ವಿದ್ಯಾರ್ಥಿಗಳಿಗೆ ಪರಿಸರದ ಮಾಹಿತಿ ಹಾಗೂ ಸಸಿ ನಾಟಿ ಕಾರ್ಯಕ್ರಮ.
ಉಜ್ಜಿನಿ ಜೂನ್.20

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ದಿನಾಂಕ 19 – 06 – 2018 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಜ್ಜಿನಿ ಗ್ರಾಮದ ಶ್ರೀ ದಾರುಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಶ್ರೀಯುತ ನವೀನ್ ಕುಮಾರ್ ಯೋಜನಾಧಿಕಾರಿಗಳು ಇವರ ಮಾರ್ಗದರ್ಶನ ದಂತೆ ಊರಿನ ಹಿರಿಯ ನಾಗರಿಕರು ಚನ್ನವೀರಯ್ಯ ಗ್ರಾಮ ಪಂಚಾಯತಿ ಅಧ್ಯಕ್ಷರು ಡಿ ನಿಂಗಮ್ಮ ಉಪಾಧ್ಯಕ್ಷರು ಶ್ರೀಮತಿ ಪುಷ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀಮತಿ ನೇತ್ರಾವತಿ ಮತ್ತು ಶ್ರೀ ಮಲ್ಲಿಕಾರ್ಜುನ ಒಕ್ಕೂಟದ ಅಧ್ಯಕ್ಷರೂ ಮಂಜಣ್ಣ ಹುಲಿಗೆಮ್ಮ ನೇತ್ರಾವತಿ ಅವರ ಉಪಸ್ಥಿತಿಯಲ್ಲಿ ಪರಿಸರದ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ ಪ್ರಭಂದ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಚನ್ನ ವೀರಯ್ಯ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಗ್ರಾಮಕ್ಕೆ ಉಪಯೋಗವಾಗುವಂತ ಕೆರೆ ಹೂಳೆತ್ತುವ ಕಾರ್ಯಕ್ರಮ ಜ್ಞಾನದೀಪ ಶಿಕ್ಷಕರ ಒದಗನೆ ಮದ್ಯವರ್ಜನ ಶಿಬಿರ ದಂತ ಸೌಲಭ್ಯ ಒದಗಿಸಿದೆ ದೇವಸ್ಥಾನ ಗಳಿಗೆ ಅನುದಾನ ನೀಡಿದೆ ಪೂಜ್ಯರು ವೀರೇಂದ್ರ ಹೆಗ್ಗಡೆ ಅವರಿಗೆ ನಾವು ಚಿರ ಋಣಿ ಆಗಿದ್ದೇವೆ ಎಂದರು. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಇರಬೇಕು ಮರ ಬೆಳೆಸಬೇಕು ಅದರಿಂದ ಮಳೆ ಬಂದು ಊರಿಗೆ ಕೆರೆ ತುಂಬುತ್ತದೆ ಎಂದರು ನಂತರ ಶಾಲಾ ಆವರಣದಲ್ಲಿ ಸಸಿ ನಾಟಿ ಮಾಡಿಲಾಯಿತು. ಮುಖ್ಯ ಗುರುಗಳು ರೂಪ ಮತ್ತು ಮೇಲ್ವಿಚಾರಕರ ಸೇವಾ ಪ್ರತಿನಿಧಿಗಳ ಶಾಲೆಯ ಶಿಕ್ಷಕರು ಸೇರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ. ಕೊಟ್ಟೂರು.