ಕೃಷಿ ಕಾರ್ಯಗಳಲ್ಲಿ ನಿರತರಾಗಿರುವ ರೈತರು.
ಕಂದಗಲ್ಲ ಜೂನ್.25

ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಉತ್ತಮ ಇಳುವರಿಗೆ ಭರವಸೆ ದಾಯಕವಾದ ರೋಹಿಣಿ ಮಳೆ ಕಂದಗಲ್ಲ ಭಾಗದಲ್ಲಿ ಉತ್ತಮವಾಗಿ ಸುರಿದಿದೆ. ಇದರಿಂದ ತಿಂಗಳ ಹೆಸರು, ತೊಗರಿ, ಎಳ್ಳು, ಸಜ್ಜಿ, ಸೂರ್ಯಕಾಂತಿ, ಮತ್ತಿತರ ಬೆಳೆಗಳ ಬಿತ್ತನೆ ಕಾರ್ಯ ಮುಗಿದಿದೆ. ರೋಹಿಣಿ ಮಳೆಗೆ ಮೃಗಶಿರ ಸಾಥ ಕೊಟ್ಟಿದ್ದರಿಂದ ಬಿತ್ತಿದ ಬೀಜಗಳು ಮೊಳಕೆ ಒಡೆದು ಈಗ ಹೊಲಗಳು ಹಚ್ಚು ಹಸಿರಾಗಿ ಕಂಗೊಳಿಸುತ್ತಿವೆ.ರೈತರಿಂದ ಎಡಿ ಹೊಡೆಯುವ ಕಾರ್ಯ ಜೋರು, ರೋಹಿಣಿ ಮೃಗಶಿರ ಮಳೆಗಳು ಬಿಟ್ಟು ಬಿಡದೆ ಸುರಿದಿದ್ದರಿಂದ ಹೆಸರು, ತೊಗರಿ ಬೆಳೆಗಳಲ್ಲಿ ಕಸ ಬೆಳೆಯುತ್ತಿದ್ದು ರೈತರು ಎಡಿ ಹೊಡೆಯುವ ಮೂಲಕ ಕಸ ನಿಯಂತ್ರಣಕ್ಕೆ ಮುಂದಾಗಿದ್ದು ಈಗ ಎಡಿ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ . ಮಹಿಳಾ ಕೃಷಿ ಕಾರ್ಮಿಕರಿಗೆ ಮತ್ತು ಎತ್ತುಗಳಿಗೆ ಭಾರಿ ಡಿಮ್ಯಾಂಡ್ ಕೆಲ ರೈತರು ಮಹಿಳಾ ಕೂಲಿ ಕಾರ್ಮಿಕರರನ್ನು ಕರೆದೊಯ್ದು ಕಳೆ ನಿಯಂತ್ರಿಸುತ್ತಿದ್ದಾರೆ. ಮಹಿಳಾ ಕೃಷಿ ಕಾರ್ಮಿಕರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಬ್ಬ ಮಹಿಳಾ ಕಾರ್ಮಿಕರಿಗೆ ದಿನ ಒಂದಕ್ಕೆ 200 ಕೂಲಿ ನೀಡಿದರೆ ಕಳೆ ನಿಯಂತ್ರಣಕ್ಕೆ ಎಡಿ ಹೊಡೆಯಲು ಎತ್ತುಗಳಿಗೆ ಭಾರಿ ಡಿಮ್ಯಾಂಡ್ ಇದೆ. ಒಂದು ದಿನದ ನಾಲ್ಕು ಎಕರೆ ಕೃಷಿ ಭೂಮಿಯ ಎಡಿ ಹೊಡೆಯಲು 1500 ರೂ. ತೆಗೆದು ಕೊಳ್ಳುತ್ತಾರೆ. ಇತ್ತೀಚಿಗೆ ರೈತರು ಎತ್ತುಗಳಿಂದ ಒಕ್ಕಲುತನ ಮಾಡುವುದನ್ನು ಕಡಿಮೆ ಮಾಡಿ ಈಗ ಹೊಸ ಯಂತ್ರವಾದ ಟ್ರ್ಯಾಕ್ಟರ್ ಗಳಿಂದ ಕೃಷಿ ಕಾರ್ಯ ಮಾಡಿಸುತ್ತಿದ್ದು ಈಗ ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆ ಯಾಗುತ್ತಿರುವುದರ ಕಾರಣವಾಗಿದೆ. ಕೆಲವೇ ರೈತರು ಎತ್ತುಗಳಿಂದ ಕೃಷಿ ಮಾಡುವುದರಿಂದ ರೈತರಿಗೆ ಬೇಕಾದ ಸಮಯಕ್ಕೆ ಎತ್ತುಗಳು ಸಿಗದಿರುವುದು ಸಮಸ್ಯೆಯಾಗಿದೆ.