ಸ್ಲಂ ಬೋರ್ಡ್ ವಿತರಿಸಿದ ಹಕ್ಕು ಪತ್ರಕ್ಕೆ ನೋಂದಣಿ ಫಾರಂ ನಂಬರ್ 3 ಗೆ ಮುಖ್ಯಮಂತ್ರಿಗಳಿಗೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯ.

ಹೊಸಪೇಟೆ ಜೂನ್.22

ಹೊಸಪೇಟೆ ನಗರದ ನಿರ್ಗತಿಕ ಕಡು ಬಡವ ದೀನ ದಲಿತರಿಗೆ ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗದ ಜನಾಂಗದವರಿಗೆ ಸಾವಿರಾರು ಖಾಲಿ ಜಾಗದ ಹಕ್ಕು ಪತ್ರಗಳನ್ನು ನೀಡಿದ್ದು ನೀಡಿದಂತ ಹಕ್ಕು ಪತ್ರಗಳನ್ನು ತೆಗೆದು ಕೊಂಡು ನೋಂದಣಿ ಇಲಾಖೆಗೆ ಹಾಗೂ ನಗರ ಸಭೆ ಫಾರಂ ನಂ. 3 ಮಾಡಲಿಕ್ಕೆ ಸುಮಾರು ಫಲಾನುಭವಿ ಜಾಗದ ಹಕ್ಕು ಪತ್ರಗಳ ತೆಗೆದು ಕೊಂಡು ಮಾಡಿಸಿ ಕೊಳ್ಳಲಿಕ್ಕೆ ಹೋದಾಗ ನೋಂದಣಿ ಇಲಾಖೆ ಹಾಗೂ ನಗರ ಸಭೆ ಈ ಹಕ್ಕು ಪತ್ರಗಳಿಗೆ ಮಾಡಿ ಕೊಳ್ಳಲಿಕ್ಕೆ ಬರಲ್ಲ ಎಂದು ಅಧಿಕಾರಿಗಳು ಹೇಳಿ ಕಳಿಸುತ್ತಿದ್ದು ಯಾಕೆ ಬರಲ್ಲ ಎಂದು ವಿದ್ಯಾವಂತ ಫಲಾನುಭವಿಗಳು ಪ್ರಶ್ನೆ ಮಾಡಿ ಕೇಳಿದರೆ ಇವುಗಳಿಗೆ ಇನ್ನೂ ಮೇಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಆದೇಶ ಬರುವವರೆಗೂ ನಾವು ಏನು ಮಾಡಲಿಕ್ಕೆ ಬರಲ್ಲ ಆದೇಶ ಯಾವಾಗ ಬರುತ್ತದೆ ಎಂದು ಕೇಳಿದರೆ ಇನ್ನೂ ಸ್ವಲ್ಪ ದಿನಗಳಲ್ಲಿ ಆದೇಶ ಬರಬಹುದು ಗ್ಯಾರಂಟಿ ಇಲ್ಲ.

