ಅರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತತಿರುವುದು – ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದಿಂದ ಖಂಡನೆ.

ಕೊಟ್ಟೂರು ಜೂನ್.20

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ದಿನಾಂಕ ಜೂನ್ 20, 2024 ರಂದು ಮಾನ್ಯ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಹೊಸ ದೆಹಲಿ ಇವರಿಗೆ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.ಖ್ಯಾತ ಲೇಖಕಿ ಅರುಂಧತಿ ರಾಯ್ ಮತ್ತು ಶೇಕ್ ಶೋಖಾತ್ ಹುಸೇನ್ ಮಾಜಿ ಪ್ರಾಧ್ಯಾಪಕ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಸಿಪಿಐ (ಎಂಎಲ್) ಲಿಬರೇಶನ್ ಖಂಡನೆ ಭಯೋತ್ಪಾದನಾ-ವಿರೋಧಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶ ಪೂರ್ವಕವಾಗಿ ತಳುಕು ಹಾಕಿ ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ಬಲವಾಗಿ ಖಂಡಿಸಿ ಗುರುವಾರ ಕೊಟ್ಟೂರು ಉಪ ತಹಸಿಲ್ದಾರ್ ಅನ್ನದಾನೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು ಆರುಂಧತಿ ರಾಯ್ ಅವರು ಸಂವಿಧಾನ ವಿರೋಧಿ, ಜನ ವಿರೋಧಿ ನೀತಿಗಳು, ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಾ ಬಂಧವರು, ದಮನಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯಗಳನ್ನು ಗುರುತಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಜನ ವಿರೋಧಿ, ಅಪ್ರಜಾತಾಂತ್ರಿಕ ಆಳುವ ವರ್ಗಗಳ ನಿಜಬಣ್ಣವನ್ನು ಬಯಲು ಗೊಳಿಸಿದ್ದಾರೆ.ದೇಶದಲ್ಲಿ ಜನಪರ ಹೋರಾಟಗಳನ್ನು ಸಂಘಟಿಸುವ ಯತ್ನ ನಡೆಸಿದರೆ, ಅವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಜನಪರ ಚಳಿವಳಿಗಾರರಿಗೆ ಎಚ್ಚರಿಕೆಯ ರೂಪದಲ್ಲಿ ತಿಳಿಸುವ ಉದ್ದೇಶದಿಂದ ಸರಣಿ ಬಂಧನ ನಡೆದಿದೆ. ಅಲ್ಲದೇ ದೇಶದ ಜನಪರವಾದ ಜನ ಚಳವಳಿಯನ್ನು ಬಗ್ಗು ಬಡಿಯುವುದು ಸರಕಾರಗಳ ದುರುದ್ದೇಶವಾಗಿದೆ.14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಶಿಕ್ಷಣ ತಜ್ಞ ಶೇಖ್ ಶೌಕತ್ ಹುಸೇನ್ ಅವರನ್ನು ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿದ ನಿರ್ಧಾರವನ್ನು ಕೈ ಬೀಡಬೇಕು. ಚುನಾವಣಾ ಫಲಿತಾಂಶದ ನಂತರ ಈ ರೀತಿ ಮಾಡಿರುವುದನ್ನು ನೋಡಿದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಪ್ರತೀಕಾರದ ಕ್ರಮ ಈ ಕ್ರಮದ ವಿರುದ್ಧ ಎಲ್ಲಾ ಪ್ರಜಾತಂತ್ರವಾದಿಗಳು ಧ್ವನಿ ಎತ್ತಬೇಕೆಂದು. ಯುಎಪಿಎಯಂತಹ ಗಂಭೀರವಾದ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರವು ಜನರ ಪ್ರಜಾತಾಂತ್ರಿಕ ಹಕ್ಕುಗಳ ಧ್ವನಿಯನ್ನು ಹೊಸಕಿ ಹಾಕುವ ಉದ್ದೇಶವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ.

ಅರುಂಧತಿ ರಾಯ್ ಅವರ ಮೇಲೆ ಯುಎಪಿಎ ಸೆಕ್ಷನ್ ಅಡಿಯಲ್ಲಿ ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯ ಬೇಕು ಹಾಗೂ ಕಾಯ್ದೆ ರದ್ದು ಗೊಳಿಸಬೇಕೆಂದು ಸಿಪಿಐಎಂಎಲ್ ಲಿಬರೇಶನ್ ಒತ್ತಾಯಿಸುತ್ತಿದೆ.2010 ರಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಭಾಷಣಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ನೀಡಿರುವುದು ಖಂಡನೀಯ,ಈ ಘಟನೆಯನ್ನೇ ನೆಪವಾಗಿಟ್ಟು ಕೊಂಡು ಅತ್ಯಂತ ಕಠಿಣ ಕಾನೂನಿನಡಿಯಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲದೇ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸಿರುವುದು ಇದರ ಉದ್ದೇಶ ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು, ದಲಿತ ಚಿಂತಕರನ್ನು ಜೈಲಿಗಟ್ಟಿ ನ್ಯಾಯವನ್ನು ಶಾಶ್ವತವಾಗಿ ಸಮಾದಿ ಮಾಡುವುದಾಗಿದೆ. ಹಾಗಾಗಿ ಕೂಡಲೇ ಸುಳ್ಳು ಕೇಷಕ್ಗಳನ್ನು ವಜಾಗೊಳಿಸಿ, ಮಾನವ ಹಕ್ಕುಗಳ ಹೋರಾಟಗಾರರು, ದಲಿತ, ದಮನಿತರ ಪರ ಚಿಂತಕರನ್ನು ಬಿಡುಗಡೆ ಗೊಳಿಸುವ ಮೂಲಕ ನ್ಯಾಯಪರತೆ ಎತ್ತಿ ಹಿಡಿಯಬೇಕು ಆ ಮೂಲಕ ಜನ ವಿರೋಧಿ ನಿಲುವುಗಳಿಗೆ ಕಡಿವಾಣ ಹಾಕಬೇಕೆಂದು ಸಿಪಿಐಎಂಎಲ್ ಲಿಬರೇಶನ್ ಆಗ್ರಹಿಸುತ್ತೇದೆ.ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ,ಕೆ ಪರಸಪ್ಪ ತಾಲೂಕು ಸಮಿತಿ ಸದಸ್ಯ, ಎಂ ಯು ಕರಿಬಸಯ್ಯ ಕೆ ಅಯ್ಯನಹಳ್ಳಿ ಗ್ರಾಮದ ಘಟಕದ ಅಧ್ಯಕ್ಷ,ಪಿ ಚಂದ್ರಶೇಖರ್ ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರು ,ಮಲ್ಲನಾಯಕನಹಳ್ಳಿ ಅಂಜಿನಪ್ಪ ,ದುರ್ಗದಾಸ್ ಮಂಗನಹಳ್ಳಿ ,ಗಣೇಶ್ ,ಸಿದ್ದಲಿಂಗ ಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು, ಕರಿಮ್, ಅಬ್ದುಲ್ ಸಾಬ್, ಹಸೇನ್ ಜಿ ಶಾನ್ ,ಹಾಗೂ ವೆಂಕಟಸ್ವಾಮಿ ಸಿಪಿಐ , ಪೋಲಿಸ್ ಸಿಬ್ಬಂದಿಯ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ.ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button