ಎಡಿ ಹೊಡೆಯುವುದರಿಂದ ಮಣ್ಣು ಮೃದುವಾಗುತ್ತದೆ, ಎತ್ತುಗಳ ಮೂಲಕ ಎಡೆ ಹೊಡೆಯುವುದರಿಂದ ಬೆಳೆಗಳ ಮಧ್ಯದಲ್ಲಿ ಕಸ ನಿಯಂತ್ರಣ ಮಾಡುವುದರಿಂದ ಮಣ್ಣು ಮೃದುವಾಗುವುದರ ಜೊತೆಗೆ ಮಳೆ ಬಂದಾಗ ತೇವಾಂಶ ಹೆಚ್ಚು ಹಿಡಿದಿಟ್ಟು ಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಬೆಳೆಗಳ ಬೇರಿಗೂ ಮಣ್ಣು ಬೀಳುವುದರಿಂದ ಹೆಚ್ಚಿನ ಇಳುವರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಡಿ ಹೊಡೆಯುವ ಕೃಷಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.ಹೆಸರು ಬೆಳೆಗೆ ರೋಗ ಬಾಧೆ, ಸತತ ಸುರಿದ ಮಳೆಗೆ ಭೂಮಿ ಹೆಚ್ಚು ತಂಪಾಗಿ ಅಲ್ಲಲ್ಲಿ ಹೆಸರು ಬೆಳೆಗೆ ಹಳದಿ ರೋಗ ಬಂದ ದೊಂದಿಗೆ ಕೀಟಗಳು ಕಂಡು ಬಂದಿದ್ದು ರೈತರು ಆತಂಕ ಇಡುವಂತಾಗಿದೆ. ರೋಗದ ನಿಯಂತ್ರಣಕ್ಕೂ ರೈತರು ಮುಂದಾಗಿರುವುದು ಕಂಡು ಬಂದಿದೆ. ಈಗ ರೈತರು ಖುಷಿಯಾಗಿದ್ದಾರೆ, ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆ ಬಾರದೇ ರೈತರು ಕೈ ಸುಟ್ಟು ಕೊಂಡಿದ್ದರು. ಬೀಜ ಗೊಬ್ಬರ ಸಜ್ಜು ಮಾಡಿ ಕೊಂಡು ಭೂಮಿ ಹದಗೊಳಿಸಿ ಬಿತ್ತನೆಗೆ ಮುಂದಾಗಿದ್ದರು. ಆದರೆ ಸರಿಯಾಗಿ ಮಳೆ ಬಾರದೆ ಕಷ್ಟ ಅನುಭವಿಸಿದ್ದರು. ಸದ್ಯ ಕಂದಗಲ್ಲ ಭಾಗದ ರೈತರಿಗೆ ಪ್ರಸಕ್ತ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು ಪ್ರತಿ ವರ್ಷ ಹೀಗೆ ಮಳೆ ಸುರಿದರೆ ತಿಂಗಳ ಹೆಸರು, ಸಜ್ಜಿ,ಎಳ್ಳು, ತೊಗರಿ, ಸೂರ್ಯಕಾಂತಿ, ಬೆಳೆಗಳು ಉತ್ತಮ ಫಸಲು ಬರುತ್ತವೆ. ಹೀಗಾಗಿ ರೈತರು ಸದ್ಯ ಖುಷಿಯಲ್ಲಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ. ಇಲಕಲ್ಲ.