ತಾಲೂಕ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಶಿಕ್ಷಕರ ದಿನಾಚಾರಣೆ.
ಮಾನ್ವಿ ಸ.28





ಪಟ್ಟಣದ ಗಾಂಧಿ ಕಾಲೇಜು ಸಭಾಂಗಣದಲ್ಲಿ ತಾಲೂಕು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಉಪನ್ಯಾಸಕರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕರಗಳು ಶಿಕ್ಷಣಕ್ಕಾಗಿ ಹೆಚ್ಚಿನ ಅದ್ಯತೆ ನೀಡುತ್ತಿವೆ ರಾಜ್ಯ ಸರ್ಕಾರದಿಂದ ಕೂಡ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ. ಶೈಕ್ಷಣಿಕ ಅಭಿವೃದ್ದಿಗೆ ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಹೆಚ್ಚಿನ ಕೊಡುಗೆ ನೀಡುತ್ತಿರುವುದನ್ನು ಸರ್ಕಾರ ಗುರುತಿಸಿದ್ದು 15 ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆಗಳನ್ನು ಗುರುತಿಸಿ ಅನುದಾನಿತ ಶಾಲೆಯಾಗಿಸುವುದಕ್ಕೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸಲಾಗುತ್ತಿದೆ ಹಾಗೂ ಉತ್ತಮ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಕೂಡ ಸರ್ಕಾರದ ಸೌಲಭ್ಯಗಳನ್ನು ವಿಸ್ತರಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಿಳಿಯವರ ಜೊತೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಅವುಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ತಾಲೂಕು ಖಾಸಗಿ ಕಾಲೇಜುಗಳ ಅಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಪಿ.ತಿಪ್ಪಣ್ಣ ಬಾಗಲವಾಡ ಮಾತನಾಡಿ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಶಿಕ್ಷಣ ಇಲಾಖೆಯು ಪರವಾನಿಗೆ ನೀಡುವ ಸಮಯದಲ್ಲಿ ಅಗ್ನಿ ಸುರಕ್ಷೆ ಪ್ರಮಾಣ ಪತ್ರ ಕೇಳುತ್ತಿದ್ದು ಪ್ರಮಾಣ ಪತ್ರ ಪಡೆಯುವ ನಿಯಮಗಳಿಂದ ತೊಂದರೆ ಯಾಗುತ್ತಿರುವುದರಿಂದ ನಿಯಮ ಸಡಿಲಿಕೆ ಮಾಡಬೇಕು ಹಾಗೂ ಕಲ್ಯಾಣ ಕರ್ನಾಟಕ ಮಂಡಳಿ ವತಿಯಿಂದ ಖಾಸಗಿ ಕಾಲೇಜುಗಳಲ್ಲಿ ,ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದಕ್ಕೆ ಅನುದಾನ ನೀಡಬೇಕು ಎಂದು ಕೋರಿದರು.ಸಿಂಧನೂರಿನ ಉಪನ್ಯಾಸಕರಾದ ಚಂದ್ರಕಲಾ ಪ್ರಕಾಶ ರವರು ವಿಶೇಷ ಉಪನ್ಯಾಸ ನೀಡಿದರು.ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಕಾಲೇಜುಗಳ ಉತ್ತಮ ಉಪನ್ಯಾಸಕರಿಗೆ ಉತ್ತಮ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ತಾಲೂಕಿನ ಲೊಯೋಲ ಶಿಕ್ಷಣ ಸಂಸ್ಥೆ ಹಾಗೂ ಶಾರದ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 2025-26ನೇ ಸಾಲಿನ ಅಕ್ಷರ ದಾಸೋಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ,ಅಬ್ದುಲ್ ಗಪೂರ್ ಸಾಬ್, ಬಾಲಸ್ವಾಮಿ ಕೊಡ್ಲಿ,ರಾಜಾ ಸುಭಾಷ್ಚಂದ್ರನಾಯಕ,ಶರಣಪ್ಪ ಗುಡದಿನ್ನಿ, ರಾಮಲಿಂಗಪ್ಪ,ಮನೋಜ ಮಿಶ್ರಾ,ಸುಜಾತ,ಸೈಯಾದ್ ಖಾಲಿದ್ ಖಾದ್ರಿ ,ಸಿಂಡಿಕೇಟ್ ಸದಸ್ಯಸೋಮ್ಮಣ್ಣ, ಕೆ.ಈ. ನರಸಿಂಹ, ಮೌನೇಶಗೌಡ ಹರೆಟನೂರು, ಖಾ.ಕಾ.ಉ.ಸಂಘದ ತಾ.ಅಧ್ಯಕ್ಷರಾದ ಆಂಜನೇಯ ನಸಲಾ ಪುರ, ಈರಣ್ಣ ಮರ್ಲಟ್ಟಿ, ಶರಣಬಸವ ಸೀಕಲ್,ಮಹಾಂತೇಶ್ ಓಲೇಕಾರ, ವೀರಭದ್ರಯ್ಯ ಸ್ವಾಮಿ, ಮೆಹಬೂಬ್ ಮದ್ಲಾಪುರ್, ಕೃಷ್ಣವಧೂತ, ಹನುಮಂತ ಯಡಿವಾಳ, ಹನುಮಂತರಾಯ ಗಲಗ ಸೇರಿದಂತೆ ತಾಲೂಕಿನ ವಿವಿಧ ಕಾಲೇಜುಗಳ ಆಡಳಿತ ಮಂಡಳಿಯವರು ಹಾಗೂ ಉಪನ್ಯಾಸಕರು ಭಾಗವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