ಸತತ ಓದು ಯಶಸ್ವಿಗೆ ಮೆಟ್ಟಿಲು – ಡಾ, ರಾಜಶೇಖರ ದಾನರಡ್ಡಿ.

ಹೊಳೆಆಲೂರ ಜೂನ್.29

ವರ್ಷದುದ್ದಕ್ಕೂ ಆಟೋಟ ವಿವಿಧ ಸ್ಪರ್ಧೆಗಳಲ್ಲಿ ನಿಮ್ಮ ಪ್ರತಿಭೆ ತೋರಿದಂತೆ ಇನ್ನು ಅಭ್ಯಾಸದತ್ತ ಗಮನ ಹರಿಸಿ. ಸತತ ಓದು ಯಶಸ್ಸಿನ ಮೆಟ್ಟಿಲು ಎಂದು ಗದಗ ನಗರದ ಪಿ.ಪಿ.ಜಿ ಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ರಾಜಶೇಖರ ದಾನರಡ್ಡಿ ಹೇಳಿದರು. ಅವರು ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ,ವಿಜ್ಞಾನ, ವಾಣಿಜ್ಯ ಮಹಾ ವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿದ್ದು ನಮ್ಮ ಪ್ರತಿಭೆಗಳನ್ನು ಬೆಳಕಿಗೆ ತರಲು ವಿವಿಧ ವಿಭಾಗಗಳು ಇರುತ್ತವೆ. ಅವುಗಳ ಮೂಲಕ ವೇದಿಕೆಯನ್ನು ನೀವು ಸದುಪಯೋಗ ಪಡಿಸಿ ಕೊಂಡಿದ್ದಿರಿ. ಓದಿಗೆ ದೈಹಿಕ ಆರೋಗ್ಯ ಅಗತ್ಯ . ಹಾಗಾಗಿ ಆರೋಗ್ಯದ ಕಾಳಜಿ ನಿಮಗಿರಲಿ. ಪರೀಕ್ಷೆ ನಿಮ್ಮ ಭವಿಷ್ಯದ ಜೀವನ ರೂಪಿಸುವಲ್ಲಿ ಕಾರಣ ಆಗುವದರಿಂದ ಇನ್ನು ಹೆಚ್ಚು ಓದಿನ ಕಡೆ ಗಮನ ಹರಿಸಿ. ಪ್ರಯತ್ನವಿದ್ದಲ್ಲಿ ಫಲ ತಾನೇ ಸಿಗುತ್ತದೆ ಎಂದು ಹಲವರು ಯಶಸ್ಸಿನ ಸಾಧನೆ ಶಿಖರ ಏರಿದ ಉದಾಹರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಡಾ.ರಾಜಶೇಖರ ದಾನರಡ್ಡಿ ಯವರನ್ನು ಮಹಾ ವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಅತಿಥಿಗಳಾಗಿ ಆಗಮಿಸಿದ್ದ ಕವಿಪ್ರ ಸಮಿತಿ ನಿರ್ದೇಶಕರಾದ ಡಿ.ಎಸ್.ಶೆಲ್ಲಿಕೇರಿ ಮಾತನಾಡಿ ವಿದ್ಯಾರ್ಥಿಗಳು ವೇಳೆಯನ್ನು ವ್ಯರ್ಥ ಮಾಡದೆ ಓದಿನ ಕಡೆ ಲಕ್ಷ ಕೊಟ್ಟು ಸಂಸ್ಥೆಗೆ ಹೆಸರು ತನ್ನಿ ಎಂದು ಸಂದರ್ಭೋಚಿತ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಪ್ರಭು ಗಂಜಿಹಾಳ ವಹಿಸಿದ್ದರು. ವೇದಿಕೆಯಲ್ಲಿ ಕವಿಪ್ರ ಸಮಿತಿ ನಿರ್ದೇಶಕರಾದ ಜಿ.ಆರ್.ಕಂಬಿ,ಐಕ್ಯೂ ಎಸಿ ಕೋ-ಆರ್ಡಿನೇಟರ್ ಡಾ.ಎಸ್.ಬಿ.ಸಜ್ಜನರ್ , ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ , ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ.ವಿಶ್ವನಾಥ .ಪಾಟೀಲ, ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕುರಿ, ಮಹಿಳಾ ಪ್ರತಿನಿಧಿ ಅನಿತಾ ಅಂಗಡಕಿ ಉಪಸ್ಥಿತರಿದ್ದರು. ಪ್ರಾಥನೆಯನ್ನು ಪೂಜಾ ಬೆಳವಲ, ಅಕ್ಷತಾ ಮಣ್ಣೂರ ಮಾಡಿದರೆ , ವಿವಿಧ ಸ್ಪರ್ಧೆಗಳ ವಿಜೇತರ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರೊ.ರೇಶ್ಮಾ ಟೆಕ್ಕೇದ ನಡೆಸಿಕೊಟ್ಟರು. ಸ್ವಾಗತವನ್ನು ಮಧು ಗಾಣಿಗೇರ ಮಾಡಿದರು. ಕೊನೆಯಲ್ಲಿ ಮಹಾದೇವಿ ಗೋಲಗೌಡ್ರ ವಂದಿಸಿದರು. ಮಧು ತಳವಾರ ನಿರೂಪಿಸಿದರು. ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಎಂ.ಎಸ್.ಬೇವೂರ, ಪ್ರೊ.ಎನ್.ಆರ್. ಹಿರೇಸಕ್ಕಗೌಡರ, ಪ್ರೊ.ಎಸ್.ವಾಯ್. ಪೂಜಾರ್, ಡಾ.ಕುಮಾರ ಹಂಜಗಿ, ಪ್ರೊ.ಎಂ.ಎಸ್.ಹೊನವಾಡ, ಪ್ರೊ.ಕೆ.ಎ.ಕೊಪ್ಪದ, ಪ್ರೊ.ಎಸ್.ಬಿ.ಹಳ್ಳೂರ, ಪ್ರೊ.ಶಿಲ್ಪಾ ಮೆದನಾಪೂರ, ಪ್ರೊ.ವಿನೋದ ಕಪ್ಪಲಿ, ಪ್ರೊ.ವಿ.ಬಿ.ಜಾಲಿಹಾಳ, ಪ್ರೊ.ಆನಂದ ಕೆಂಚನಗೌಡರ, ಪ್ರೊ.ಎಸ್.ಪಿ. ಗಡಗಿ, ಶ್ರೀ ಎಸ್.ಜಿ.ಮಾಳವಾಡ, ಮಹಾ ವಿದ್ಯಾಲಯದ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button