ಲಿಂ, ಎಸ್.ಆರ್. ಕಾಶಪ್ಪನವರ 22 ನೇ. ಪುಣ್ಯಸ್ಮರಣೆ ಕಾರ್ಯಕ್ರಮ.
ಹುನಗುಂದ ಜೂನ್.30

ಎಸ್.ಆರ್.ಕೆ.ಸ್ಮಾರಕ ಪ್ರತಿಷ್ಠಾನ ಇಳಕಲ್ಲದ ವತಿಯಿಂದ ಜು. 2 ರಂದು ಇಳಕಲ್ಲದ ಕಂಠಿ ಸರ್ಕಲ್ ಹತ್ತಿರ ಅನುಭವ ಮಂಪದಲ್ಲಿ ಬೆಳಗ್ಗೆ 10.30 ಗಂಟೆಗೆ ಮತ್ತು ಜು. 3 ರಂದು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್. ಪ್ರೌಢ ಶಾಲೆಯ ಆವರಣದಲ್ಲಿ ಬೆಳಗ್ಗೆ 10.30 ಗಂಟೆಗೆ ಜನಾನುರಾಗಿ, ಮುತ್ಸದ್ದಿನಾಯಕ, ಮಾಜಿ ಸಚಿವ ಲಿಂ,ಎಸ್.ಆರ್.ಕಾಶಪ್ಪನವರ ಅವರ 22 ನೆಯ ಪುಣ್ಯ ಸ್ಮರಣೆ ಕಾರ್ಯಕ್ರಮ ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ಕರ್ನಾಟಕ ವೀರಶೈವ,ಲಿಂಗಾಯತ ಅಭವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಆರ್,ಕೆ ಪ್ರತಿಷ್ಠಾನವು ವರ್ಷದುದ್ದಕ್ಕೂ ಧಾರ್ಮಿಕ,ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಲಿಂ,ಎಸ್.ಆರ್.ಕಾಶಪ್ಪನವರ ಅವರ 22 ನೆಯ ಪುಣ್ಯಸ್ಮರಣೆ ಅಂಗವಾಗಿ ಜು. 2 ರಂದು ಮಂಗಳವಾರ ದಂದು ಬೆಳಗ್ಗೆ 10.30 ಗಂಟೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರ್ಕಾರಿ ನಿವೃತ್ತ ನೌಕರರಿಗೆ ಗೌರವ ಸನ್ಮಾನ ನಡೆಸಲಾಗುವದು. ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಚಿತ್ತರಗಿ ಸಂಸ್ಥಾನ ಮಠದ ಇಲಕಲ್ಲದ ಗುರು ಮಹಾಂತ ಶ್ರೀಗಳು, ಇಲಕಲ್ಲ ಹನಮಸಾಗರದ ಹಜರತ್ ಸೈಯದ್ ಮುರ್ತುಜ್ ಖಾದ್ರಿ ಗುರುಗಳು ಮತ್ತು ಶಿರೂರಿನ ಡಾ. ಬಸವಲಿಂಗ ಸ್ವಾಮಿಗಳು ಹಾಗೂ ಅನೇಕ ಗಣ್ಯ ಮಾನ್ಯರು ಭಾಗಿವಹಿಸಲಿದ್ದಾರೆ. ಜುಲೈ 3 ರಂದು ತಾಲೂಕಿನ ಹಾವರಗಿ ಗ್ರಾಮದಲ್ಲಿ ನಡೆಯುವ ರಂಭಾಪುರಿ ಮಹಾಪೀಠದ ವೀರ ಸಿಂಹಾನಾಧೀಶ್ವರ 1008 ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು,ಉಜ್ಜಯನಿ ಪೀಠದ ಶ್ರೀಮದ್ ಸಿಂಹಾನಾಧಿಶ್ವರ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು,ಕೇದಾರ ಪೀಠದ ಶ್ರೀಮದ್ ವೈರಾಗ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪದರು, ಶ್ರೀಶೈಲ ಮಹಾಪೀಠದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪದರು ಮತ್ತು ನೂತನ ಪೀಠಾಧೀಶ್ವರರು ಕಾಶೀ ಮಹಾಪೀಠದ ಶ್ರೀಮದ್ ಕಾಶೀ ಜ್ಞಾನ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚರ‍್ಯ ಭಗವತ್ಪದರು ದಿವ್ಯ ಸಾನಿಧ್ಯ ವಹಿಸುವರು.