ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ – ಯಶವಂತರಾಯಗೌಡ ಪಾಟೀಲ.
ಇಂಡಿ ಡಿಸೆಂಬರ್.17

ನಗರ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮ, ತಾಂಡಾ ಮತ್ತು ವಸತಿ ಪ್ರದೇಶಗಳಿಗೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಯಾಗಬಾರದು. ಆ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ಜರುಗಿಸ ಬೇಕು. ಹಣಕಾಸಿನ ಬಗ್ಗೆ ತೊಂದರೆ- ಯಾದರೆ ನನ್ನ ಗಮನಕ್ಕೆ ತನ್ನಿ ನನ್ನ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹಣಕಾಸಿನ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲಅವರು ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಸಭಾ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ಮತ್ತು ಜಿಲ್ಲಾ ಆಡಳಿತದ ಸಹಕಾರದೊಂದಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವದಕ್ಕಾಗಿಯೇ ತಾಲೂಕಿನ ಕೆರೆಗಳನ್ನು ತುಂಬಿಸಲಾಗಿದೆ. ನೀರು ತುಂಬಿರುವ ಕೆರೆಗಳಲ್ಲಿಯ ನೀರು ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಬೇಕು. ಇನ್ನಿತರ ಪೋಲಾಗದಂತೆ ನಿರ್ಭಂಧ ವಿಧಿಸಬೇಕು. ನೀರಿನ ಕೆರೆಗಳನ್ನು ಸದಾ ಕಾವಲು ಮಾಡಬೇಕು ಎಂದು ಸಲಹೆ ನೀಡಿದರು.ತಾಲೂಕಿನ ಬೆನಕನಹಳ್ಳಿ ಅಗಸನಾಳ, ತಡವಲಗಾ ವಸತಿ ಪ್ರದೇಶಗಳು, ಗುಂಡ್ಲು ತಾಂಡಾ, ಶಿರಕನಹಳ್ಳಿ ಗದಿಕನ್ಯಾ ವಸ್ತಿ, ಪೂಜಾರಿ ವಸ್ತಿ, ಜೇವೂರ ದೇವಸ್ಥಾನ.ಲೋಣಿ (ಕೆಡಿ) ಝಳಕಿ, ಸಾಲೋಟಗಿ ಇನಾಮದಾರ ವಸ್ತಿ, ಬೋಳೇಗಾಂವ ಗೊಳ್ಳಗಿ ವಸ್ತಿ, ಸಾತಲಗಾಂವ ಶಾಲೆ, ಮಾಲಗಾರ ವಸ್ತಿ, ದೈರುಣಗಿ ಪಾಟೀಲ ವಸ್ತಿ, ನಾಗರಳ್ಳಿ ಮುಂತಾದ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ದೂರುಗಳು ಬಂದಿವೆ. ಅವೆಲ್ಲಾ ಗ್ರಾಮ, ವಸ್ತಿ ಪ್ರದೇಶಗಳಿಗೆ ಖುದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ಮಾಡಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸೂಚನೆ ನೀಡಿದ ಅವರು ಬರುವ ಬೇಸಿಗೆ ಪೂರ್ಣ ಗೊಳ್ಳುವವರೆಗೆ ಪ್ರತೀ 15 ದಿವಸಗಳಿಗೆ ಒಂದು ಸಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸಿ, ತಾಲ್ಲೂಕಿನ ಗ್ರಾಮಗಳ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಕ್ರಮ ಜರುಗಿಸ ಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು. ತಾಲೂಕಿನ 7 ಪಿಡಿಓ ಗಳಿಗೆ ತಲಾ ಎರಡೆರಡು ಗ್ರಾಮ ಪಂಚಾಯತಿ ಚಾರ್ಜ್ ಕೊಟ್ಟಿರುವದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ತೊಂದರೆಯಾಗುತ್ತಿದೆ. ಅವುಗಳ ಕಡೆಗೆ ತಾಲೂಕು ಇಓ ಲಕ್ಷ್ಯ ವಹಿಸಬೇಕು ಎಂದರು.ರಾಮತೀರ್ಥ ತಾಂಡಾದಲ್ಲಿರುವ ಮುರಾರ್ಜಿ ದೇಸಾಯಿ ಶಾಲೆಗೆ ಪೈಪ ಲೈನ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಿ. ಅದರಂತೆ ಹೊರ್ತಿ ಮುರಾರ್ಜಿ ಶಾಲೆಗೆ, ಬಿಸಿಎಂ ಹಾಸ್ಟೇಲ್ ಗೆ, ನೀರು ಕೊಡ ಬೇಕೆಂದು ಹೇಳಿದರು.ಉಪ ಕಂದಾಯ ವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಶೀಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿದರು. ಇಓ ಬಾಬು ರಾಠೋಡ, ಅಭಿಯಂತರರು ತಾಲೂಕ ನೋಡಲ್ ಅಧಿಕಾರಿಗಳಾದ ವಿಜಯಕುಮಾರ ಮೆಕ್ಕಳಕಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