ಕೂಡ್ಲಿಗಿ, ಕಳವು ಪ್ರಕರಣ ಭೇದಿಸಿದ ಪೊಲೀಸರು, ಕಳ್ಳರ ಸೆರೆ ಹಾಗೂ ಚಿನ್ನಾಭರಣ ಬೈಕ್ – ಜಪ್ತಿ.

ಕೂಡ್ಲಿಗಿ ಜೂನ್.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಜನೆವರಿ 14 ರಂದು ಜರುಗಿದ್ದ, ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕಳವು ಮಾಡಿದ್ದ ಕಳ್ಳರನ್ನು ಬಂಧಿಸಿದ್ದು , ಅವರಿಂದ ಕಳುವಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೂ 19 ರಂದು ಡಿವೈಎಸ್ಪಿ ನೇತೃತ್ವದಲ್ಲಿ ಸಿಪಿಐ ಹಾಗೂ ಪಿಎಸ್ಐ ರವರು, ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಜನೆವರಿ 14 ರಂದು ಜರುಗಿದ ಕಳ್ಳತನ ಪ್ರಕರಣವನ್ನು, ವಿಜಯನಗರ ಜಿಲ್ಲಾ ಎಸ್ಪಿ ರವರ ಮಾರ್ಗದರ್ಶನದಲ್ಲಿ. ಕೂಡ್ಲಿಗಿ ಪೊಲೀಸರು ಡಿವೈಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪುರ ನೇತೃತ್ವದಲ್ಲಿ, ಸಿಪಿಐ ಸುರೇಶ್ ಎಸ್ ತಳವಾರ ಹಾಗೂ ಪಿಎಸ್ಐ ಧನುಂಜಯಕುಮಾರ ರವರು. ತಮ್ಮ ಅಪರಾಧ ವಿಭಾಗದ ಸಿಬ್ಬಂದಿಯೊಂದಿಗೆ ನಿರಂತರ ಕಾರ್ಯಚರಣೆ ನಡೆಸಿ, ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.”ಪ್ರಕರಣಗಳ ವಿವರ”:- ಜನೆವರಿ 14 ರಂದು ಕೂಡ್ಲಿಗಿ ಪಟ್ಟಣದ ಬಾಪೂಜಿನಗರದಲ್ಲಿ, ಕೆ.ತಿಪ್ಪೇರುದ್ರಪ್ಪ ಎಂಬುವವರ ಮನೆಗೆ ಹಾಕಲಾಗಿದ್ದ. ಬೀಗವನ್ನು ಹಾಗೂ ಚಿಲಕದ ಕೊಂಡಿಯನ್ನು ಯಾರೋ ಕಳ್ಳರು, ಮುರಿದು ಮನೆಯೊಳಗೆ ಹೋಗಿ ಶೋಧ ನಡೆಸಿದ್ದಾರೆ. ಗಾಡ್ರೇಜ್ ಮತ್ತು ಗೋಡೆ ಅಲ್ಮಾರದ ಬಾಗಿಲುಗಳನ್ನು ತೆಗದು, ಅದರಲ್ಲಿದ್ದ 52 ಗ್ರಾಂ ಬಂಗಾರದ ಆಭರಣಗಳು ಬೆಲೆ 2.34.000 ₹. ಮತ್ತು 1.00.000 ₹ ನಗದು ಹಣವನ್ನು, ಒಟ್ಟು 3.34.000 ₹ ಬೆಲೆ ಬಾಳುವುಗಳನ್ನು. ಯಾರೋ ಕಳ್ಳರು ಕಳವು ಮಾಡಿಕೊಂಡು ಪರಾರಿ ಯಾಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅದೇ ರೀತಿಯಾಗಿ ಅಂದಿನ ದಿನದಂದೇ, ಬಾಪೂಜಿನಗರದ ಡಿ. ಹನುಮಂತಪ್ಪ ಎಂಬುವವರ ಮನೆಗೆ ಬೀಗ ಹಾಕಿದ್ದನ್ನು. ಹಾಗೂ ಚಿಲಕ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಮನೆಯೊಳು ಹೊಕ್ಕು, ಗಾಡ್ರೇಜ್ ತೆಗೆದು ಅದರಲ್ಲಿದ್ದ 86 ಗ್ರಾಂ ಬಂಗಾರದ ಆಭರಣಗಳು. ಅದರ ಬೆಲೆ 3.44.೦೦೦ ₹ ಹಾಗೂ 50.000 ₹ ನಗದು ಹಣ. ಒಟ್ಟು 39.4.000 ₹ ಬೆಲೆ ಬಾಳುವುಗಳನ್ನು, ಕಳವು ಮಾಡಿಕೊಂಡು ಪರಾರಿ ಯಾಗಿರುತ್ತಾರೆಂದು. ದೂರುದಾರರು ನೀಡಿರುವ ಹೇಳಿಕೆಯನ್ನಾಧರಿಸಿ, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. “ತನಿಖಾ ತಂಡದ ನೇತೃತ್ವ”:- ಈ ಎರೆಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿಜಯನಗರ ಜಿಲ್ಲಾ ಎಸ್ಪಿ ರವರ ಮಾರ್ಗದರ್ಶನದಂತೆ. