿದ್ದು, ನಟರಾಜ ಸರಕಾರದ ನಿಯಮಗಳನ್ನೆ ಉಲ್ಲಂಘನೆ ಮಾಡಿದ್ದಾರೆಂದು ದಲಿತ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷ ಮಾರೆಪ್ಪ.ಮಳ್ಳಿ ಕಿಡಿ ಕಾರಿದರು.ವಸತಿ ನಿಲಯದ ಮಕ್ಕಳು ಸೌಲಭ್ಯಗಳಿಂದ ವಂಚನೆಯಾದರು ಟೌನ್ ಶೆಡ್ ಗಳಲ್ಲಿ ಜೀವನ ಕಳೆಯುತ್ತಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ನಟರಾಜು ಅವರು ಸರಕಾರದ ಸಂಬಳ ತಿಂದರು ಸಹ ಸೇವೆ ಮಾಡದೆ ಸರಕಾರದ ನಿಯಮಗಳನ್ನ ಉಲ್ಲಂಘಿಸಿದ ಆಧಾರ್ ಮೇಲೆ ಕೆಸಿಎಸ್ ಆರ್ 1957 ಮತ್ತು ನಡತೆ ನಿಯಮ 1966 ರ ಪ್ರಕಾರ ಸೇವೆಯಿಂದ ವಜಾ ಗೊಳಿಸಬೇಕು, ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿ ಎನ್.ಮೂರ್ತಿ ಬಣದಿಂದ ಉಗ್ರವಾಗಿ ಹೋರಾಟ ಹಮ್ಮಿ ಕೊಳ್ಳಲಾಗುತ್ತದೆ ಎಂದು ಎಚ್ವರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