ಜಮಖಂಡಿಯಲ್ಲಿ ನುಡಿ ನಮನ ಕಾರ್ಯಕ್ರಮ.
ಜಮಖಂಡಿ ಜೂನ್.25

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ್ ಬಣ ದಿಂದ ಜಮಖಂಡಿ ತಾಲೂಕ ಸಂಚಾಲಕರಾದ ಉದಯ್ ಕಡಕೋಳ ಇವರ ನಿಧನದ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ವತಿಯಿಂದ ನಿಧನ ಹೊಂದಿದ ಉದಯ್ ಕಡಕೋಳ ಅವರಿಗೆ ನುಡಿ ನಮನ ಕಾರ್ಯಕ್ರಮ ಮಾಡಲಾಯಿತು. ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಕುಟುಂಬಕ್ಕೆ 1 ಲಕ್ಷ ಸಹಾಯ. ಧನ ನೀಡಲಾಯಿತು ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶಾಮರಾವ್ ಘಾಟಗೆ ಅವರು ಮಾತನಾಡಿ ತಾಲೂಕಿನ ಅನ್ಯಾಯಕ್ಕೊಳಗಾದ ಪ್ರತಿಯೊಂದು ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ ಎಂದರು ರಾಜು ಮನ್ನಿಕೇರಿ ಮಾತನಾಡಿ ಉದಯ್ ಕಡಕೊಳ ಅವರಿಗೆ 50 ಸಾವಿರ ರೂ ಕೊಡುವುದಾಗಿ ಘೋಷಣೆ ಮಾಡಿದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವರ್ಧಮಾನ್ ನ್ಯಾಮಗೌಡ ಅವರು 25 ಸಾವಿರ ರೂಪಾಯಿ ಮಾಮುನ್ ಪಾರತನಳ್ಳಿ ಹಾಗೂ ತೌಪಿಕ್ ಪಾರತನಳ್ಳಿ ಸೇರಿ 50,000 ಸಹಾಯ ಧನ ಕೊಟ್ಟರು ಕಾರ್ಯಕ್ರಮದ ಪೂರ್ವದಲ್ಲಿ ಜಮಖಂಡಿ ಮತ ಕ್ಷೇತ್ರದ ಜನಪ್ರಿಯ ಹಿಂದಿನ ಶಾಸಕರಾದ ಸನ್ಮಾನ್ಯ ಶ್ರೀ ಆನಂದ ನ್ಯಾಮಗೌಡ ರವರು ಉದಯ್ ಕಡಕೋಳ ಅವರ ಕುಟುಂಬಕ್ಕೆ 50,000 ಸಹಾಯಧನ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ F Y ದೊಡ್ಡಮನಿ ಕೆಂಪಣ್ಣ ಸಾಗ್ಯ ಚಂದ್ರು ಚಕ್ರವರ್ತಿ ಮಹಿಳಾ ರಾಜ್ಯ ಸಂಚಾಲಕಿ ಶೋಭ ಕಟ್ಟಿಮನಿ ರಾಜು ಮಣ್ಣಿಕೇರಿ ದಾನೇಶ್ ಘಾಟಗೆ ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಈಶ್ವರ್ ವಾಳೇನವರ್ ಮಹೇಶ್ ಕೋಳಿ ರಾವತ್ ತಳಕೇರಿ ದೇವೇಂದ್ರ ಹಾದಿಮನಿ ಆನಂದ ಬೆಳ್ಳಾರಿ ವೆಂಕಟೇಶ್ ಮೂರ್ತಿ ಆನೇಕಲ್ ರಮೇಶ್ ಸಣ್ಣಕ್ಕಿ ಚನ್ನು ಕಟ್ಟಿಮನಿ ಮಾರುತಿ ಮಾದರ್ ಪ್ರಕಾಶ್ ಹುಗ್ಗಿನವರ್ ಅನೇಕರು ಮಾತನಾಡಿದರು ಹಣಮಂತ ಚಿಮ್ಮಲಗಿ ಸ್ವಾಗತಿಸಿದರು ಪ್ರಾಸ್ತಾವಿಕವಾಗಿ ಚಂದ್ರಕಾಂತ ಸಿಂಗೆ ಅವರು ಮಾತನಾಡಿದರು ಮುತ್ತಣ್ಣ ಮೇತ್ರಿ ವಂದಿಸಿದರು.