ಮಾಜಿ ದೇವದಾಸಿ ತಾಯಂದಿರಿಗೆ ಕಾನೂನಿನ ಅರಿವು ನೆರವು ಕಾರ್ಯಕ್ರಮ.

ಕುಷ್ಟಗಿ ಜು.05

ಮಾಜಿ ದೇವದಾಸಿ ತಾಯಂದಿರಿಗೆ ಕಾನೂನು ನೆರವು ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಆರೋಗ್ಯ ತಪಾಸಣಾ ಶಿಬಿರ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಮಾಜಿ ದೇವದಾಸಿ ತಾಯಂದಿರ ಮಕ್ಕಳನ್ನು ಈ ಒಂದು ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಲಾಯಿತು. ಕುಷ್ಟಗಿ ತಾಲೂಕಿನ ಕೊಪ್ಪಳ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಕೊಪ್ಪಳ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕುಷ್ಟಗಿ ವಕೀಲರ ಸಂಘ ಕುಷ್ಟಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ ಕಂದಾಯ ಇಲಾಖೆ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳು (ಯೋಜನೆ 2010) ಮಾಜಿ ದೇವದಾಸಿ ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಉಚಿತ ಆರೋಗ್ಯ ಶಿಬಿರ ದಿನಾಂಕ 04/07 /2024 ಗುರುವಾರ ರಂದು ಕುಷ್ಟಗಿ ನಗರದ ವೀರ ಮಹೇಶ್ವರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಸನ್ಮಾನ್ಯ ಶ್ರೀ ಎಂ ಎಲ್ ಪೂಜೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಕುಷ್ಟಗಿ ಇವರು ಉದ್ಘಾಟನೆ ಭಾಷಣ ಮಾಡಿದರು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ಹಾಗೂ ಗೌರವಾನ್ವಿತ ಸನ್ಮಾನ್ಯ ಶ್ರೀ ಮಹಾಂತೇಶ ಚೌಳಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಉಪಸ್ಥಿತರಿದ್ದರು. ಹಾಗೂ ಶ್ರೀಮತಿ ಪೂರ್ಣಿಮಾ ಯೋಳಬಾವಿ ಯೋಜನಾಧಿಕಾರಿಗಳು ದೇವದಾಸಿ ಪುನರ್ ವಸತಿ ಯೋಜನೆ,

ಮಾಜಿ ದೇವದಾಸಿ ತಾಯಂದಿರಿಗೆ ಸರಕಾರದಿಂದ ಮಾಸಿಕ 1500 ಕೊಡುತ್ತದೆ ಹಾಗೂ ವಸತಿ ಸೌಲಭ್ಯ ಸಾಲ ಸೌಲಭ್ಯ ತಗೊಂಡು ಎಲ್ಲಾ ಮಹಿಳೆಯರಂತೆ ಮುಖ್ಯ ವಾಹಿನಿಗೆ ಬರಲು ಸಲಹೆ ನೀಡಿ ದೇವದಾಸಿ ಅನಿಷ್ಟ ಪದ್ಧತಿ ಎಲ್ಲಾದರು ಕಂಡು ಬಂದಲ್ಲೇ ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿಗಳಿಗಾಗಲಿ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಲು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ತಾಯಂದಿರಿಗೂ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಜಯ ಮಹಾಂತೇಶ ಕೆ ಕುಷ್ಟಗಿ ವಕೀಲ ಸಂಘದ ಅಧ್ಯಕ್ಷರು ಶ್ರೀ ಬಾಲಚಂದ್ರ ಸಂಗನಾಳ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಶ್ರೀ ಕೆ ಎಸ್ ರೆಡ್ಡಿ ವೈದ್ಯಾಧಿಕಾರಿಗಳು ಕುಷ್ಟಗಿ ಆರೋಗ್ಯ ತಪಾಸಣದ ಕುರಿತು ಯಾವುದೇ ಕಾಯಿಲೆಗಳಿರಲಿ ನಾಚಿಕೆ ಪಡದೆ ಸಂಕೋಚ ಪಡದೆ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ರೋಗಗಳನ್ನು ಗುಣ ಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು. ಹಾಗೂ ಕುಷ್ಟಗಿ ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ದೇವದಾಸಿ ತಾಯಂದಿರು ಕಾರ್ಯ ನಿರ್ವಹಿಸ್ತಿದ್ದು ಅವರನ್ನು ನಾವು ತುಂಬಾ ಗೌರವದಿಂದ ನೋಡುತ್ತಿದ್ದೇವೆ ಅವರು ನಮ್ಮ ಆಸ್ಪತ್ರೆಯಲ್ಲಿ ಮಾಡುವ ಕೆಲಸ ತುಂಬಾ ಶ್ಲಾಘನೀಯ ಎಂದು ಹೇಳಿದರು. ಸುಮಾರು 250 ಜನ ಮಾಜಿ ದೇವದಾಸಿ ತಾಯಂದಿರಿಗೆ ಇವತ್ತು ಆರೋಗ್ಯ ತಪಾಸಣಾ ಮಾಡಿಸಲಾಯಿತು ಐಸಿಟಿಸಿ ಡಿಪಿ ಸುಗರ್ ಜನರಲ್ ಚೆಕಪ್ ಇಂತಹ ಕಾರ್ಯಕ್ರಮ ಎಲ್ಲಾ ತಾಲೂಕಾ ಮಟ್ಟ ಜಿಲ್ಲಾ ಮಟ್ಟದಲ್ಲಿ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು. ಸತೀಶ್ ಸಿರಸ್ತೆದಾರರು ಕುಷ್ಟಗಿ ಪರಸಪ್ಪ ಎನ್ ಗುಜಮಾಗಡಿ ಅಪರ ಸರ್ಕಾರಿ ವಕೀಲರು ಶ್ರೀ ಮಾನಪ್ಪ ಪಿಎಸ್ಐ ಕ್ರೈಂ ಬ್ರಾಂಚ್ ಶಿವಕುಮಾರ್ ದೊಡ್ಮನಿ ಉಪಾಧ್ಯಕ್ಷರು ವಕೀಲರ ಸಂಘ ಬಸವರಾಜ್ ಲಿಂಗಸೂರು ಕಾರ್ಯದರ್ಶಿ, ವಕೀಲರ ಸಂಘ ಮೈನುದ್ದೀನ್ ಜಂಟಿ ಕಾರ್ಯದರ್ಶಿ ವಕೀಲರ ಸಂಘ ಚಂದುಲಿಂಗ ಕಲಾಲ ಬಂಡಿ ವಿಮಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ಅತಿಥಿ ಉಪನ್ಯಾಸಕರಾಗಿ ನಾಗರಾಜ್ ಕೆ ಮೈತ್ರಿ ಪ್ಯಾನಲ್ಲು ಇವರು ದೇವದಾಸಿ ಸಮರ್ಪಣ ನಿಷೇಧ ಕಾಯ್ದೆ ಕುರಿತು ಮಾತನಾಡಿದರು

