ಗುಂಡೇವಾಡಿ ಗ್ರಾಮದಲ್ಲಿ ಎಮ್ಮೆಯು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಿರುವ ಎಮ್ಮೆಯನ್ನು ರಕ್ಷಿಸಿದ ಅಗ್ನಶಾಮಕ ದಳದ ಸಿಬ್ಬಂದಿಯವರು.
ಅಥಣಿ ಜೂನ್.21

ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಪವಾಡೆಪ್ಪ ಶಂಕರಗೌಡ ಪಾಟೀಲರವರ ಎಮ್ಮೆಯು ಅಂದಾಜು 30×30 ಅಡಿ ವಿಸ್ತಾರವಾದ 40 ರಿಂದ 45 ಅಡಿ ಆಳದ ಅದರಲ್ಲಿ 05 ಅಡಿ ಆಳದ ತೆರೆದ ನೀರಿರುವ ಭಾವಿ ಆಕಸ್ಮಿಕವಾಗಿ ಕಾಲು ಜಾರಿ ಎಮ್ಮೆ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆ ದೂರವಾಣಿ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲ ವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 40 ರಿಂದ 45 ಅಡಿ ಆಳದ ಅದರಲ್ಲಿ 05 ಅಡಿ ಭಾವಿಯಲ್ಲಿ ಹೋಸ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 01:05 ಒಂದು ಘಂಟೆ ಐದು ನಿಮಿಷಗಳ ಕಾಲ ಶ್ರಮವಹಿಸಿ ಸಿಬ್ಬಂದಿಯವರು ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಎಮ್ಮೆಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಗುಂಡೇವಾಡಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಎಮ್ಮೆಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.ಅಗ್ನಿಶಾಮಕ ತಂಡದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರಾದ ಮಲ್ಲಿಕಾರ್ಜುನ ಬಂದಾಳ ರವರ ನೇತ್ರತ್ವದಲ್ಲಿ ಅನಿಲ ಬಡಚಿ, ಮಲ್ಲನಗೌಡ ನಾಯ್ಕ , ಸಂಜೀವ್ ಚೌಗಲಾ ಕಲ್ಮೇಶ್ ಚಿಮ್ಮಡ , ಸಂತೋಷ್ ಚೌಗಲಾ , ಭಾಗವಹಿಸಿದ್ದರು.