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪುರ ರವರ ನೇತೃತ್ವದಲ್ಲಿ, ಸಿಪಿಐ ಸುರೇಶ ಹೆಚ್.ತಳವಾರ ಹಾಗೂ ಪಿಎಸೈ ಧನುಂಜಯ ಕುಮಾರವರು. ತಮ್ಮ ಅಪರಾಧ ತನಿಖಾ ತಂಡದೊಂದಿಗೆ, ಪ್ರಕರಣಗಳ ಪತ್ತೆ ಕಾರ್ಯ ಕೈಗೊಂಡಿದ್ದರು. “ಆರೋಪಿಗಳು ಅಂದರ್”:-ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಾದ ಸಂಡೂರು ತಾಲೂಕು ಬೊಮ್ಮಘಟ್ಟೆ ಗ್ರಾಮದ ಅಜ್ಜಯ್ಯ. ಅದೇ ಗ್ರಾಮದ ಮಲ್ಲಿಕಾರ್ಜುನ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಪತ್ತೆ ಮಾಡಿ, ಇವರನ್ನು ಜೂ 19 ರಂದು ದಸ್ತಗಿರಿ ಮಾಡಲಾಗಿರುತ್ತದೆ.”ಚಿನ್ನಾಭರಣ ವಶಕ್ಕೆ”:-ಆರೋಪಿತರಿಂದ 20 ಗ್ರಾಂ ತೂಕದ ಬಂಗಾರದ ಚೈನ್ ಸರ, 20 ಗ್ರಾಂ ತೂಕದ ಎರೆಡು ಎಳೆಯ ಬಂಗಾರದ ಸರ, 2 ಗ್ರಾಂ ತೂಕದ ಬಂಗಾರದ ಉಂಗುರ, 10 ಗ್ರಾಂ ತೂಕದ ಬಂಗಾರದ ಬೆಂಡೋಲೆ, 13 ಗ್ರಾಂ ತೂಕದ 2 ಜೊತೆ ಬಂಗಾರದ ಹ್ಯಾಂಗೀಸ್, 13 ಗ್ರಾಂ ತೂಕದ 3 ಬಂಗಾರದ ಸಣ್ಣ ಉಂಗುರಗಳು. ಎಲ್ಲಾ ಒಟ್ಟು 2.34.000 ₹ ಬೆಲೆಯಒಟ್ಟು 78 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪತ್ತೆ ಕಾರ್ಯ ಇನ್ನೂ ಮುಂದುವರೆದಿರುತ್ತದೆ ಎಂದು, ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. “ತನಿಖಾ ತಂಡ”:-ಪತ್ತೆ ಕಾರ್ಯ ತಂಡದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ, ಸಿ.ಪ್ರಕಾಶ್ ರವರ ಲೀಡರ್ ಶಿಫ್ ನಲ್ಲಿ. ಗುಡೇಕೋಟೆ ಠಾಣೆಯ ಸಿಬ್ಬಂದಿಯಾದ ಅಂಜಿನಪ್ಪ, ಚಂದ್ರಶೇಖರಗೌಡ, ತಿಪ್ಪೇಸ್ವಾಮಿ, ಬಂಡೆ ರಾಘವೇಂದ್ರ, ಮಂಜುನಾಥ, ಶಿವಕುಮಾರ ಭಾಗಿಯಾಗಿ ಪ್ರಕರಣ ಭೇದಿಸಿದ್ದಾರೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿದೆ.”ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸನೆ”:- ಪ್ರಕರಣ ಭೇದಿಸಲು ಪತ್ತೆಕಾರ್ಯ ಕೈಗೊಂಡು, ಯಶಸ್ವಿ ಯಾದ ಇಲಾಖಾ ತನಿಖಾಧಿಕಾರಿಗಳಿಗೆ. ಮತ್ತು ಇಲಾಖಾ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಜಿಲ್ಲಾ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಸಾಲುಮನೆ ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button