ಬ್ಯಾಡ್ ಸ್ಟೋರಿ ಯೂಟ್ಯೂಬ್ ಚಾನೆಲ್ ಬಿಡುಗಡೆ.
ಬೆಂಗಳೂರು ಜು.04

ಮನೀಶ್ ಶೆಟ್ಟಿ ನಿರ್ದೇಶನದ 15 ನೇ ಕನ್ನಡ ಕಿರುಚಿತ್ರ ಜುಲೈ 12 ರಂದು ಮನೀಶ್ ಶೆಟ್ಟಿ ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆ ಯಾಗಲಿದೆ.ಮನೀಶ್ ಶೆಟ್ಟಿ ನಿರ್ದೇಶನದ ಬ್ಯಾಡ್ ಸ್ಟೋರಿ ಕಿರು ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು, ನಿರೀಕ್ಷೆ ಮೂಡಿಸಿದೆ ನಾಯಕನೋ, ಖಳನಾಯಕನೋ ಅನ್ನೋದು ಕೊನೆವರೆಗೂ ಕುತೂಹಲದಲ್ಲಿ ಚಿತ್ರವನ್ನು ನೋಡುವಂತೆ ಮಾಡುತ್ತದೆ.ಮನೀಶ್ ಶೆಟ್ಟಿ ಅವರ 15 ನೇ ಕಿರುಚಿತ್ರ ಇದಾಗಿದ್ದು, ಸ್ವತಃ ಅವರೇ ಕಥೆ ಬರೆದು, ಅಭಿನಯ ಮಾಡುವುದರೊಂದಿಗೆ ನಿರ್ದೇಶಕನ ಕ್ಯಾಪ್ ಕೂಡ ತೊಟ್ಟಿದ್ದಾರೆ.

ಇವರಿಗೆ ಕಲಾವಿದರಾಗಿ ಇಮ್ರಾನ್ ಎಸ್.ಕೆ, ಮುರುಳಿ, ಮೌನೇಶ್ ರಾಠೋಡ್, ಚಂದನ್, ಲಕ್ಷಿತ ಪೂಜಾರಿ ಕೂಡ ಸಾಥ್ ನೀಡಿದ್ದಾರೆ.ಜೊತೆಗೆ ಸಂಗೀತ ನಿತೇಶ್ ಹರ್ಶ, ಛಾಯಾಗ್ರಾಹಕ ಮೋಹನ್ ರಾಜು, ಲಿರಿಕ್ಸ್ ಜೋಸ್ಲಿನ್ ಗಾಂಜಾ, ಮರ್ಡರ್ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಮೂವಿ ಕ್ಯಾಪ್ಚರ್ ಸ್ಟುಡೀಯೋ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದೆ.ಎಲ್ಲಾ ಪ್ರೇಕ್ಷಕರು ಈ ಕಿರುಚಿತ್ರ ನೋಡಿ ತಮ್ಮನ್ನು ಹರಸುವಂತೆ ಚಿತ್ರ ತಂಡದವರು ಮನವಿ ಮಾಡಿದ್ದಾರೆ.