ಕೆಂಪೇಗೌಡ ಜಯಂತಿಗೆ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳ ಗೈರು ಹಾಜರಿ – ತಹಶೀಲ್ದಾರ್ ಕೆಂಡಾಮಂಡಲ.
ಕೂಡ್ಲಿಗಿ ಜೂನ್.29

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಗುರುವಾರ ರಂದು ಸರ್ಕಾರದ ಆದೇಶದಂತೆ ಕೆಂಪೇಗೌಡರ ಜಯಂತಿಯನ್ನು ಸರಳವಾಗಿ ತಾಲೂಕಾ ಆಡಳಿತ ಕಚೇರಿಯಲ್ಲಿ ಕೆಂಪೇಗೌಡರ ಭಾವ ಚಿತ್ರವನ್ನು ಅಳವಡಿಸಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಮಾನ್ಯ ತಾಲೂಕಾ ದಂಡಾಧಿಕಾರಿಗಳಾದ ಎಂ ರೇಣುಕ ಇವರ ಸಮ್ಮುಖದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಈ ಬಾರಿ ಮೊದಲನೇ ವರ್ಷವಾಗಿ ಸರ್ಕಾರ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡುವುದರ ಮೂಲಕ ಜಯಂತಿ ಆಚರಣೆಯ ವರದಿಯನ್ನು ಸಲ್ಲಿಸುವಂತೆ ಆದೇಶವಿದ್ದರೂ ಕೆಂಪೇಗೌಡರ ಜಯಂತಿ ಆಚರಣೆಗೆ ಯಾವುದೇ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸದೆ ಗೈರು ಹಾಜರಾಗಿದ್ದು ಕಂಡು ಬಂದಿದ್ದು.

ಪ್ರವಾಸಿ ಮಂದಿರದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿಯನ್ನು ಬೆರಳಣಿಕೆಯಷ್ಟು ಎರಡೋ ಮೂರು ಇಲಾಖೆಯ ಸಿಬ್ಬಂದಿಗಳು ಮಾತ್ರ ಕಂಡು ಬಂದಿದ್ದನ್ನು ಇನ್ನೂಳಿದ ಯಾವ ಯಾವ ಇಲಾಖೆಯ ಅಧಿಕಾರಿಗಳು ಹಾಜರಾಗಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಒಕ್ಕಲಿಗ ಸಂಘದ ಸದಸ್ಯರುಗಳಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ರಾಮದುರ್ಗ ಮಂಜುನಾಥ್ ಉಪಾಧ್ಯಕ್ಷರಾದ ಶ್ರೀರಾಮ್ ಶೆಟ್ಟಿ ಹಳ್ಳಿ ನಿರ್ಕಲಪ್ಪ, ಚoದ್ರ ಮೌಳಿ, ಆನಂದ ಮುಖಂಡರಾದ ಪಿ.ಬಸವರಾಜ್, ರಾಮದುರ್ಗ ಗುರುಸ್ವಾಮಿ,ಇನ್ನು ಇತರರಿದ್ದರು ಹಾಗೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪಿ ಶಿವುರಾಜು , ನಿರೂಪಕರಾಗಿ ಉಡಚಪ್ಪ ಶಿಕ್ಷಕರು, ಸ್ವಾಮಿ ವಿವೇಕಾನಂದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ. ಸಾಲುಮನೆ. ಕೂಡ್ಲಿಗಿ.