“ಪ್ರತಿ ಕ್ಷಣವೂ ಅನವರತದ ಪ್ರೀತಿಯ ದಿನ”…..

ಪ್ರತಿ ಕ್ಷಣವು ಅನುದಿನ ಪ್ರೀತಿಯ ದಿನ
ಹೆತ್ತವರು ತೋರುವ
ವಾತ್ಸಲ್ಯ ಅನುಕ್ಷಣವು
ಅಂತರಾತ್ಮದ ಶಕ್ತಿ
ಅಕ್ಕ ತಂಗಿಯ ಅಕ್ಕರೆ
ಸದಾ ಹೆಸಿರಿಗೆ ಉಸಿರು
ಅಣ್ಣತಮ್ಮರ ಒಲುಮೆಯು
ಬುಜ ಬಲದ ಶಕ್ತಿಯು
ದೊಡ್ಡಪ್ಪ ಚಿಕ್ಕಪ್ಪರ ಕರುಳು
ಬಳ್ಳಿಯ ಮಮತೆಯು
ದೊಡ್ಡಮ್ಮ ಚಿಕ್ಕಮ್ಮರು
ನಂಬಿಕೆಯ ಒಲವು
ಗಂಡ ಹೆಂಡತಿಯ
ಬಾಳ ಬೆಳಗುವ ಅನುರಾಗವು
ಅಜ್ಜ ಅಜ್ಜಿಯರ
ನಿಸ್ವಾರ್ಥದ ಮೋಹವು
ಮಾವ ಅತ್ತಿಯರು ಹಿತ
ಬಯಸುವ ಒಲುಮೆಯು
ಅಳಿಯ ಸೊಸೆಯರ
ಸಹಾಯ ಹಸ್ತದ ಪ್ರೀತಿಯು
ಮಗಳ ಮಗನ ಕರುಳಿನ
ಕನಿಕರದ ಪ್ರೀತಿಯು
ಸ್ನೇಹ ಮಿತ್ರರ ನಂಬಿಕೆಯು
ಶ್ವಾಸದ ಸಪ್ತ ಸ್ವರ ನಾದವು
ಗೆಳಯ ಗೆಳತಿಯರ ದೃಢ
ಮನ ಇರದ ಚೆಲುವು
ನರೆ ಹೊರೆಯವರು
ಸಹನೆಯ ಕಾಳಜಿಯು
ಹಿರಿಯರು ಅನುಭವದ ಸಾರವು
ಅಮೃತ ಸವಿಯ ರುಚಿಯು
ಇಂತಪ್ಪ ಪ್ರೀತಿಯು
ಪ್ರೇಮ ನಮ್ಮತನದವು
ಸಹಕಾರ ಸಹಾಯವು
ನೀರಿನ ಗುಣದ ಭಾವವು
ವರ ಪ್ರದಾಯ ಸಿರಿ ಐಶ್ವರ್ಯವು
ಪ್ರತಿ ಕ್ಷಣವು ಅನಲರತದ
ಪ್ರೀತಿ ದಿನವುಸಿರಿ ಶೇಖರಣೆಯ
ಹೃದಯದ ಕಣಜವು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ವಿಶ್ವ ಆರೋಗ್ಯ ಸಂಜೀವಿನಿ
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.