ಕ್ಷೇತ್ರದ ಕಟ್ಟ ಕಡೇ ವ್ಯಕ್ತಿಯ ಹೆಸರಿಡಿದು ಕರೆಯುವ ಹೃದಯ ಶ್ರೀಮಂತಿಕೆ – ಲಿಂ, ಎಸ್.ಆರ್.ಕಾಶಪ್ಪನರ ಅಪರೂಪದ ರಾಜಕಾರಣಿ.

ಹುನಗುಂದ ಜು.03

ಕ್ಷೇತ್ರದ ಕಟ್ಟ ಕಟ್ಟಕಡೆಯ ವ್ಯಕ್ತಿಯನ್ನು ಅತ್ಯಂತ ಪ್ರೀತಿಯಿಂದ ಹೆಸರಿಡಿದು ಕರೆಯುವ, ಮಾತನಾಡಿಸುವ ಅಪರೂಪದ ವಿಶಾಲ ಹೃದಯದ ರಾಜಕಾರಣಿಯೇ ಲಿಂ.ಎಸ್.ಆರ್. ಕಾಶಪ್ಪನವರ ಆಗಿದ್ದರು ಎಂದು ಉಜ್ಜಯನಿ ಮಹಾಪೀಠದ ಸದ್ದರ್ಮ ಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.ಬುಧವಾರ ತಾಲೂಕಿನ ಹಾವರಗಿ ಗ್ರಾಮದಲ್ಲಿ ಎಸ್.ಆರ್.ಕೆ.ಸ್ಮಾರಕ ಪ್ರತಿಷ್ಠಾನ ಇಳಕಲ್ಲದ ವತಿಯಿಂದ ಜನಾನುರಾಗಿ, ಮುತ್ಸದ್ದಿನಾಯಕ, ಮಾಜಿ ಸಚಿವ ಲಿಂ,ಎಸ್.ಆರ್.ಕಾಶಪ್ಪನವರ ಅವರ ೨೨ ನೆಯ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಅವರು, ಅಧಿಕಾರಿ, ಸಂಪತ್ತು ಹಾಗೂ ಸ್ಥಾನದ ಬಲದಿಂದ ವ್ಯಕ್ತಿ ದೊಡ್ಡವನು ಅನಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮಾಡಿದ ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳು ವ್ಯಕ್ತಿಯ ಶರೀರ ಅಳೆದ ಮೇಲು ಅವರ ಹೆಸರು ಶಾಶ್ವತವಾಗಿರುತ್ತೇ ಎನ್ನುವುದ್ದಕ್ಕೆ ಲಿಂ.ಎಸ್.ಆರ್.ಕಾಶಪ್ಪನವರ ಜನಪರ ಕಾರ್ಯಗಳೇ ಸಾಕ್ಷಿಯಾಗಿವೆ. ಶಿಕ್ಷಣ, ಆರೋಗ್ಯ, ಕೃಷಿ ಸಂಬಂಧಿಸಿದ ನೀರಾವರಿ, ಕುಡಿಯುವ ನೀರು ಸೇರಿದಂತೆ ಅಗತ್ಯತೆಗಳನ್ನು ಸಮಾಜದ ಕಟ್ಟಕಡೇ ವ್ಯಕ್ತಿಗೂ ಮುಟ್ಟಿಸುವ ಮಹಾದಾಸೆಯ ಲಿಂ, ಎಸ್. ಆರ್. ಕಾಶಪ್ಪನವರಲ್ಲಿ ಇತ್ತು.

