ಕಾನಾ ಹೊಸಹಳ್ಳಿ ಪೋಲಿಸ್ ಠಾಣೆಯಲ್ಲಿ ದಲಿತ ಸಭೆ.

ಕೆ. ಹೊಸಹಳ್ಳಿ ಜೂನ್.24

ಕಾನಾ ಹೊಸಹಳ್ಳಿ ಪೋಲಿಸ್ ಠಾಣೆಯ ಆವರಣದಲ್ಲಿ ದಲಿತರ ಕುಂದು ಕೊರತೆ ಸಭೆ ಕೂಡ್ಲಿಗಿ ಡಿ.ವೈ.ಎಸ್.ಪಿ ಮಲ್ಲೇಶಪ್ಪ ಮಲ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ದಂದು ಜರಗಿತು. ಹೊಸಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಜರುಗಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕುಂದು ಕೊರತೆಗಳ ಸಭೆಯನ್ನು ಉದ್ದೇಶಿಸಿ ಮಾನ್ಯ ಡಿ.ವೈ.ಎಸ್.ಪಿ ಮಲ್ಲೇಶಪ್ಪ ಮಲ್ಲಾಪುರ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಸಮಾನ ನಾಗರಿಕರ ಹಿತ ಶಕ್ತಿಯಿಂದ ಪೊಲೀಸ್ ಬಲವನ್ನು ಬಲಪಡಿಸಲು ಹಲವು ಬಗೆಯ ಹತ್ತಾರು ಯೋಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಾವುದೇ ರೀತಿಯಲ್ಲಿ ದಲಿತರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ದಲಿತರು ತಮ್ಮ ನ್ಯಾಯಯುತ ಬೇಡಿಕೆ ಸಮಸ್ಯೆಗಳ ಇತ್ಯಾರ್ಥಕ್ಕಾಗಿ ತಮ್ಮನ್ನು ಯಾವುದೇ ಸಂದರ್ಭದಲ್ಲಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ ಕೊಳ್ಳಬಹುದು ಸಂವಿಧಾನ ಕಾನೂನಿನ ಅರಿವು ನೆರವು ಕುರಿತು ಇಂದಿನ ಯುವಕ ಯುವತಿಯರಲ್ಲಿ ಅರಿವು ಮೂಡಿಸಲು ಅನೇಕ ಕಾನೂನು ಹರಿವು ನೆರವು ಕಾರ್ಯಕ್ರಮ ಮಾಡಲಾಗಿದೆ. ಹೊಸಹಳ್ಳಿಯಲ್ಲಿ ಕೂಡ ಹಿಂದಿನ ವರ್ಷ ಗ್ರಾಪಂ ವತಿಯಿಂದ ಸಂಬಂಧಪಟ್ಟ ನ್ಯಾಯಾಲಯದ ಪೊಲೀಸ್ ಇಲಾಖೆಯ ಸಹ ಯೋಗದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಮಾಡಲಾಗಿದೆ. ಈ ಬಾರಿಯೂ ಒಂದು ದಿನಾಂಕ ನಿರ್ಧರಿಸಿ ಕಾರ್ಯಕ್ರಮ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕೆಲವು ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ, ಯುವಕರು ಐಪಿಎಲ್ ಇನ್ನಿತರ ಗೇಮ್ ಗಳನ್ನು ಮೊಬೈಲಲ್ಲಿ ಆಡಿ ಹಾಳಾಗುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಿ ಇವರಿಂದ ಹಾಳಾಗದಂತೆ ತಮ್ಮ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಲವು ದಲಿತ ಮುಖಂಡರು ಈ ಸಭೆಯಲ್ಲಿ ಕೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಅಕ್ರಮವಾಗಿ ಮಧ್ಯ ಮಾರಾಟ ಮಾಡುವವರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಪುನಃ ಇಂಥ ಘಟನೆಗಳು ನಡೆಯದಂತೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದರು. ಕೊಟ್ಟೂರು ವೃತ್ತದ ಸಿಪಿಐ ಶ್ರೀ ವೆಂಕಟಸ್ವಾಮಿಯವರು ದಲಿತರ ಕುಂದು ಕೊರತೆಗಳ ಸಭೆಯನ್ನು ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಿಎಸ್ಐ ಹೆಚ್ ನಾಗರತ್ನಮ್ಮ, ಎಎಸ್ಐ ಜಿಲಾನ್ ಭಾಷ, ಪೋಲಿಸ್ ಪೇದೆ ತಿಪ್ಪೆರುದ್ರಪ್ಪ ದಲಿತ ಮುಖಂಡರಾದ ಟಿ ಗಂಗಾಧರ, ಡಿ ಎಂ ಈಶ್ವರಪ್ಪ, ತುಂಬರಗುದ್ದಿ ದುರಗೇಶ್, ಖಾನಾ ಮಡಗು ದುರುಗಪ್ಪ, ಯೋಗಿ ಕರಿಬಸಪ್ಪ.ಮುಖಂಡರಾದ ಫೋಟೋ ಸಿದ್ದಲಿಂಗಪ್ಪ, ಯುವ ಮುಖಂಡ ಸೂರ್ಯಪ್ರಕಾಶ್, ಬೋರಣ್ಣ, ಜಟ್ಟಲಿಂಗನ ಹಟ್ಟಿ ಬಸವರಾಜ್, ಯಂಬಾಳೆ ವೆಂಕಟೇಶ್ ಜೋಗಿಹಳ್ಳಿ ಸಿದ್ದಪ್ಪ, ರಜನಿಕಾಂತ,ಸಣ್ಣ ಮೈಲಪ್ಪ ದಂಡಪ್ಪ, ನಡುಲು ಮನೆ ನಾಗರಾಜ, ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದಲಿತ ಮುಖಂಡರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಸಾರ್ವಜನಿಕರು ಇದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button