ಹಾಗೂ ಶ್ರೀ ಬಸವರಾಜ್ ಸಾರಥಿ ವಕೀಲರು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳ ಕುರಿತು ಮಾತನಾಡಿದರು ಕಾರ್ಯಕ್ರಮ ಅಧ್ಯಕ್ಷತೆ ಶ್ರೀಮತಿ ಎಲ್ಲಮ್ಮ ಹಂಡಿ ಯೋಜನಾಧಿಕಾರಿಗಳು ವಹಿಸಿದ್ದರು ‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಕುಮಾರಿ ರಾಜೇಶ್ವರಿ ಗುಡ್ದೂರು ಕುಮಾರಿ ಕುಮಾರಿ ಶರಣಮ್ಮ ಕಾಟಾಪುರ ಮತ್ತು ಶಿವಕುಮಾರ್ ಗುಡ್ದೂರು ಮಾಜಿ ದೇವದಾಸಿ ತಾಯಿಂದರ ಮಕ್ಕಳಿಗೆ ಸನ್ಮಾನ್ಯ ಶ್ರೀ ನ್ಯಾಯಾಧೀಶರ ಮುಖಾಂತರ ಹಾಗೂ ವೇದಿಕೆ ಮೇಲಿರುವ ಎಲ್ಲಾ ಗಣ್ಯ ಮಾನ್ಯರು ಸೇರಿ ಸನ್ಮಾನ ಮಾಡಿ ಗೌರವಿಸಲಾಯಿತು ಕಾರ್ಯಕ್ರಮ ನಿರೂಪಣೆ ವೆಂಕಟೇಶ್ ಹೊಸಮನಿ ಕಲಾವಿದರು ಮಾಡಿದರು ಕಾರ್ಯಕ್ರಮ ಕಾರ್ಯಕ್ರಮ ಸ್ವಾಗತ ಮಾಡಿದರು ಶ್ರೀ ದಾದೇಸಾಹೇಬ ಹಿರೇಮನಿ ಯೋಜನಾ ಅನುಷ್ಠಾನಾಧಿಕಾರಿಗಳು ಕಾರ್ಯಕ್ರಮ ಸ್ವಾಗತ ಮಾಡಿದರು ಶ್ರೀ ಮರಿಯಪ್ಪ ಮುಳ್ಳೂರು ಯೋಜನಾ ಅನುಷ್ಠಾನಾಧಿಕಾರಿಗಳು ಕುಷ್ಟಗಿ ಕಾರ್ಯಕ್ರಮ ವಂದನಾರ್ಪಣೆ ಮಾಡಿದರು ಕೊಪ್ಪಳ ಶ್ರೀಮತಿ ರೇಣುಕಾ ಎಂ ಮಠದ್ ಯಜಮಾನಾಧಿಕಾರಿಗಳು ಯಲಬುರ್ಗಾ ಶ್ರೀಮತಿ ಸಕ್ಕುಬಾಯಿ ಯೋಜನಾ ಅನುಷ್ಠಾನಾಧಿಕಾರಿಗಳು ಕನಕಗಿರಿ ಕರ ಕಾರ್ಯಕ್ರಮದಲ್ಲಿ ಮಾಜಿದೇವದಾಸಿ ತಾಯಂದಿರು ಭಾಗವಹಿಸಿ ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button