ಅವರ ಹಾದಿಯಲ್ಲಿಯೇ ಅವರ ಸುಪುತ್ರ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಕ್ಷೇತ್ರದ ಅಭಿವೃದ್ದಿಪರ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.ಕಾಶೀ ಮಹಾಪೀಠದ ನೂತನ ಪೀಠಾಧೀಶ್ವರ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ ಲಿಂ,ಎಸ್.ಆರ್,ಕಾಶಪ್ಪನವರ ಅವರ ಜೀವಿತಾವಧಿಯಲ್ಲಿ ಮಾಡಿದ ಕಾರ್ಯಗಳು ಮತ್ತು ಅವರ ಧರ್ಮನಿಷ್ಠೆ ಕಾಯಕಗಳು ಇಂದಿಗೂ ಕ್ಷೇತ್ರದ ನೆನಪಿಸಿಕೊಳ್ಳುವಂತಾಗಿದೆ. ತಂದೆಯ ಸಂಕಲ್ಪವನ್ನು ಈಡೇರಿಸುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆಂದು ವೇದಿಕೆಯ ಮೇಲೆ ಹೇಳುತ್ತಿರುವ ಶಾಸಕ ವಿಜಯಾನಂದ ಕಾಶಪ್ಪನವರ ಮುನ್ನಡೆಯುತ್ತಿರುವುದು ತಂದೆಯ ಸಂಸ್ಕಾರ ಅವರಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದರುವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಪಂಚಪೀಠಾಧೀಶ್ವರ ಮತ್ತು ನಾಡಿನ ಹರಗುರು ಚರಮೂರ್ತಿಗಳ ಆಶೀರ್ವಾದದಿಂದ ನಡೆಯುತ್ತದೆ ಕಾಶಪ್ಪನವರ ಕುಟುಂಬ. ನಮ್ಮ ತಂದೆಯವರ ಶಿಕ್ಷಣ ಕ್ರಾಂತಿ ಮತ್ತು ಹಸಿರು ಕ್ರಾಂತಿಯ ಕನಸ್ಸುನ್ನು ನನಸ್ಸು ಮಾಡಲು ರಾಮಥಾಳ ಮರೋಳ ಏತ ನೀರಾವರಿಯ ಮೂಲಕ ೧೬ ಸಾವಿರ ಹೆಕ್ಟರ್ ಪ್ರದೇಶಕ್ಕೆ ಕಾಲುವೆ ನೀರಾವರಿ ಮತ್ತು ಏಷ್ಯಾದಲ್ಲಿ ಮೊದಲು ಇಸ್ರೇಲ್ ಮಾದರಿಯಲ್ಲಿ ೬೦ ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯನ್ನು ತಂದು ಅನುಷ್ಠಾನಗೊಳಿಸಿ ರೈತರ ಬಾಳಿನಲ್ಲಿ ಹಸಿರು ಕ್ರಾಂತಿಯನ್ನು ಮಾಡಲಾಗಿದೆ. ನ್ಮಮ ತಂದೆಯವರು ಬಿಟ್ಟು ಹೋದ ಕಾರ್ಯಗಳನ್ನು ಸಂಪೂರ್ಣ ಈಡೇರಿಸುವ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೆನೆ, ಹಿಂದೆ ನಮ್ಮ ತಂದೆಯವರು ಅನೇಕ ವಿವಾದಗಳ ಮಧ್ಯದಲ್ಲಿ ಕೂಡಲ ಸಂಗಮದಲ್ಲಿ ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಕಿ ಉತ್ಸವ, ಧರ್ಮಸಭೆಯನ್ನು ನಡೆಸಿದಂತೆ ಮುಂದಿನ ದಿನಗಳಲ್ಲಿ ಹುನಗುಂದ ಮತ ಕ್ಷೇತ್ರದಲ್ಲಿ ಮತ್ತೊಂದು ಬಾರಿ ಪಂಚಪೀಠಾಧೀಶ್ವರ ಕರೆದು ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಧರ್ಮಸಭೆ ನಡೆಸಲಾಗುವುದು. ಅದರ ಜೊತೆಗೆ ಎಸ್.