ದಿಂಡವಾರದ ಕುಮಾರಲಿಂಗ ಶಿವಾಚಾರ್ಯ ಸ್ವಾಮಿಗಳು, ಹಡಗಲಿ-ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು,ಬಿಲ್‌ಕೆರೂರ-ಅಡವಿಹಾಳದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ನಂದವಾಡಗಿ – ಆಳಂದದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಕಮತಗಿ-ಕೊಟೆಕಲ್‌ದ ಹೊಳೆಹುಚ್ಚೇಶ್ವರ ಸ್ವಾಮಿಗಳು, ಅಮೀನಗಡದ ಶಂಕರ ರಾಜೇಂದ್ರ ಸ್ವಾಮಿಗಳು, ಕೂಡಲ ಸಂಗಮ ಸಾರಂಗಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮಿಗಳು,ಕೆಲೂರ-ಶಿವಗಂಗೆಯ ವಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು,ಚಳಗೇರಿಯ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು,ವಿಜಯಪುರದ ವನಶ್ರೀ ಸಂಸ್ಥಾನ ಗಾಣಿಗರ ಗುರು ಪೀಠದ ಜಗದ್ಗುರು ಡಾ. ಜಯಬಸವ ಮಹಾ ಸ್ವಾಮಿಗಳು, ಕೋಲಾರ-ವಿಜಯಪುರದ ದಿಗಂಬರೇಶ್ವರ ಸಂಸ್ಥಾನ ಮಠದ ಜಗದ್ಗುರು ಯೋಗಿ ಕಲ್ಲಿನಾಥ ದೇವರು, ಗುಡದೂರಿನ ನೀಲಕಂಠ ತಾತನವರು,ಸಜ್ಜಲಗುಡ್ಡದ ದೊಡ್ಡಯ್ಯ ತಾತನವರು,ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮಿಗಳು, ತಂಗಡಗಿಯ ಬಸವಪ್ರಿಯ ಅನ್ನದಾನ ಭಾರತಿ ಸ್ವಾಮಿಗಳು, ರಾಮದುರ್ಗದ ಡಾ. ರಾಜೇಂದ್ರ ಮುತ್ಯಾನವರು, ಗುರುಗುಂಟಾದ ಸದಾನಂದ ಶಿವಾಚಾರ್ಯ ಸ್ವಾಮಿಗಳು ಹಿರೇಮಠ,ಪುರಗೇರಿಯ ಶಿವಸಂಗಮೇಶ್ವರ ದೇವರು ಹಿರೇಮಠ ಸಾನಿಧ್ಯ ವಹಿಸುವರು. ಹುನಗುಂದ ಕ್ಷೇತ್ರದ ಮಾಜಿ ಶಾಸಕಿ, ಇಲಕಲ್ ಎಸ್‌ಆರ್‌ಕೆ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗೌರಮ್ಮ ಎಸ್ ಕಾಶಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕ, ಅಧ್ಯಕ್ಷರು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ, ಎಸ್‌ಆರ್‌ಕೆ ಪ್ರತಿಷ್ಠಾನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಜಿಪಂ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ, ಪ್ರತಿಷ್ಠಾನದ ಖಜಾಂಚಿ ದೇವಾನಂದ ಕಾಶಪ್ಪನವರ, ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಶಿರೂರ ಮತ್ತು ವಕೀಲ ಸಿ.ವಿ.ಕೋಟಿ ಉಪಸ್ಥಿತರಿರುವರಿರು. ಈ ಕಾರ್ಯಕ್ರಮದಲ್ಲಿ ಕಾಶಪ್ಪನವರ ಕುಟುಂಬದ ಬಂಧುಗಳು,ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದರು. ಜಿ.ಪಂ.ಮಾಜಿ ಸದಸ್ಯ ಮಹಾಂತೇಶ ನರಗುಂದ, ಡಾ.ಟಿಪ್ಪು ಬಂಡಾರಿ, ವಿಜಯ ಗದ್ದನಕೇರಿ, ಅಮರೇಶ ಮಡಿವಾಳರ, ವಿದ್ಯಾಧರ ಗೊಟೂರ, ಅಮರೇಶ ನಾಗೂರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.