ಕನ್ನಡ ಫಿಲಂ ಚೇಂಬರ್ ವತಿಯಿಂದ ಆರೋಗ್ಯ ಇಲಾಖೆಯ ವೈದ್ಯಕೀಯ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ – ವೈ.ಎಂ ಪೂಜಾರ ರವರಿಗೆ ಒಲಿದು ಬಂದ ಸಿರಿಗಳು.
ಇಂಡಿ ಆ.25

ವೈ.ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಕನ್ನಡ ಫಿಲಂ ಚೇಂಬರ ವತಿಯಿಂದ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವವಿಸಲಾಯಿತು. ಕನ್ನಡ ಚೆಂಬರ್ ಅಧ್ಯಕ್ಷ ರವೀಂದ್ರ ನಿರ್ದೇಶಕ. ಜೆ.ಎಸ್ ಅಗಡಿ ನಟಿ ಭೂಮಿಕಾ ನಟ ಬೇಲೂರು ಮಹೇಶ್ ಹಾಸ್ಯ ನಟ ರಾಯ ಕೋಕಿಲ. ಕಾಳಿ ಸ್ವಾಮಿ. ನಟಿ ಸವಿ ಪ್ರಕಾಶ್ ಚಂದನ ವಾಹಿನಿ ನಿರೂಪಕಿ. ಹಾಗೂ ಸಂಗೀತ ಕಲಾವಿದರು ನಾಗಭರಣ ಚಲನ ಚಿತ್ರ. ರಂಗಭೂಮಿ ಕಲಾವಿದರು ಉಪಸ್ಥಿತರಿದ್ದರು.ವೈ.ಎಂ ಪೂಜಾರ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ವೈದ್ಯಕೀಯ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿಸನ್ಮಾನ್ಯ ಶ್ರೀ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ ಶಿಕಾರಿಪುರ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದ ಸಮುದಾಯದ ಜನರಿಗೆ ಆರೋಗ್ಯ ತಲುಪಿಸುವಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಶಿಕಾರಿಪುರ ಮೂಲದಿಂದ ಪರಶುರಾಮ್ ಚೌಟಿಗೆ ಜಾನಪದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತರು ಪೂಜಾರ ಒಬ್ಬ ಉತ್ತಮ ಸಾಧಕ ಸಾಧನೆಗಳ ಸಾಧಕರ ಪಟ್ಟಿಯಲ್ಲಿ ಆಯ್ಕೆ ಮಾಡಿ ಕಳಿಸಿದ್ದು ಪ್ರಸ್ತುತ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಸೇವಾ ಮನೋಭಾವನೆ ಕಳಕಳಿಗೆ ಗ್ರಾಮೀಣ ಸೇವಾ ಸಂಸ್ಥೆ ಹಾಗೂ ಸನ್ಮಾನ್ಯ ಶ್ರೀ ಯಶವಂತರಾವ್ ಗೌಡ ಪಾಟೀಲ ಶಾಸಕರು ವಿಶ್ವ ಮಾನವ ಚೇತನ ಪ್ರಶಸ್ತಿ ನೀಡಿದ್ದು.

ರಕ್ತದ ಕೊರತೆಯಿಂದ ಬಳಲುತ್ತಿರುವಾಗ ವಿಜಯಪುರ ಜಿಲ್ಲಾ ರಕ್ತ ನಿಧಿ ಘಟಕ ಸರ್ಕಾರಿ ಆಸ್ಪತ್ರೆಗೆ ಅಧಿಕಾರಿ ಸಿಬ್ಬಂದಿಗಳಿಗೆ ನೆನಪಾಗುವುದೇ ವೈ.ಎಂ ಪೂಜಾರ. ರಕ್ತದ ಕೊರತೆ ಯಿಂದ ಹೋಗುವ ಜೀವಗಳು ಉಳಿಸಲು. ಸ್ಥಳೀಯ ಧಾರ್ಮಿಕ ಮುಖಂಡರು ಸಂಘ ಸಂಸ್ಥೆಗಳ. ಚುನಾಯಿತ ಪ್ರತಿನಿಧಿಗಳ ಯುವ ರಕ್ತ ಧಾನಿಗಳ ಮನವೊಲಿಸಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆ ಯಿಂದ ಹೋಗುವ ಜೀವಗಳು ಉಳಿಸುವ ಪುಣ್ಯಾತ್ಮ ಎಂದು ಜನರು ಮಾತನಾಡುತ್ತಾರೆ. ವಯೋ ವೃದ್ಧರು ಕಣ್ಣು ಪೊರೆಯಿಂದ ಕಣ್ಣು ಕಾಣದೆ ಕಂಗಾಲಾಗಿ ಬದುಕುತ್ತಿರುವವರಿಗೆ ಉಚಿತ ಕಣ್ಣಿನ ಆಪರೇಷನ್ ಕ್ಯಾಂಪುಗಳು ಆಯೋಜನೆ ಅಂದರ ಬಾಳಿಗೆ ಬೆಳಕಾಗುತ್ತಿರುವುದು. ತಾಯಿ ಮಗುವಿನ ಆರೈಕೆ. ಸಾಂಕ್ರಾಮಿಕ ಹಾಗೂ ಅಸಂಕ್ರಮಿಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು.

ಜೊತೆಗೆ ಶಾಲಾ ಕಾಲೇಜುಗಳ ಹದಿ ಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಗುರಿಗೆ ತಕ್ಕ ಸಾಧಕರು ಮುಂಚೂಣಿಯ ಮಾರ್ಗದರ್ಶಕರು ಮೇಲ್ವಿಚಾರಣೆಯ ಅಧಿಕಾರಿಗಳು. ಪ್ರಶಂಸೆ ನೀಡಲಾಗಿದ್ದು. ಇದನ್ನು ಮನಗಂಡು ಕನ್ನಡ ಫಿಲಂ ಚೇಂಬರ್ ವತಿಯಿಂದ ಆರೋಗ್ಯ ಇಲಾಖೆಯ ವೈದ್ಯಕೀಯ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿರುತ್ತಾರೆ.