ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಾಗಿದೆ ಎಂದು – ಶಾಸಕ ಡಾ, ಎನ್.ಟಿ.ಶ್ರೀನಿವಾಸ್ ಹೇಳಿದರು.
ಎಂ.ಬಿ.ಅಯ್ಯನಹಳ್ಳಿ ಜು.03
ಕೂಡ್ಲಿಗಿ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವನ ಮಹೋತ್ಸವ ಕಾರ್ಯಕ್ರದಲ್ಲಿ ಗಿಡ ನೆಟ್ಟು ಮಾತನಾಡಿ ಗಿಡ ಮರಗಳು ಇಂಗಾಲವನ್ನು ಸೇವಿಸಿ, ತಮಗೆ ಸ್ವಚ್ಛ ಆಮ್ಲಜನಕವನ್ನು ನೀಡುವ ಗಿಡ, ಮರ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಸಿರು ಇದ್ದರೆ ಉಸಿರು, ಕಾಡು ಇದ್ದರೆ ನಾಡು ಎನ್ನುವಂತೆ. ನನ್ನ ಗಿಡ, ನನ್ನ ಹೆಮ್ಮೆ ವೃಕ್ಷಾಂದೋಲನದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ.

ಇಂದು ನಾನು ನೆಟ್ಟ ಈ ಸಸಿ ಬೆಳೆದು ದೊಡ್ಡ ಮರವಾಗಿ ನೋಡಲು ಇಚ್ಚಿಸುತ್ತೇನೆ. ನಮ್ಮ ಕರ್ನಾಟಕ ಸರ್ಕಾರ ಹಸಿರುದಿಕೆಯನ್ನು ಶೇ 33 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮಾಡಿರುವ ಸಂಕಲ್ಪಕ್ಕೆ ಅನುಗುಣವಾಗಿ ವನ ಮಹೋತ್ಸವ ಆಂದೋಲನವನ್ನು ಆಯೋಜಿಸಲಾಗಿದೆ ಎಂದರು. ಇದೇ ವೇಳೆ ಶಾಸಕರು ಮಕ್ಕಳಿಗೆ ಸಿಹಿ ಹಂಚಿ ಆರೋಗ್ಯ ವಿಚಾರಿಸಿ ಕಾಳಜಿ ವಹಿಸಲು ಸೂಚಿಸಿದರು. ಊರಿನ ಗ್ರಾಮಸ್ಥರು ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿರುವ ಕುರಿತು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಶಾಲಾ ಪರಿಸರವನ್ನು ಕಟ್ಟು ನಿಟ್ಟಾಗಿ ಸಂರಕ್ಷಿಸಲು ಕ್ರಮ ಕೈಗೊಳ್ಳಲು ಶಾಸಕರಿಗೆ ಮೌಖಿಕವಾಗಿ ಮನವಿ ಮಾಡಿ ಕೊಂಡರು. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಅಹವಾಲು ಆಲಿಸಿದ ಶಾಸಕರು ಕೂಡಲೇ ಸಭೆ ಮಾಡಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ಕೊಡಲು ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು. ಹಾಗೆಯೇ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ನಿಲಯಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಜ್ಜನಗೌಡ್ರು, ಪಿ ನಾಗಣ್ಣ, ಡಿ ರಾಮಣ್ಣ, ಗ್ರಾ.ಪಂ ಅಧ್ಯಕ್ಷೆ ಒಬಕ್ಕ ಪಾಪಣ್ಣ, ಉಪಾಧ್ಯಕ್ಷ ಆರ್ ವೀರಣ್ಣ, ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ, ಗ್ರಾ.ಪಂ ಸದಸ್ಯರಾದ ರೇಣುಕಾಚಾರ್ಯ, ಚೆನ್ನಪ್ಪ, ಶಿವಕುಮಾರ್, ಗುರುಸ್ವಾಮಿ, ಸುಮ ಶಿವಕುಮಾರ್, ಪ್ರಶಾಂತ್ ಗೌಡ್ರ್, , ಯುಎಸ್ ಎನ್ ಎಲ್ ಮಲ್ಲಿಕಾರ್ಜುನ್, ಅರುಣ್ ಕುಮಾರ್ ಹೊಸಮನೆ , ಚಿದಾನಂದಪ್ಪ, ಅಲ್ಲಾಭಕ್ಷ್, ಕೊಟ್ರೇಶ್ ಹಾರಕಬಾವಿ, ಕಾರ್ತಿಕ್ ಸೇರಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಶಿಕ್ಷಕರು, ನಿಲಯ ಪಾಲಕರು, ವಿದ್ಯಾರ್ಥಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ.