ಸರ್ಕಾರಿ ಶಾಲಾ ಮಕ್ಕಳ ಸಹಾಯಕ್ಕೆ ನಿಂತ ನಿರುಪಾದಿ ಕೆ ಗೋಮರ್ಸಿ.
ಕುನ್ನಟಗಿ ಜೂನ್.25

ನಿಮ್ಮಿಂದ, ನಿಮಗಾಗಿ, ನಾವು ವೇದಿಕೆ ವತಿಯಿಂದ ನಿನ್ನೆ ದಿನಾಂಕ 24.06.2024 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಕುನ್ನಟಗಿ ಗ್ರಾಮದಲ್ಲಿ 2024-25 ರ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ಸುಮಾರು 20 ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್, ನೋಟ್ ಬುಕ್, ಪೆನ್ನು, ಪೆನ್ಸಿಲ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರುಪಾದಿ ಕೆ ಗೋಮರ್ಸಿ ನಮ್ಮ ವೇದಿಕೆಯು ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಶ್ರಮ ಪಡುತ್ತಿದೆ. ನಮ್ಮ ವೇದಿಕೆಯ ಉದ್ದೇಶವೂ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳ ವಸ್ತುಗಳನ್ನು ವಿತರಿಸುವುದು ಹಾಗೂ ಮಕ್ಕಳು ಕಲಿಕೆಯಲ್ಲಿ ಉತ್ಸಾಹ ಉಲ್ಲಾಸ ಆಸಕ್ತಿಯಿಂದ ಕಲಿಯುವಂತೆ ಮಾಡುವುದು. ಮಕ್ಕಳ ಪಾಲಕ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸವು ಹೊರೆ ಆಗದಂತೆ ನೋಡಿ ಕೊಳ್ಳುವುದಾಗಿದೆ ಜೊತೆಗೆ ಸರ್ಕಾರಿ ಶಾಲೆ ಕಲಿಕೆಯ ಗುಣಮಟ್ಟ, ಪರಿಸರ, ಮಹತ್ವದ ಕುರಿತಾದ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಅಜೀದ್ ಪಾಶ, ಅಯ್ಯಪ್ಪ ಮೇಟಿ, ಶರಣಪ್ಪ ಬೇರಗಿ, ಶಂಶುದ್ದೀನ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ಶಾಲೆಯ ಆಡಳಿತ ಮಂಡಳಿ ಭಾಗವಹಿಸಿದ್ದರು.