ಪ, ಪಂ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದ ಕಾಮಗಾರಿಗೆ – ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು.
ಕೊಟ್ಟೂರು ಜು.01

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು.2022 – 23 ನೇ. ಸಾಲಿನ ಪರಿಶಿಷ್ಟ ಪಂಗಡ ಯೋಜನೆ ಅಂದಾಜು ಮೊತ್ತ 525 ಲಕ್ಷ ರೂಪಾಯಿಗಳು ಅಗ್ರಿಮೆಂಟ್ ಮೊತ್ತ 371 ಲಕ್ಷಗಳು ಗುತ್ತಿಗೆದಾರರು ಸೈಯದ್ ಆಬಿದ್ ಪಾಷಾ ಖಾದ್ರಿ ಪ್ರಥಮ ದರ್ಜೆ ಗುತ್ತಿಗೆದಾರರು ಸಿಂಧನೂರು ರಾಯಚೂರು ಜಿಲ್ಲೆ, ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ ಇಲಾಖೆ ಹೊಸಪೇಟೆ ವಿಭಾಗ ಕಳಪೆ ಕಾಮಗಾರಿಯಾಗಿದ್ದು ಯೋಜನಾ ವರದಿ ಪ್ರಕಾರ ಕಬ್ಬಿನ ಸ್ಟೀಲ್ ರಾಡ್ ಕೆಳಗೆ 6 ಇಂಚು ದಪ್ಪ ಕ್ವಾಲಿಟಿ ಎಂಎಂ ಜೆಲ್ಲಿ ಕಾಂಕ್ರೀಟ್ ಹಾಕ್ಬೇಕು ಆದರೆ ಕೇವಲ ಮೂರು ನಾಲ್ಕು ಇಂಚು ಸರಿಯಾಗಿ ಟ್ಯೂಬ್ ಲೆವೆಲ್ ಇಲ್ಲದೆ ಕಾಮಗಾರಿ ಕಳೆಪೆ ಕಾಮಗಾರಿಗೆ ಹತ್ತಿರವಾಗಿದ್ದು.

ಮುಂದುವರಿಯುತ್ತಿರುವುದು ಇದನ್ನು ಕೂಡಲೇ ನಿಲ್ಲಿಸಲು ಅಧಿಕಾರಿಗಳು ತಿಳಿಸಿದರೆ ಕ್ಯಾರೆ ಅನ್ನದೆ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿ ಮುಂದೆ ಆಗುವ ಮಕ್ಕಳಿಗೆ ತೊಂದರೆಗಳು ಆಗದಂತೆ ನೋಡಿ ಕೊಳ್ಳಬೇಕು ಎಂದು ಟಿ ಹನುಮಂತಪ್ಪ ವಕೀಲರು ಡಿಎಸ್ಎಸ್ ಸಂಚಾಲಕರು ಮತ್ತು ಗುಡಿಯಾರ್ ಮಲ್ಲಿಕಾರ್ಜುನ್ ಕಾರ್ಯದರ್ಶಿಗಳು ಸಿಪಿಐಎಂಎಲ್ ಲಿಬ್ರೇಶನ್ ಪಕ್ಷ ಮತ್ತಿತರ ಸಂಘ-ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಮೂಹವು ಸರಿಯಾಗಿ ಕೆಲಸ ನಡೆಯಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.