ಆರ್,ಕೆ ಸ್ಮಾರಕ ಪ್ರತಿಷ್ಠಾನ ವತಿಯಿಂದ ಅನೇಕ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಉಚಿತ ಆರೋಗ್ಯ ಶಿಬಿರ, ಉದ್ಯೋಗಗಳನ್ನು ಮಾಡುತ್ತಾ ಬಂದಿದೆ. ಅದರಂತೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ನಂದವಾಡಗಿ ಅಳಂದ ಚನ್ನಬಸವ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಬಿಲ್‌ಕೆರೂರ ಅಡವಿಹಾಳದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ವಕೀಲ ಸಿ.ವಿ.ಕೋಟಿ ಮಾತನಾಡಿದರು.ದಿಂಡವಾರ ಕುಮಾರಲಿಂಗ ಶಿವಾಚಾರ್ಯ ಸ್ವಾಮಿಗಳು, ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಮುತ್ತತ್ತಿ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಕೂಡಲ ಸಂಗಮ ಸಾರಂಗಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮಿಗಳು, ಚಳಗೇರಿಯ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು,ತಂಗಡಗಿಯ ಬಸವಪ್ರಿಯ ಅನ್ನದಾನಿ ಭಾರತಿ ಸ್ವಾಮಿಗಳು, ಕೋಲಾರ ವಿಜಯಪುರದ ಯೋಗಿ ಕಲ್ಲಿನಾಥ ದೇವರು ಸಾನಿಧ್ಯ ವಹಿಸಿಕೊಂಡಿದ್ದರು. ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ, ರಜಾಕ್ ತಟಗಾರ,ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ, ಮಲ್ಲಣ್ಣ ಎಲೇಗಾರ, ಮಹಾಲಿಂಗಪ್ಪ ಕಾಶಪ್ಪನವರ, ಬಸವರಾಜ ಶಿರೂರ, ರುದ್ರಪ್ಪ ಕಾಶಪ್ಪನವರ, ಮಹಾಂತೇಶ ಕಾಶಪ್ಪನವರ ಸೇರಿದಂತೆ ಅನೇಕರು ಇದ್ದರು.ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ಸಂಗಣ್ಣ ಗದ್ದಿ ನಿರೂಪಿಸಿದರು, ಎಸ್.ಕೆ.ಕೊನೆಸಾಗರ ವಂದಿಸಿದರು.”ಬಾಕ್ಸ್ ಸುದ್ದಿ”-ಸರ್ಕಾರ ಪಠ್ಯ ಪುಸ್ತಕವನ್ನು ಪರಿಷ್ಕರಿಸುವ ಅವಶ್ಯಕತೆ ಇರಲಿಲ್ಲ, ವೀರಶೈವ ಲಿಂಗಾಯತ ಪರಂಪರೆಯು ಯುಗ ಯುಗಗಳಿಂದ ಬಂದಿದ್ದು. ಅದನ್ನು ಬೇರೆ ಬೇರೆ ಮಾಡುವ ಹುನ್ನಾರ ನಡೆದು ಹೋಗಿದ್ದು. ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಸರಿಪಡಿಸುವ ಕಾರ್ಯ ಮಾಡುವ ಮೂಲಕ ಪಠ್ಯ ಪುಸ್ತಕದಲ್ಲಿ ಮೊದಲಿದ್ದ ವೀರಶೈವ ಲಿಂಗಾಯತ ಪರಂಪರೆಯನ್ನು ಮುಂದುವರೆಸುವ ಕಾರ್ಯ ಮಾಡಬೇಕು. ಈ ಸಂದರ್ಭದಲ್ಲಿ ಲಿಂ,ಎಸ್.ಆರ್.ಕಾಶಪ್ಪನವರ ಇದ್ದಿದ್ದರೇ ವೀರಶೈವ ಲಿಂಗಾಯತ ಬೇರೆ ಬೇರೆ ಮಾಡಲು ಬಿಡುತ್ತಿರಲಿಲ್ಲ. ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ಉಜ್ಜಯನಿ ಮಹಾಪೀಠ ಹಾಗೂ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕಾಶಿ ಮಹಾಪೀಠ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ ಎಂ.ಬಂಡರಗಲ್ಲ.ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button