ತೆರೆದ ಮನೆ ಕಾರ್ಯಕ್ರಮ ದಡಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಿದ – ಪಿ.ಎಸ್.ಐ ಗೀತಾಂಜಲಿ ಶಿಂಧೆ.
ಕೊಟ್ಟೂರು ಜೂನ್.29

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಶುಕ್ರವಾರ ರಂದು ಬಾಲಕಿಯರ ಪ್ರೌಢ ಶಾಲೆಯ ಮಕ್ಕಳು “ತೆರೆದ ಮನೆ” ಯದ ಕೊಟ್ಟೂರು ಪೊಲೀಸ್ ಠಾಣೆಗೆ ಶಾಲೆಯ ದೈಹಿಕ ಶಿಕ್ಷಕರಾದ ಕೊಟ್ರಮ್ಮ ಶಿಕ್ಷಕರು ಠಾಣೆಗೆ ಮಕ್ಕಳೊಂದಿಗೆ ಭೇಟಿ ನೀಡಿ ಠಾಣೆಯ ಪೊಲೀಸ್ ಪೇದೆ ತೆರೆದ ಮನೆಗೆ ಬಂದ ಮಕ್ಕಳಿಗೆ ಠಾಣೆಯ ಒಳಗಡೆ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ವೀಕ್ಷಣೆಗೆ ಮಕ್ಕಳ ತೋರಿಸುವುದರ ಮೂಲಕ ಹಾಗೂ ಪೊಲೀಸ್ ರ ಕೈಯಲ್ಲಿರುವ ರೈಪಲ್ ಬಗ್ಗೆ ಬಂದಿರುವಂತ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಮತ್ತು ಪೊಲೀಸ್ ರವರ ಕೈಯಲ್ಲಿರುವ ವಾಕೀಟಾಕ್ ಬಗ್ಗೆನೂ ಮಾಹಿತಿ ನೀಡಿದರು. ಹಾಗೆ ಈ ಸಂದರ್ಭದಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾದ ಗೀತಾಂಜಲಿ ಶಿಂದೆ ರವರು ಮಕ್ಕಳಿಗೆ ಪೊಲೀಸ್ ಸ್ಟೇಷನ್ ನ ಕೆಲವು ಮೇಲಾಧಿಕಾರಿಗಳ ಪೋಸ್ಟ್ ಗಳನ್ನೂ ತಿಳಿಸುವುದರೊಂದಿಗೆ ಎಮರ್ಜೆನ್ಸಿ ಕಾಲ್ 112 ಬಗ್ಗೆ ತಿಳಿಸುವುದರೊಂದಿಗೆ ಯಾವುದೇ ಸಂದರ್ಭದಲ್ಲಿ ಪೊಲೀಸ್ ರಿಂದ ರಕ್ಷಣೆ ಪಡೆಯಲು ಈ ನಂಬರಿಗೆ ಕಾಲ್ ಮಾಡಬಹುದು ಎಂದು ತಿಳಿಸುವುದರೊಂದಿಗೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಕೊಟ್ರಮ್ಮ ಶಿಕ್ಷಕರು ಹಾಗೂ ಪೊಲೀಸ್ ಸ್ಟೇಷನ್ ಸಿಬ್ಬಂದಿ ವರ್ಗದವರು ಇನ್ನೂ ಇತರರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.