ಎಂದು ಅಧಿಕಾರಿಗಳು ಹೇಳುತ್ತಾರೆ ಯಾಕೆ ಆದೇಶ ಬೇಕು ಈ ಹಕ್ಕು ಪತ್ರ ಸರ್ಕಾರವೇ ನೀಡಿದ್ದು.ಸರಕಾರ ನೀಡಿದ ಹಕ್ಕು ಪತ್ರಗಳಿಗೆ ಆದೇಶ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರೆ ಅಧಿಕಾರಿಗಳಿಂದ ಉತ್ತರ ನೀಡಲಾರದೆ ಮೌನಕ್ಕೆ ಶರಣರಾಗಿದ್ದಾರೆ ಕೊಳಗೇರಿ ಅಭಿವೃದ್ಧಿ ನಿಗಮದ ಉಪ ವಿಭಾಗ ಎಇಇ ತಿಮ್ಮಣ್ಣ ಇವರ ಆದೇಶ ಇದ್ದರೂ ಸಹ ಆದೇಶವನ್ನು ಮುಚ್ಚಿಟ್ಟು ವಿನಾಕಾರಣ ಮಾಡಿಸಿ ಕೊಡ ಬಾರದೆಂಬ ಮನೋಭಾವನೆಯನ್ನು ಇಟ್ಟು ಕೊಂಡಿದ್ದರಿಂದ ಇನ್ನೂ ಆದೇಶ ಬಂದಿಲ್ಲ ಎಂದು ಉತ್ತರ ನೀಡುತ್ತಿದ್ದರಿಂದ ಇದರ ಬಗ್ಗೆ ಸಂಬಂಧಪಟ್ಟ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪ್ರಸಾದ ಅಬ್ಬಯ್ಯ ಇವರ ಗಮನಕ್ಕೆ ತಂದು ಮನವಿ ಮಾಡಿ ಕೊಂಡಾಗ ಆದೇಶ ಮಾಡಿ ವರ್ಷಗಳೇ ಕಳೆದಿವೆ ಮತ್ತೆ ಆದೇಶ ಯಾಕೆ ಬೇಕು ಎಂದು ಸಂಬಂಧಪಟ್ಟ ಕೊಳಗೇರಿ ಉಪ ವಿಭಾಗದ ಎಇಇ ತಿಮ್ಮಣ್ಣ ಇವರ ಜೊತೆಗೆ ಫೋನಿನಲ್ಲಿ ವಿಚಾರಿಸಿ ಕೇಳಿದಾಗ ಅವರಿಗೆ ಇಲ್ಲಾ ಸಾರ್ ಮಾಡಿ ಕೊಡುತ್ತೇನೆ ಎಂದು ಒಪ್ಪಿಕೊಂಡ ನಂತರ ಇದುವರೆಗೂ ಜಾಗದ ಹಕ್ಕು ಪತ್ರದ ಫಲಾನುಭವಿಗಳಿಗೆ ನೊಂದಣಿ ಇಲಾಖೆಗೆ ಹಾಗು ನಗರ ಸಭೆ ಫಾರಂ ನಂ.3 ಮಾಡಿಸಿ ಕೊಡಲಿಕ್ಕೆ ಕವರಿಂಗ್ ಲೆಟರ್ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸಿ ಕೊಡಲಾರದೆ ಇದ್ದು ನಿರಂತರವಾಗಿ ಕಾಲಹರಣ ಮಾಡಿ ಫಲಾನುಭವಿಗಳಿಗೆ ವಿನಾಃ ಕಾರಣಗಳಿಂದ ಬಡ ಫಲಾನುಭವಿಗಳಿಗೆ ತೊಂದರೆಯನ್ನು ನೀಡುತ್ತಿದ್ದರಿಂದ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುಮಾರು ಸಲ ತಿಳಿಸಿದ್ದರು.

ಸಹ ಪ್ರಯೋಜನ ವಾಗಲಾರದೆ ಇದ್ದರಿಂದ ಕೊಳಗೇರಿ ಅಭಿವೃದ್ಧಿ ಉಪ-ವಿಭಾಗ ಎಇಇ ತಿಮ್ಮಣ್ಣ ಇವರನ್ನು ಅಧಿಕಾರ ದುರ್ಬಳಕೆ ಕಾಯ್ದೆ ಅಡಿಯಲ್ಲಿ ಅಮಾನತು ಮಾಡಿ ಫಲಾನುಭವಿಗಳಿಗೆ ನೋಂದಣಿ ಇಲಾಖೆಯಲ್ಲಿ ನೋಂದಾಣಿ ಮಾಡಿಸಿ ಹಾಗೂ ನಗರ ಸಭೆಯಲ್ಲಿ ಫಾರಂ ನಂ.3 ಮಾಡಿಸಲಿಕ್ಕೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಶಿಸ್ತಿನ ಆದೇಶ ಮಾಡಿಸಿ ಬಡ ನಿರ್ಗತಿಕ ಫಲಾನುಭವಿಗಳಿಗೆ ಅನುಕೂಲ ಮಾಡಿ ಕೊಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕರು ಎಚ್. ವೆಂಕಟೇಶ್. ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್. ನಂದಿಹಳ್ಳಿ. ತಾಲೂಕ ಅಧ್ಯಕ್ಷರು ಸಿ. ರಮೇಶ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ನಾಗರಾಜ್ ಸಮಿತಿಯು ಒಕ್ಕೊರಲಿನ ಆಗ್ರಹ ಪಡಿಸುತ್ತದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button