“ಆರೋಗ್ಯ ಸಿಂಚನ” ವೈಯಕ್ತಿಕ ಸ್ವಚ್ಛತೆ ಜಾಗೃತಿ.
ಬಾಗಲಕೋಟೆ ಜು.04

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಹೊನ್ನಾಕಟ್ಟಿ. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, “ಆರೋಗ್ಯ ಸಿಂಚನ” ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆಯ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಎಸ್ ವಿ ದೇವಸಂಗಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿ, ಸೊಳ್ಳೆಗಳ ಕಚ್ಚುವಿಕೆಯಿಂದ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಪಾಲನೆ ಕುರಿತು ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕವಾಗಿ ಹರಡುವ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ, ಹಾಗೂ ವಾಂತಿ ಬೇಧಿ, ತಡೆಗೆ ನಾವೆಲ್ಲರೂ ಮುಂಜಾಗ್ರತೆ ಕ್ರಮಗಳ ಪಾಲಿಸುವುದು ಕಡ್ಡಾಯ. ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ನೋಡಿ ಕೊಳ್ಳಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಮನೆ ಸುತ್ತ ಮುತ್ತ ಟಾಯರ್ ಟ್ಯೂಬ್, ಟೆಂಗಿನ ಚಿಪ್ಪು ಒಡೆದ ಬಾಟಲ್, ಕಸ ವಿಲೇವಾರಿ ಮಾಡಬೇಕು ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ಪೋಷಕಾಂಶ ಯುಕ್ತ ಆಹಾರ ಸೇವನೆ ಮಾಡಬೇಕು ಶುದ್ಧ ನೀರು ಸೇವನೆ ನೀರು ಕಾಸಿ ಸೋಸಿ ಕುಡಿಯಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಆರೋಗ್ಯವಂತ ಕುಟುಂಬ ಸಮಾಜಕ್ಕಾಗಿ ಆರೋಗ್ಯ ಇಲಾಖೆಯ ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡಬೇಕು ವಯೋವೃದ್ಧರು ಚಿಕ್ಕ ಮಕ್ಕಳು ಗರ್ಭಿಣಿಯರು ಬಾಣಂತಿಯರು ಸೊಳ್ಳೆ ಪರದೆ ಬಳಸಬೇಕು. ಡೆಂಗ್ಯು ಮಹಾಮಾರಿ ತಡೆಗೆ “ಈಡೀಜ್ ಇಜಿಪ್ತೆ” ಲಾರ್ವಾ ಮುಕ್ತಕ್ಕಾಗಿ ಎಲ್ಲರೂ ಕೈಜೋಡಿಸಿ ಆರೋಗ್ಯವಂತ ಸಮಾಜ ಕಟ್ಟೋಣ ಎಂದು ಕರೆ ಕೊಟ್ಟರು. ಶಾಲಾ ಆರೋಗ್ಯ ಸಿಂಚನ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ ಗುರು ಮಾತೆಯರಾದ ಎಮ್ ಎನ್ ಬಿರಾದಾರ, ಅಶ್ವಿನಿ ಕಳ್ಳಿಮಠ, ಎಲ್ ವಿ ನಾಗಸಂಪಗಿ, ಸಹ ಶಿಕ್ಷಕ ಕೆ ಎ ಮಬ್ರುಮಕರ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಭಾಗವಹಿಸಿದ್ದರು.